ಕಥೆ-1030
ಲೈಫಲ್ಲಿ ಗೆಲ್ಲಬೇಕು ಅನ್ನೋರು ಇದನ್ನ ಮಿಸ್ ಮಾಡದೇ ಓದಬೇಕು..( ಸರಣಿ-2)
ಸೋಲು ನಿಮ್ಮನ್ನು ಸೋಲಿಸುವ ಮುನ್ನ, ನೀವೇ ಸೋಲನ್ನು ಸೋಲಿಸಿಬಿಡಿ..!
ಜ್ಯಾಕ್ ಮಾ ಅಂತ ಒಂದು ಹೆಸರು ಕೇಳಿರಬೇಕು ನೀವು. ಅವರು ಚೀನಾದ ಅತ್ಯಂತ ಶ್ರೀಮಂತ..! ಆಲಿಬಾಬಾ ಡಾಟ್ ಕಾಮ್ ಸಂಸ್ಥೆಯ ಚೇರ್ಮನ್..! ಇವತ್ತು ಅವರ ಆಸ್ತಿ ಅದೆಷ್ಟೋ ಸಾವಿರ ಸಾವಿರ ಕೋಟಿ..! ಅವರು ಆ ಸಾವಿರ ಸಾವಿರ ಕೊಟಿ ಇವತ್ತು ಅನುಭವಿಸ್ತಿರಬಹುದು. ಆದ್ರೆ ಅದರ ಹಿಂದೆ ಸೋತಿದ್ದು ಎಷ್ಟು ಸಲ ಗೊತ್ತಾ.. ಲೆಕ್ಕವೇ ಇಲ್ಲದಷ್ಟು ಸಲ..! ನಿನ್ ಕೈಲಿ ಏನಾಗುತ್ತೆ ಹೋಗಲೆ ಅಂತ ಅವರನ್ನು ಕಾಲೆಳೆದವರು ಇವತ್ತು ಅವರದೇ ಆಫೀಸಲ್ಲಿ ಕೆಲಸ ಮಾಡ್ತಿದ್ದಾರೆ.. ಬರೀ 12 ಡಾಲರ್ ಸಂಬಳಕ್ಕೆ ಟೀಚರ್ ಕೆಲಸ ಮಾಡ್ತಿದ್ದವರು ಇವತ್ತು 15-20 ಸಾವಿರ ಜನರಿಗೆ ಕೆಲಸ ಕೊಟ್ಟಿದ್ದಾರೆ.. ಪ್ರತಿಷ್ಟಿತ ಕೆ.ಎಫ್.ಸಿ ಸಂಸ್ಥೆ, ಅವರನ್ನು ಸರ್ವರ್ ಆಗಿಯೂ ಕೆಲಸಕ್ಕೆ ಸೇರಿಸಿಕೊಂಡಿರಲಿಲ್ಲ..! ಆದ್ರೆ ಇವತ್ತು ಆ ಸೋಲಿಗೆ ಹೆದರದೇ ಇದ್ದ ಕಾರಣಕ್ಕೆ ಎತ್ತರೆತ್ತಕ್ಕೆ ಏರಿದ್ದಾರೆ.. ಅವತ್ತು ಜ್ಯಾಕ್ ಮಾ ಜೊತೆ ಕೆ.ಎಫ್.ಸಿ ಗೆ 24 ಜನ ಕೆಲಸಕ್ಕೆ ಟ್ರೈ ಮಾಡಿದ್ರು. ನೀವು ನಂಬ್ತಿರೋ ಬಿಡ್ತಿರೋ, ಆ 23 ಜನಾನೂ ಸೆಲೆಕ್ಟ್ ಆಗಿದ್ರು. ಆದ್ರೆ ಜಾಕ್ ಮಾ ಆಗಿರಲಿಲ್ಲ..! ಅಯ್ಯೋ ನಾನು ಸೋತುಬಿಟ್ಟೆ ಅಂತ ಅವರೇನಾದ್ರೂ ಅನ್ಕೊಂಡಿದ್ದಿದ್ರೆ ಇವತ್ತು ಅಲಿಬಾಬಾ ಡಾಟ್ ಕಾಮ್ ಎಲ್ಲಿರ್ತಿತ್ತು..?
ಗೆದ್ದಾಗ ಹೆಂಗೆ ಗೆಲ್ಲಬೇಕು ಅನ್ನೋದು ಗೊತ್ತಾದ್ರೆ, ಸೋತಾಗ ಇನ್ನು ಮುಂದೆ ಹೇಗೆ ಸೋಲಬಾರದು ಅನ್ನೋದು ಗೊತ್ತಗುತ್ತೆ..! ಸೋ ಸೋಲು ಅಂದ್ರೆ ಗೆಲ್ಲೋ ರೋಡಿನ ಹಂಪ್ ಗುಂಡಿ ಅಷ್ಟೆ..! ಅಯ್ಯೋ ಹೆಂಗಪ್ಪಾ ಈ ಗುಂಡಿ ದಾಟೋದು, ಹೆಂಗಪ್ಪಾ ಹಂಪ್ ಎಗರಿಸೋದು ಅಂತ ಯೋಚನೆ ಮಾಡ್ತಾ ಕೂತ್ರೆ ನಾವು ಯಾವತ್ತೂ ಗುರಿ ಮುಟ್ಟೋಕೆ ಸಾಧ್ಯಾನೇ ಆಗಲ್ಲ..!
ಮುಂದುವರೆಯುವುದು....