ತುಂಬಾ ಹಿಮ ಸುರಿಯುತ್ತಿದ್ದ ಆ ಒಂದು ತಂಪಾದ ರಾತ್ರಿ,
ಕೋಟ್ಯಾಧಿಪತಿಯೊಬ್ಬ ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿ ಹೊರಗೆ ಒಬ್ಬ ಬಡ ಮುದುಕನನ್ನು ಭೇಟಿಯಾದ. ಅವನು ಮುದುಕನನ್ನು ಕೇಳಿದ, "ನಿನಗೆ ಈ ಮೈಕೊರೆವ ಚಳಿಯ ಅನುಭವವಾಗುತ್ತಿಲ್ಲವೇ? ನೀನು ಬೆಚ್ಚಗಿನ ಸ್ವೆಟರ್-ಟೋಪಿ ಅಥವಾ ಕೋಟ್ ಕೂಡ ಧರಿಸಿಲ್ಲ?"
ಆ ಮುದುಕ ಉತ್ತರಿಸಿದ, "ನನ್ನ ಬಳಿ ಬೆಚ್ಚಗಿನ ಸ್ವೆಟರ್-ಟೋಪಿ, ಕೋಟ್ ಇಲ್ಲ. ಆದರೆ ನನಗೆ ಚಳಿಯನ್ನು ಸಹಿಸಿಕೊಳ್ಳುವ ಅಭ್ಯಾಸವಾಗಿದೆ, ನಾನು ಅದಕ್ಕೆ ನನ್ನ ದೇಹವನ್ನು ಒಗ್ಗಿಸಿಕೊಂಡಿದ್ದೇನೆ" ಎಂದ.
ಆಗ ಆ ಕೋಟ್ಯಾಧಿಪತಿ ಆ ಮುದುಕನಿಗೆ ಹೇಳಿದ -
"ನೀನು ಎಲ್ಲೂ ಹೋಗಬೇಡ, ಇಲ್ಲೇ ನನಗಾಗಿ ಕಾಯುತ್ತಿರು , ನಾನು ಈಗ ನನ್ನ ಮನೆಗೆ ಹೋಗುತ್ತೇನೆ ಮತ್ತು ನಿನಗಾಗಿ ಬೆಚ್ಚಗಿನ ಸ್ವೆಟರ್-ಟೋಪಿ ಕೋಟ್ ತೆಗೆದುಕೊಡುತ್ತೇನೆ ಎಂದು ಹೇಳಿ ತನ್ನ ಮನೆಯತ್ತ ಹೊರಟ, ಆ ಬಡಮುದುಕನಿಗೆ ತುಂಬಾ ಸಂತೋಷವಾಯಿತು ಮತ್ತು ಅವನಿಗಾಗಿ ಕಾಯುತ್ತೇನೆ ಎಂದು ಹೇಳಿದ.
ಆ ಕೋಟ್ಯಾಧಿಪತಿ ತನ್ನ ಮನೆಯತ್ತ ಸರಸರನೆ ಹೋದ, ಮನೆಯೊಳಗೇ ಹೋದಮೇಲೆ ತನ್ನ ಯಾವುದೋ ತುರ್ತು ಕೆಲಸ ನೆನಪಿಸಿಕೊಂಡು ಅದರಲ್ಲಿ ಕಾರ್ಯನಿರತನಾದ ಮತ್ತು ಆ ಬಡಮುದುಕನನ್ನು ಮರೆತುಬಿಟ್ಟನು.
-
ಬೆಳಿಗ್ಗೆ ಅವನು ಎದ್ದಾಗ ಆ ಬಡ ಮುದುಕನ ನೆನಪಾಯಿತು, ಕೂಡಲೇ ಬೆಚ್ಚಗಿನ ಸ್ವೆಟರ್-ಟೋಪಿ ಕೋಟ್ ತೆಗೆದುಕೊಡು ಅವನನ್ನು ಹುಡುಕುತ್ತಾ ಹೊರಟ. ಆದರೆ ಆ ಬಡಮುದುಕ ಚಳಿಯಿಂದ ಸತ್ತು ಬಿದ್ದಿರುವುದನ್ನು ಕಂಡನು. ಮತ್ತು ಆ ಮುದುಕನು ಬರೆದಿದ್ದ ಒಂದು ಪತ್ರವು ಅಲ್ಲೇ ಅವನಿಗೆ ಸಿಕ್ಕಿತು. "ನನ್ನಲ್ಲಿ ಬೆಚ್ಚನೆಯ ಬಟ್ಟೆ ಇಲ್ಲದಿದ್ದಾಗ, ನನ್ನೊಳಗೇ ಚಳಿಯೊಂದಿಗೆ ಹೋರಾಡುವ ಮಾನಸಿಕ ಶಕ್ತಿ" ಇತ್ತು. ಆದರೆ ನೀವು ನನಗೆ ಬೆಚ್ಚನೆಯ ಬಟ್ಟೆಗಳನ್ನು ಕೊಟ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದಾಗ, ನಾನು ನಿಮ್ಮ ಭರವಸೆಗೆ ಈಡಾದೆ. ಅದು ನನ್ನ ಮಾನಸಿಕ ಶಕ್ತಿಯನ್ನು ಪೂರ್ತಿ ಕಸಿದುಕೊಂಡಿತು.
ಒಂದೊಮ್ಮೆ ನೀವು ಕೊಟ್ಟ ಭರವಸೆಯನ್ನು ಉಳಿಸಿಕೊಳ್ಳಲು ನಿಮಗೆ ಸಾಧ್ಯವಾಗದಿದ್ದರೆ, ಯಾರಿಗೂ ಯಾವ ಭರವಸೆಯನ್ನೂ ನೀಡಬೇಡಿ. ಇದು ನಿಮಗೆ ಮುಖ್ಯವಲ್ಲದಿರಬಹುದು, ಆದರೆ ಬೇರೆಯವರಿಗೆ ಎಲ್ಲವೂ ಆಗಿರಬಹುದು ಎಂದು ಬರೆದಿದ್ದ.
No comments:
Post a Comment