Tuesday, January 6, 2026

 ಕಥೆ-974

ಅತ್ಯುನ್ನತ ಸ್ಥಾನ..

https://basapurs.blogspot.com


ಸೌದಿ ಅರೇಬಿಯಾದಲ್ಲಿ ಇಬ್ಬರು ಸಹೋದರರು ನ್ಯಾಯಾಲಯದ ಕಟಕಟೆಯೇರಿದ ಈ ಸತ್ಯ ಕಥೆ ಸಂಪೂರ್ಣ ಭಿನ್ನ.


ಹಿಜಾಮ್ ಅಲ್-ಘಮ್ಡಿ ಎಂಬ ವ್ಯಕ್ತಿ ತನ್ನ ಕಿರಿಯ ಸಹೋದರನ ವಿರುದ್ಧ ನ್ಯಾಯಾಲಯಕ್ಕೆ ಹೋಗುತ್ತಾರೆ. ಇತರ ಸಹೋದರರಂತೆ ಜಗಳವಾಡಲು ಅಲ್ಲ. ಇಬ್ಬರೂ ತಮ್ಮ ವೃದ್ದೆ ತಾಯಿಯನ್ನು ನೋಡಿಕೊಳ್ಳುವ ಹಕ್ಕಿಗಾಗಿ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡುತ್ತಾರೆ. 


ಹಿಜಾಮ್ ಅಲ್ ಘಾಮ್ದಿ ತಾನೇ ಕೊನೆಯ ತನಕ ತಾಯಿಯ ಆರೈಕೆಯನ್ನು ಮುಂದುವರಿಸಲು ಅನುಮತಿಸುವಂತೆ ನ್ಯಾಯಾಲಯವನ್ನು ಕೇಳಿಕೊಂಡರೆ, ಹಿಜಾಮ್ ಅಲ್ ಘಾಮ್ದಿಗೆ ತುಂಬಾ ವಯಸ್ಸಾಗಿದ್ದು, ಈ ಪ್ರಾಯದಲ್ಲಿ ಆತನಿಗೆ ವಿಶ್ರಾಂತಿಯ ಅವಶ್ಯಕತೆ ಇರುವುದರಿಂದ ತನ್ನ ತಾಯಿಯನ್ನು ನೋಡಿಕೊಳ್ಳಲು ತನಗೆ ಅವಕಾಶ ನೀಡುವಂತೆ ಕಿರಿಯ ಸಹೋದರ ನ್ಯಾಯಾಲಯದ ಮೊರೆ ಹೋಗಿದ್ದ.


