ಕಥೆ-998
ಕಾರ್ಯರೂಪಕ್ಕೆ ಇಳಿದಾಗ ಮಾತ್ರ ಏನಾದರೂ ಸಾಧ್ಯ, ಬರೀ ಯೋಚನೆಯಿಂದಲ್ಲ.
ಜಗತ್ತಿನ ಎಲ್ಲ ಸಾಧನೆಗಳೂ ಆಗಿದ್ದು ಯೋಚನೆಗಳಿಂದ. ಆಳವಾದ ಆಲೋಚನೆಗಳು ಎಲ್ಲ ಅದ್ಭುತಗಳ ಅಡಿಪಾಯ. ಯೋಚನೆ ಮಾಡಬೇಕು. ಆದರೆ ಎಷ್ಟು ಬೇಕು ಅಷ್ಟೇ. ಬರೀ ಯೋಚಿಸುತ್ತಲೇ ಇದ್ದರೆ ಯಾವ ಕೆಲಸವೂ ಆಗುವುದಿಲ್ಲ. ಇನ್ನು ಅತಿಯಾದ ಯೋಚನೆ ಮಾಡಿದರಂತೂ ಎಲ್ಲವೂ ಗೋಜಲು ಗೋಜಲು. ಪರಿಣಾಮ ಈ ಚಿತ್ರದಲ್ಲಿ ಸ್ಪಷ್ಟ. ಯೋಚನೆ ಮಾಡಬೇಕು, ಆದರೆ ಅದನ್ನು ಕಾರ್ಯರೂಪಕ್ಕೂ ತರಬೇಕು. ಅಂದಾಗ ಅಂದುಕೊಂಡಿದ್ದು ಸಾಧ್ಯವಾಗುತ್ತದೆ.. ಅದೆಷ್ಟೋ ಸಲ ನಾವು ಯೋಚನೆಗಳಲ್ಲೇ ಸಾಧನೆ ಮಾಡಿ ಹೊಗಳಿಕೆಯನ್ನೂ ಪಡೆದು ಅಷ್ಟಕ್ಕೇ ತೃಪ್ತರಾಗಿ ಬಿಡುತ್ತೇವೆ. ಕಾರಣ ಯೋಚನೆ ಮಾಡಲು ಕಷ್ಟವಾಗುವುದಿಲ್ಲ. ಹಗಲುಗನಸು ಕಾಣಲು ಶ್ರಮ ಬೇಕಿಲ್ಲ . ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಬೆವರಿಸಳಿಸಬೇಕಾಗುತ್ತದೆ. ಹಲ್ಲು ಕಚ್ಚಿ ನೋವನ್ನು ತಡೆದುಕೊಳ್ಳಬೇಕಾಗುತ್ತದೆ. ಆದರೆ ಕೆಲಸ ಮಾಡದೇ ಇದ್ದರೆ ಯಾವ ಸಾಧನೆಯೂ ಸಾಧ್ಯವಿಲ್ಲ. ಬರೀ ಯೋಚನೆಯನ್ನು ಬಿಟ್ಟು ನಮ್ಮ ಯೋಚನೆಯ ಒಂದಂಶವನ್ನಾದರೂ ಕಾರ್ಯರೂಪಕ್ಕೆ ತರಲು ಪ್ರಯತ್ನಿಸೋಣ. ಅಲ್ವಾ?
- ದೀಪಾಹಿರೇಗುತ್ತಿ
