2021-22ನೇ ಸಾಲಿನ ಫಲಿತಾಂಶ ಸುಧಾರಣೆಗಾಗಿ
"ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ಹಬ್ಬದ ಸ್ಪರ್ಧೆಯಾಗಿ ಆಚರಿಸಿರಿ"
ಮೊಟ್ಟ ಮೊದಲಿಗೆ ಎಸ್ಎಸ್ಎಲ್ ಸಿ ವಿಜ್ಞಾನ ವಿಷಯದ "Pass Ap" & "Up Ap" ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿಜ್ಞಾನ ಪರಿಕಲ್ಪನೆಗಳನ್ನು ಪುನರ್ಮನನ ಮಾಡಿಕೊಂಡಿದ್ದಕ್ಕಾಗಿ ತಮಗೆಲ್ಲರಿಗೂ ತುಂಬು ಹೃದಯದ ಅಭಿನಂದನೆಗಳು.💐💐💐💐💐💐
ಆತ್ಮೀಯ ವಿದ್ಯಾರ್ಥಿಗಳೇ.. ಪರೀಕ್ಷೆಯನ್ನು ಒಂದು ಹಬ್ಬದ ಜೊತೆಗೆ ಸ್ಪರ್ಧಾಳುವಾಗಿ ಸಹ ನೀವು ಭಾಗವಹಿಸಿ ಯಶಸ್ಸನ್ನು ಪಡೆಯುವಂತಾಗಬೇಕಿದೆ.
ಜಗವೇ ಒಂದು ರಣರಂಗ....
ಧೈರ್ಯ ಇರಲಿ ನಿನ್ನ ಸಂಗ.....
ಏನಾಗಲಿ ಮುಂದೆ ಸಾಗು ನೀ...
ಅರಳುವ ಹೂವುಗಳೇ ಆಲಿಸಿರಿ, ಬಾಳೊಂದು ಹೋರಾಟ ಮರೆಯದಿರಿ..
ಎಂದು ಅನೇಕ ಚಲನಚಿತ್ರಗಳ ಸಾಲುಗಳಲ್ಲಿ ಅದೆಷ್ಟು ಶಕ್ತಿ ಅಡಗಿದೆ ಎಂದರೆ ಒಂದೊಮ್ಮೆ ಮನಸ್ಸು ಕೊಟ್ಟು ಕೇಳುತ್ತಾ ಸಾಗಿದಾಗ ಅಸಾಧ್ಯದ ಕ್ರಾಂತಿಕಾರಿಯು, ನನ್ನಿಂದ ಸಾಧ್ಯ ಎನ್ನುವ ಬದಲಾವಣೆ ಬಂದುಬಿಡುತ್ತದೆ.
ಅಂದರೆ ನಮ್ಮೆಲ್ಲರ ಜೀವನವೆಲ್ಲವೂ ಒಂದು ಸುಂದರವಾದ & ಸ್ಪರ್ಧಾತ್ಮಕವಾದ ಪ್ರಯಾಣ.
ಚಾರ್ಲ್ಸ್ ಡಾರ್ವಿನ್ ಅವರ ಸಿದ್ಧಾಂತದಂತೆ
'ಬಲಿಷ್ಠವಾದವರ ಉಳಿಕೆ' ಆಗಲಿದೆ
ಇದೆಲ್ಲವೂ ಸೃಷ್ಟಿಯ ನಿಯಮವೇ ಆಗಿದೆ
ಪ್ರಕೃತಿ ಬಲಿಷ್ಟ ಇದ್ದವರನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತದೆ. ಹಾಗಾಗಿ ಪರೀಕ್ಷೆಗಳೆಂಬ ಚಿಕ್ಕಪುಟ್ಟ ಘಟ್ಟಗಳಿಗೆ ಹೆದರದೇ ಧೈರ್ಯದಿಂದ ಎದುರಿಸಿ ಉತ್ತಮ ಸಾಧನೆಯ ಹಾದಿಯನ್ನು ನಮ್ಮದಾಗಿಸಿಕೊಳ್ಳಬೇಕು.
ಕಳೆದ ಒಂದು ವರ್ಷದಿಂದ ನೀವು ಗಳಿಸಿರುವ ಜ್ಞಾನ ಕೌಶಲಗಳನ್ನು ಪ್ರಸ್ತುತಪಡಿಸಿ, ಉತ್ತಮ ಅಂಕಗಳಿಸಿ ಭವಿಷ್ಯತ್ತಿಗಾಗಿ ತಯಾರಿ ಮಾಡಿಕೊಳ್ಳಬೇಕು. ಇನ್ನು ನಾಳೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿರುವ ನೀವುಗಳು ಈ ಕೆಳಗಿನಂತೆ ಅಧ್ಯಯನ ಮಾಡಿಕೊಳ್ಳಿರಿ.
