Wednesday, December 31, 2025

 ಕಥೆ-991

ಅಡೆತಡೆಗಳು ಬಂದರೂ ನಿಲ್ಲದ ಪ್ರಯತ್ನದಿಂದ ಒಂದು ಆವಿಷ್ಕಾರ...

1940ರ ದಶಕ.

ಭಾರತಕ್ಕೆ ವಿದ್ಯುತ್ ಕೂಡ ಇಲ್ಲದ ಪ್ರದೇಶಗಳು ಅನೇಕ.

ಭಾರತದ ಅತ್ಯಂತ ಬುದ್ಧಿವಂತ ಯುವ ವಿಜ್ಞಾನಿಯೊಬ್ಬ ವಿದೇಶಕ್ಕೆ ತೆರಳುತ್ತಾರೆ..

ಅವರು ಅಣುಭೌತಶಾಸ್ತ್ರದ ತಜ್ಞ, ಆದರೆ ಅವರು ಅಲ್ಲಿ ಬಹಳ ದಿನ ವಿದೇಶದಲ್ಲಿ ಉಳಿಯಲು ಮನಸು ಮಾಡುವುದಿಲ್ಲ. ಅವರು ತಮ್ಮ ಮೇಲೆ ಮತ್ತು ದೇಶದ ಮೇಲೆ ನಂಬಿಕೆ ಇಟ್ಟಿದ್ದರು.. ಅಲ್ಲದೆ ಭಾರತದ ಸಾಮರ್ಥ್ಯದ ಬಗ್ಗೆ ಅಪಾರ ನಂಬಿಕೆ ಇಟ್ಟಿದ್ದರು.

ಮನೆಗೆ ಒಂದು ಪತ್ರ ಬರೆದು ಹೇಳಿದರು,ನಾನು ಅಣುಶಕ್ತಿಯನ್ನು ಭಾರತದಲ್ಲೇ ನಿರ್ಮಿಸುತ್ತೇನೆ...

ಅದಕ್ಕೆ ತಗಲುವ ವೆಚ್ಚದ ಪೈಸೆಯಿಲ್ಲ, ಉಪಕರಣಗಳಿಲ್ಲ, ವಿಜ್ಞಾನಿ ತಂಡವೂ ಅತಿ ಚಿಕ್ಕದು. ಆದರೂ ಅವರು *TIFR(Tata Institute of Fundamental Research)* ಸ್ಥಾಪಿಸಿದರು. ಭಾರತದ ಮೊದಲ ಅಣು ರಿಯಾಕ್ಟರ್ “Apsara” ಆರಂಭವಾಯಿತು.

ವಿಶ್ವ ಆಶ್ಚರ್ಯದಿಂದ ನೋಡಿತು...ಭಾರತವೂ ಅಣುಶಕ್ತಿ ಮಾಡಬಹುದೆಂದು.. ಆ ಯುವ ವಿಜ್ಞಾನವನ್ನು ಯಾರು ತಡೆಯಲಾರರು.

ಅವರ ದೃಷ್ಟಿ, ನಾಯಕತ್ವ ಮತ್ತು ತ್ಯಾಗ ಇಂದು ಭಾರತವನ್ನು ಅಣುಶಕ್ತಿಯಲ್ಲಿ ಬಲಿಷ್ಠ ರಾಷ್ಟ್ರವನ್ನಾಗಿಸಿದೆ. ಅವರೇ ಭಾರತದ ಹೆಮ್ಮೆಯ ವಿಜ್ಞಾನಿ *"ಡಾ|ಹೋಮಿ ಜಹಾಂಗೀರ್ ಬಾಬಾ"*

ಬೇರೆ ಯಾರೂ ನಂಬದಿದ್ದರೂ, ನಮ್ಮನ್ನು ನಾವು ನಂಬಬೇಕು, ನಮ್ಮ ನಂಬಿಕೆ ಸರಿಯಾಗಿದ್ದರೆ, ಸಮಾಜ ನಂಬುತ್ತದೆ, ದೇಶವೂ ನಂಬುತ್ತದೆ.. 

ವಿಜ್ಞಾನದಲ್ಲಿ ಹಾಸ್ಯ, ನಿಂದೆ, ವಿರೋಧ ಇದೆಲ್ಲ “ಪ್ರಗತಿಯ ಪರೀಕ್ಷೆ”. ಧೈರ್ಯದಿಂದ ನಡೆದರೆ ವಿಶ್ವವೇ ನಮಗೆ ತಲೆಬಾಗುತ್ತದೆ. ಕುತೂಹಲವಿದ್ದರೆ ಮಾತ್ರ ವಿಜ್ಞಾನ ಜೀವಂತ..

ಅಡೆತಡೆಗಳು ಬಂದರೂ ನಿಲ್ಲದ ಪ್ರಯತ್ನದಿಂದ ಒಂದು ಆವಿಷ್ಕಾರ ಆಗುತ್ತದೆ, ಅದು ಒಂದು ದೇಶವನ್ನೇ ಬದಲಾವಣೆ ಮಾಡುತ್ತದೆ ಎಂಬುದಕ್ಕೆ ಬಾಬಾ ಅವರು ಮಾದರಿಯಾಗುತ್ತಾರೆ...

 ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಜ್ಞಾನಿಯ ಕಿರಣ ಇರುತ್ತದೆ.....👍

-ಶಂಕರಗೌಡ ಬಸಾಪೂರ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು