Wednesday, February 11, 2026

 ಕಥೆ-1033

ಭಯ ನಿಲ್ಲಿಸುತ್ತದೆ, ಆಲಸ್ಯ ಕಟ್ಟಿಹಾಕುತ್ತದೆ

ಭಯ ಎನ್ನುವುದು ನಮ್ಮ ಮನಸ್ಸಿನಲ್ಲಿರುವ ಕಲ್ಪಿತ ಶತ್ರು.

ಅದು “ನನ್ನಿಂದ ಆಗಲ್ಲ” ಅಂತಾ ನಮ್ಮೊಳಗೇ ವಿಷ ಬಿತ್ತುತ್ತದೆ.

ಭಯ ನಮ್ಮ ಶಕ್ತಿಯನ್ನು ಕಸಿದುಕೊಳ್ಳುತ್ತದೆ, ಅದೇ ಧೈರ್ಯ ನಮ್ಮ ಭವಿಷ್ಯವನ್ನು ನಿರ್ಮಿಸುತ್ತದೆ.


“ಭಯವನ್ನು ಎದುರಿಸಿದ ಕ್ಷಣದಲ್ಲೇ, ಯಶಸ್ಸು ನಮ್ಮ ಕಡೆಗೆ ಒಂದು ಹೆಜ್ಜೆ ಇಡುತ್ತದೆ.ನಿಲ್ಲಿಸುವುದು ಭಯದಿಂದಾದರೆ, ಸೋಲು ನಮ್ಮದೇ

ಆಲಸ್ಯ ಎನ್ನುವುದು ಕಾಣದ ಬಂಧನ.

ಗುರಿ ಗೊತ್ತಿದ್ದರೂ, ಮೊದಲ ಹೆಜ್ಜೆ ಇಡದಂತೆ ನಮ್ಮನ್ನು ತಡೆಯುತ್ತದೆ.

ಆಲಸ್ಯ ಇಂದು ಆರಾಮ ಅನ್ನಿಸುತ್ತದೆ, ನಾಳೆ ಪಶ್ಚಾತ್ತಾಪ ಕೊಡುತ್ತದೆ. ಆಲಸ್ಯ ಯಶಸ್ಸಿನ ಅತಿದೊಡ್ಡ ಶತ್ರು. ನಾಳೆ ಮಾಡೋಣ ಅನ್ನೋ ಆಲೋಚನೆ,ನಮ್ಮ ಕನಸುಗಳನ್ನು ಕೊಲ್ಲುತ್ತದೆ.

ಆಲಸ್ಯದಿಂದ ದೂರ ಉಳಿದವನೇ, ಗುರಿಗೆ ಹತ್ತಿರವಾಗುತ್ತಾನೆ.

ಈ ಭಯ & ಆಲಸ್ಯ ಎರಡೂ ಹೊರಗಿನಿಂದ ಬಂದ ಶತ್ರುಗಳಲ್ಲ,

ನಮ್ಮೊಳಗೇ ಹುಟ್ಟುವ ಅಡ್ಡಿಗಳು. ಭಯವನ್ನು ಧೈರ್ಯದಿಂದ, ಆಲಸ್ಯವನ್ನು ಶ್ರಮದಿಂದ ಸೋಲಿಸಬೇಕು.

ಭಯವನ್ನು ಧೈರ್ಯದಿಂದ ಎದುರಿಸಿ,

ಆಲಸ್ಯವನ್ನು ಶಿಸ್ತು (Discipline) ಮೂಲಕ ಸೋಲಿಸಿದವನು

ಪರಿಸ್ಥಿತಿಯನ್ನು ಅಲ್ಲ 

ಜೀವನವನ್ನು ಆಳುತ್ತಾನೆ. ಕನಸನ್ನು ನನಸು ಮಾಡಿಕೊಳ್ಳುತ್ತಾನೆ..


ಕೃಪೆ- ಅಂತರ್ಜಾಲ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು