ಕಥೆ-197
ಬೆಲೆಯನ್ನು ಕಳೆದುಕೊಳ್ಳುವುದಿಲ್ಲ
ಒಬ್ಬ ವ್ಯಕ್ತಿ 200 ಜನ ಇರುವ ರೂಮಲ್ಲಿ ಉಪನ್ಯಾಸ ನೀಡುತ್ತಿದ್ದಾನೆ. ತನ್ನ ಜೇಬಿನಲ್ಲಿರುವ 500 ರೂಪಾಯಿಯ ನೋಟು ತೆಗೆದು ಇದು ಯಾರಿಗೂ ಬೇಕು ಎಂದು ಕೇಳಿದ. ಅಲ್ಲಿರುವ ಎಲ್ಲರೂ ತಮಗೆ ಬೇಕು ಎಂದು ಕೈ ಮೇಲೆ ಎತ್ತಿದರು. ಸರಿ ಈ 500 ರೂಪಾಯಿಯನ್ನು ನಿಮ್ಮಲ್ಲಿ ಒಬ್ಬರಿಗೆ ಕೊಡುತ್ತೇನೆ ಎನ್ನುತ್ತಾ ಅದನ್ನು ಸಣ್ಣದಾಗಿ ಸುಕ್ಕಾಗುವಂತೆ ಮಡಚಿದನು. ಮತ್ತೆ ಯಾರಿಗೆ ಬೇಕು ಎಂದು ಕೇಳಿದನು. ಎಲ್ಲರೂ ತಮಗೆ ಬೇಕು ಎಂದು ಕೈ ಎತ್ತಿದರು. ಸರಿ ಎನ್ನುತ್ತಾ ಆ 500 ರೂಪಾಯಿಯನ್ನು ಕೆಳಗೆ ಹಾಕಿ ತನ್ನ ಕಾಲಿನಿಂದ ತುಳಿದು ಉಂಡೆ ಮಾಡಿದನು. ಆಗ ಆ ಸಾವಿರ ರೂಪಾಯಿ ನೋಟು ವೆಸ್ಟ್ ಪೇಪರ್'ನಂತೆ ಕಾಣತೋಡಗಿತು. ಮತ್ತೆ ಎಷ್ಟು ಜನಕ್ಕೆ ಬೇಕು ಎಂದು ಕೇಳಿದ. ಈಗ ಕೂಡ ಎಲ್ಲರೂ ತಮ್ಮ ಕೈಗಳನ್ನು ಮೇಲೆ ಎತ್ತಿದರು.
ಆಗ ಆ ವ್ಯಕ್ತಿ ಹೀಗೆ ಹೇಳಿದ...
ಈಗ ನೀವು ಒಳ್ಳೆಯ ಪಾಠವನ್ನು ಕಲಿತುಕೊಂಡಿದ್ದಿರ....
ಇಲ್ಲಿಯವರೆಗೂ ಈ 500 ರೂಪಾಯಿ ನೋಟನ್ನು ಏನೂ ಮಾಡಿದರೂ ನೀವೆಲ್ಲ ನನಗೆ ಬೇಕು ನನಗೆ ಬೇಕು ಎಂದು ಹೇಳಿದಿರಿ. ಯಾಕೆಂದರೆ ಏನೇ ಮಾಡಿದರೂ ಈ 500 ರೂಪಾಯಿ ಬೆಲೆ ಕಡಿಮೆಯಾಗಲ್ಲಿಲ್ಲ. ಇದು ಯಾವಾಗಲೂ ಕೂಡ 500 ರೂಪಾಯಿಯೇ.
ಹಾಗೆಯೇ ನಮ್ಮ ಜೀವನ ಕೂಡ. ಬಹಳ ಸಂದರ್ಭಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಎಷ್ಟೋ ತೊಂದರೆಗಳನ್ನು ಅನುಭವಿಸುತ್ತೆವೆ. ಕೆಲವು ಸಲ ಕೆಳಗೆ ಬಿದ್ದುಬಿಡುತ್ತೆವೆ. ನಮ್ಮ ಜೀವನ ಮುಗಿಯಿತು ನಮಗಿನ್ನು ಬೆಲೆ ಇಲ್ಲ ಎಂದುಕೊಳ್ಳುತ್ತೇವೆ. ಕೆಲವು ಸಲ ನಮ್ಮಷ್ಟಕ್ಕೆ ನಾವೇ ಏನೂ ಕೆಲಸಕ್ಕೆ ಬಾರದವರು ಎಂದು ನಿರ್ಧಾರಿಸಿಬಿಡುತ್ತೆವೆ. ಆದರೆ ನಮ್ಮಿಂದ ಏನು ತಪ್ಪಾಗಿದೆ ಎಂದು ನಾವು ಯೋಚಿಸುದಿಲ್ಲ.
"ಪ್ರತಿಯೊಬ್ಬರೂ ತಮ್ಮ ಬೆಲೆಯನ್ನು ಕಳೆದುಕೊಳ್ಳುವುದಿಲ್ಲ" "ಪ್ರತಿಯೊಬ್ಬರೂ ಮಹಾನ್ ವ್ಯಕ್ತಿ".... ಅದು ಉತ್ತಮ ಹೆಜ್ಜೆಗಳನ್ನು ಇಟ್ಟಾಗ ಮತ್ತು ನಮ್ಮ ತಪ್ಪುಗಳನ್ನು ತಿದ್ದಿಕೊಂಡಾಗ ಮಾತ್ರ...ಸಾಧ್ಯ.
💐💐💐💐💐
ಕೃಪೆ: ನೆಟ್.