ಇಬ್ಬರೂ ತಮ್ಮ ತಾಯಿಯ ಸೇವೆ ಮಾಡಲು ಅವಕಾಶಕ್ಕಾಗಿ ಮನವಿ ಮಾಡಿದಾಗ ನ್ಯಾಯ ನೀಡಬೇಕಾದ ನ್ಯಾಯಾಧೀಶರೇ ಒಂದು ಕ್ಷಣ ಭಾವುಕರಾಗಿ ಕಣ್ಣೀರಿಟ್ಟರು. ನ್ಯಾಯಾಧೀಶರು ಈರ್ವರು ಮಕ್ಕಳ ಸಮಕ್ಷಮ ತಾಯಿಯ ಆಯ್ಕೆಯನ್ನು ಕೇಳಿದರು. ಆಗ ಮಕ್ಕಳ ಪ್ರೀತಿ ನೋಡಿ ತಾಯಿಗೆ ಸಂತೋಷದಿಂದ ಮಾತೇ ಹೊರಡಲಿಲ್ಲ. ಸ್ವಲ್ಪ ತಡವರಿಸಿದ ತಾಯಿ ಕಣ್ಣೀರಿಡುತ್ತಾ ನ್ಯಾಯಾಧೀಶರಲ್ಲಿ ಹೇಳಿದರು ‘ ನನ್ನ ಎರಡೂ ಮಕ್ಕಳು ನನ್ನ ಎಡ ಹಾಗೂ ಬಲ ಕಣ್ಣಿದ್ದಂತೆ’. ಇದನ್ನು ಕೇಳಿ ವಿಚಲಿತರಾದ ನ್ಯಾಯಾಧೀಶರು ಏನು ನಿರ್ಧಾರ ನೀಡಬೇಕೆಂದು ತೋಚದೆ ಪೇಚಿನಲ್ಲಿ ಸಿಲುಕಿದರು. ಆದರೂ ಕೂಡ ಶರೀಯಾ ಕಾನೂನಿನ ನ್ಯಾಯ ನೀಡಲೇ ಬೇಕಾದ ನ್ಯಾಯಾಧೀಶರು ನೀಡಿದ ಆದೇಶ ನೋಡಿ….” ಹಿಜಾಮ್ ಅಲ್ ಘಾಮ್ದಿ ತನ್ನ ಈ ವೃದ್ಯಾಪ್ಯದ ತನಕ ತನ್ನ ತಾಯಿಯನ್ನು ಚೆನ್ನಾಗಿ ನೋಡಿಕೊಂಡನು. ಈಗ ಕಿರಿಯ ಮಗನ ಸಲಹೆಯಂತೆ ಹಿಜಾಮ್ ಗೆ ವಿಶ್ರಾಂತಿಯ ಅಗತ್ಯತೆಯಿದೆ. ಕಿರಿಯ ಮಗ ಇನ್ನೂ ಕೂಡ ತಾಯಿಯನ್ನು ಸಾಕಲು ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುವ ಕಾರಣ , ಕಿರಿಯ ಸಹೋದರಿನಿಗೆ ಮುಂದಕ್ಕೆ ತಾಯಿಯನ್ನು ನೋಡಿಕೊಳ್ಳುವಂತೆ ಸಲಹೆಯನ್ನು ನೀಡುತ್ತಿದ್ದೇನೆ. ತನ್ನ ವಯಸ್ಸಿನ ಕಾರಣದಿಂದಾಗಿ ಕಿರಿಯ ಸಹೋದರನ ಪರವಾಗಿ ತೀರ್ಪು ಪ್ರಕಟವಾದಾಗ, ಹಿಜಾಮ್ ಕಣ್ಣೀರು ಹಾಕಿದರು - ಕೋಪದಿಂದಲ್ಲ, ಆದರೆ ತನ್ನ ಕೊನೆಯ ವರ್ಷಗಳಲ್ಲಿ ತನ್ನ ತಾಯಿಯ ಸೇವೆಯನ್ನು ಮುಂದುವರಿಸುವ ಅವಕಾಶವನ್ನು ಕಳೆದುಕೊಂಡಿದ್ದೇನಲ್ಲಾ ಎಂದು ಹಿದಾಮ್ ಕೋರ್ಟ್ ಆವರಣದಲ್ಲಿ ಕಣ್ಣೀರಿಟ್ಟರು. ಆದರೆ ಒಂದಂತೂ ಸತ್ಯ ಈ ಲೋಕದಲ್ಲಿ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಂಡವರು ಯಾರೂ ಸೋತು ಹೋಗಿಲ್ಲ. ಹಿಜಾಮ್ ಕೂಡ ಹಾಗೆಯೇ , ನ್ಯಾಯಾಲಯದಲ್ಲಿ ಕ್ಷಣಿಕ ಸೋಲನ್ನು ಕಂಡಿರಬಹುದು ಆದರೆ ಸರ್ವಶಕ್ತನ ನ್ಯಾಯಾಲಯದಲ್ಲಿ ನಾಳೆ ಹಿಜಾಮ್ ನಂತಹವರಿಗೆ ಅತ್ಯುನ್ನತ ಸ್ಥಾನ ಲಭಿಸುವುದಂತೂ ಸತ್ಯ.


-ಎಸ್.ಎ.ರಹಿಮಾನ್ ಮಿತ್ತೂರು

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು