Thursday, December 23, 2021

 🌷ವಿಶ್ವಗುರು ಬಸವಣ್ಣನವರ 🙏 ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’





ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,

ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,

ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. 

ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.

ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡಿಯಲ್ಲಿ ಬರುವ ಸೆಕ್ಷನ್ಸ್….👇🏻




🌸೧)ಕಳಬೇಡ, ಕಳ್ಳತನ ಮಾಡಬೇಡ ಇದು ಐಪಿಸಿ ಸೆಕ್ಷನ್- 378ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.




🌸೨) ಕೊಲಬೇಡ, ಜೀವಹತ್ಯೆ ಮಾಡಬೇಡ ಇದು ಐಪಿಸಿ ಸೆಕ್ಷನ್- 300ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.




🌸೩)ಹುಸಿಯ ನುಡಿಯಲು ಬೇಡ, ಸುಳ್ಳು ಹೇಳಬೇಡ ಇದು ಐಪಿಸಿ ಸೆಕ್ಷನ್ - 415 ಮತ್ತು 420ರ ಪ್ರಕಾರ ಅಪರಾಧವಾಗಿದೆ.




🌸೪)ಮುನಿಯಬೇಡ,


ಇದು ಐಪಿಸಿ ಸೆಕ್ಷನ್ - 319ರ ಪ್ರಕಾರ ಇದು ಇನ್ನೊಬ್ಬರ ಮನಸ್ಸಿದೆ ನೋವುಂಟು (hurt)ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.




🌸೫)ಅನ್ಯರಿಗೆ ಅಸಹ್ಯಪಡಬೇಡ,


ಇದು ಐಪಿಸಿ ಸೆಕ್ಷನ್- 295, 295A, 296, 297, 298,ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ




🌸೬) ತನ್ನ ಬಣ್ಣಿಸಬೇಡ,


ಇದು ಐಪಿಸಿ ಸೆಕ್ಷನ್-192, 


ಪ್ರಕಾರ ತನ್ನ ಬಣ್ಣಿಸಿಕೊಂಡು ಸುಳ್ಳು ಸಾಕ್ಷಿ ಹೇಳಿಕೊಳ್ಳುವುದು ಇದು ಅಪರಾಧವಾಗಿದೆ.




🌸೭)ಇದಿರ ಹಳಿಯಲು ಬೇಡ.


ಇದು ಐಪಿಸಿ ಸೆಕ್ಷನ್ -499ರ ಪ್ರಕಾರ ಇದು ಮಾನನಷ್ಟ, ಮೊಕದ್ದಮೆ ಅಪರಾಧವಾಗಿದೆ.




ಈ ಸಪ್ತಸೂತ್ರಗಳನ್ನು ಅಳವಡಿಸಿಕೊಂಡಲ್ಲಿ 


ನಿನಗಾವ ಭಯವಿಲ್ಲ,


ಇದೇ ಅಂತರಂಗಶುದ್ಧಿ,


ಇದೇ ಬಹಿರಂಗಶುದ್ಧಿ ,


ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ, ಎಂದು ಹೀಗೆ ಜಗತ್ತಿನ ಯಾರೂ ಯೋಚಿಸದ ಯೋಜಿಸದ ರೀತಿಯಲ್ಲಿ,


೯೦೦ ವರ್ಷಗಳ ಹಿಂದೆಯೇ ಕಾನೂನು,ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ, ಅರ್ಥಿಕತೆ, ಶಿಕ್ಷಣ, ಜ್ಞಾನ ವಿಜ್ಞಾನದ ಪರಿಕಲ್ಪನೆಯಲ್ಲಿ ಅನುಭವ ಮಂಟಪ ಎಂಬ ಸಂಸತ್ತನ್ನು ರಚಿಸಿ ಅಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿ ಪ್ರಸ್ಥಾಪಿಸಿ ಅನುಷ್ಟಾನಕ್ಕೆ ತಂದರು ಬಸವಾದಿ ಶರಣರು,


ಯಾವ ದೇಶದಲ್ಲೂ , ಎಲ್ಲೂ ಕೂಡ, ಯಾವ ಕಾನೂನು ರಚನೆಯಾಗದ ಮುನ್ನವೇ ಈ ರೀತಿಯಲ್ಲಿ ಅತ್ಯಂತ ವೈಜ್ಞಾನಿಕವೂ, ಸರ್ವಕಾಲಿಕ ಸತ್ಯವೂ, ವಾಸ್ತವವೂ ಆದ ವಚನಗಳ ಮೂಲಕ ಜನರಲ್ಲಿ ಜಾಗ್ರತಿ ಮೂಡಿಸಿದ,


ಜಗತ್ತಿನ ಪ್ರಥಮ ಪ್ರಜಾಸತ್ತಾತ್ಮಕ ಚಿಂತಕರು ದಾರ್ಶನಿಕರು ಯಾರೆಂದರೆ, ಅವರೇ ಭಾರತವನ್ನು ವಿಶ್ವಗುರುವಾಗಿಸಿದ ಮಹಾಮಾನವತಾವಾದಿ,


ವಿಶ್ವಗುರು ಜಗಜ್ಯೋತಿ ಭಕ್ತಿಭಂಡಾರಿ ಬಸವಣ್ಣನವರು🙏.👏🏻👏🏻👏🏻👏🏻




ಬರಿ ಭಾರತಕ್ಕೆ ಮಾತ್ರವಲ್ಲ , ಇಡೀ ಈ ವಿಶ್ವಕ್ಕೆ ಗುರು, ನಮ್ಮ ಅಣ್ಣಾ ಬಸವಣ್ಣನವರು..🙏🏻🙏🏻💞🙏🏻🙏🏻🌹


 ✍🏾-; ಲೋಕೇಶ್ ಎನ್ ಮಾನ್ವಿ.

          


         ಅಂಜಲಿ ಚನ್ನಬಸಪ್ಪಗೋಳ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು