ಕಥೆ-987
ಪರಿಶ್ರಮದಿಂದ ಮಹಾನ್ ವಿಜ್ಞಾನಿಯಾದ ಕಥೆ (ಭಾಗ-1)
https://basapurs.blogspot.com
1643ರಲ್ಲಿ ಇಂಗ್ಲೆಂಡ್‌ನ ವೂಲ್ಸ್‌ಥಾರ್ಪ್ ಎಂಬ ಒಂದು ಸಣ್ಣ ಹಳ್ಳಿಯಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಹುಡುಗ. ಹುಟ್ಟುವಾಗಲೇ ತುಂಬಾ ದುರ್ಬಲನಾಗಿದ್ದ. ತಂದೆಯನ್ನು ಹುಟ್ಟುವ ಮೊದಲು ಕಳೆದುಕೊಂಡ, ತಾಯಿಯಿಂದಲೂ ದೂರವಾಗಿ ಅಜ್ಜಿ ಜೊತೆ ಬೆಳೆದ. ಶಾಲೆಯಲ್ಲಿ ಅತ್ಯುತ್ತಮ ವಿದ್ಯಾರ್ಥಿಯಲ್ಲ, ಕೆಲವೊಮ್ಮೆ ಸಹಪಾಠಿಗಳು ಹಾಸ್ಯ ಮಾಡುತ್ತಿದ್ದರು. ಓದು ಕಡಿಮೆ ಆದರೆ ಯೋಚನೆ ಮತ್ತು ಪ್ರಯೋಗಗಳ ಮೇಲೆ ಅಪಾರ ಆಸಕ್ತಿ ಇತ್ತು. ಇತರ ಮಕ್ಕಳು ಆಟವಾಡುತ್ತಿದ್ದಾಗ, ಚಕ್ರ, ಗಡಿಯಾರ, ಸಣ್ಣ ಯಂತ್ರ ತಯಾರಿಸುವ ಪ್ರಯತ್ನ ಮಾಡುತ್ತಿದ್ದ. ಅವನಲ್ಲಿ ಅಪಾರವಾದ ಮತ್ತು ವಿಭಿನ್ನವಾದ ಕುತೂಹಲ ಕಾಡುತ್ತಿತ್ತು, ಅದು ಅವನನ್ನು ವಿಭಿನ್ನನನ್ನಾಗಿಸಿತು.
ಒಂದು ದಿನ ತೋಟದಲ್ಲಿ ಕುಳಿತಿದ್ದಾಗ ಸೇಬು ಮರದಿಂದ ಕೆಳಗೆ ಬಿದ್ದಿತು. ಈ ಸಾಮಾನ್ಯ ಘಟನೆ ಅವನ ಮನಸ್ಸಿನಲ್ಲಿ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿತು –
“ಸೇಬು ಕೆಳಗೆ ಮಾತ್ರ ಏಕೆ ಬೀಳುತ್ತದೆ? ಮೇಲಕ್ಕೆ ಏಕೆ ಹೋಗುವುದಿಲ್ಲ?”
ಈ ಪ್ರಶ್ನೆಯಿಂದಲೇ ಗುರುತ್ವಾಕರ್ಷಣ ಶಕ್ತಿಯ ಸಿದ್ಧಾಂತ ಜನ್ಮವಾಯಿತು.
ಇದೆಲ್ಲ ಸಾಧ್ಯವಾಗಿದ್ದು
ಜಗತ್ತಿನ ಅತ್ಯಂತ ಮಹಾನ್ ವಿಜ್ಞಾನಿಗಳಲ್ಲಿ ಒಬ್ಬರು ಎಂದರೆ ನಂಬಲು ಕಷ್ಟ, ಅಲ್ಲವೇ? ಆ ವಿಜ್ಞಾನಿಯೇ ಸರ್ ಐಸಾಕ್ ನ್ಯೂಟನ್.
ನ್ಯೂಟನ್ ಅವರು ನಂತರ ಗಣಿತ, ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಅದ್ಭುತ ಸಾಧನೆಗಳನ್ನು ಮಾಡಿದರು. ಚಲನ ನಿಯಮಗಳು, ಕ್ಯಾಲ್ಕುಲಸ್, ಬೆಳಕಿನ ಅಧ್ಯಯನ, ಇವುಗಳು ಇಂದಿಗೂ ವಿಜ್ಞಾನದ ಅಡಿಪಾಯವಾಗಿವೆ.
ಕುತೂಹಲವೇ ಜ್ಞಾನಕ್ಕೆ ದಾರಿ,
ಪರಿಶ್ರಮ ಮತ್ತು ಸಹನೆ ಯಶಸ್ಸಿನ ಕೀಲಿಕೈ, ಪ್ರಶ್ನೆ ಕೇಳುವುದೇ ಕಲಿಕೆಯ ಮೊದಲ ಹೆಜ್ಜೆ ಬಡತನದ ಹಿನ್ನೆಲೆ ದೊಡ್ಡ ಸಾಧನೆಗೆ ಅಡ್ಡಿಯಲ್ಲ
ವಿದ್ಯಾರ್ಥಿಗಳಲ್ಲಿ ಸಂಶೋಧಕರು ಆಗುವ ಶಕ್ತಿ ಇದೆ. ಕನಸು ನನಸಾಗುತ್ತ ಶ್ರಮಿಸಿದಗ ಮಾತ್ರ ಸಾಧ್ಯ..
-ಶಂಕರಗೌಡ ಬಸಾಪೂರ