ಇಲ್ಲಿ ಪ್ರತಿಯೊಬ್ಬರೂ ಉಳಿವಿಗಾಗಿ ಹೋರಾಟ ಹೋರಾಟದ ಸ್ಪರ್ಧೆ ಮಾಡಬೇಕಾಗುತ್ತದೆ.
ನೀವು ಕಲಿತಿರುವ ಆರೂ ವಿಷಯಗಳಲ್ಲಿ ಯಾವ ಯಾವ ವಿಷಯಗಳಲ್ಲಿ ನೀವು ಪ್ರಶ್ನೆಗಳಿಗೆ ಉತ್ತಮವಾಗಿ, ಸರಿಯಾಗಿ ಉತ್ತರಿಸಬಲ್ಲಿರಿ, ಚಿತ್ರಿಸಸಬಲ್ಲಿರಿ ಎಂಬುದನ್ನು ಗುರುತಿಸಿಕೊಳ್ಳಿರಿ. ಇವು ನಿಮ್ಮ ಧನಾತ್ಮಕ ಸಾಮರ್ಥ್ಯಗಳು.
ಆರೂ ವಿಷಯಗಳಲ್ಲಿ ಇನ್ನೂವರೆಗೂ ಅರ್ಥವಾಗಿರದ ಅಂಶಗಳು, ಪರಿಕಲ್ಪನೆಗಳನ್ನು
ಗುರುತಿಸಿಕೊಳ್ಳಬೇಕು. ಈ ದೌರ್ಬಲ್ಯಗಳನ್ನು ಧನಾತ್ಮಕವಾಗಿ ಪರಿವರ್ತಿಸಿಕೊಳ್ಳುವಲ್ಲಿ ನಮಗೆ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ವಿಷಯ ಶಿಕ್ಷಕರ ಸದುಪಯೋಗಪಡಿಸಿಕೊಳ್ಳಬೇಕು. ಬರವಣಿಗೆ, ಚಿತ್ರೀಕರಿಸುವುದು ಮುಂತಾದ ಅಂಶಗಳನ್ನು ಬಲಪಡಿಸಿಕೊಳ್ಳಲು ಅವಕಾಶಗಳನ್ನು ಬಳಸಿಕೊಳ್ಳಬೇಕು.
Impossible is only found in the dictionary of fools...
ಎನ್ನುವಂತೆ ಅಸಾಧ್ಯ ಎಂಬುದು ಕೇವಲ ಮೂರ್ಖರ ಶಬ್ದಕೋಶದಲ್ಲಿ ಮಾತ್ರ ಕಂಡುಬರುತ್ತದೆ...ಪ್ರಯತ್ನ ವಾದಗಳಲ್ಲಿ ಅಲ್ಲ..
ಹಿಂದಿಯಲ್ಲಿ ಹೇಳುವಂತೆ
कोशिश करने वालों की हार नहीं होती...
ಪ್ರಯತ್ನವಾದಿಗಳು ಸೋಲಲ್ಲ
ಆತ್ಮವಿಶ್ವಾಸವೇ ಯಶಸ್ಸಿನ ಮೊದಲ ಹೆಜ್ಜೆ”
ಸಮಯೋಚಿತವಾಗಿ
ನಿಭಾಯಿಸುವುದನ್ನು ತಿಳಿಯಬೇಕು.
ಈಗಿರುವ ಕಡಿಮೆ ಸಮಯದಲ್ಲಿ
ಎದೆಗುಂದದೇ ಎಲ್ಲಾ ವಿಷಯಗಳನ್ನು ಅಧ್ಯಾಯನ ಮಾಡಿರಿ
ಇನ್ನು ಪರೀಕ್ಷಾ ದಿನದಂದು ಆರೋಗ್ಯಕರ ಆಹಾರ ಸೇವಿಸಿರಿ, ಸಮರ್ಪಕ ನೀರು ಕುಡಿಯಿರಿ, ಪರೀಕ್ಷೆ ಮುಂಚೆ ಒಂದೆರಡು ನಿಮಿಷ ಧ್ಯಾನ ಮಾಡಿರಿ, ದೀರ್ಘ ಉಸಿರು ತೆಗೆದುಕೊಂಡು ಬರೆಯಿರಿ, ಲೇಖನ ಸಾಮಗ್ರಿಗಳನ್ನು ಮೊದಲೇ ಸರಿಯಾಗಿ ಹೊಂದಿಸಿಕೊಂಡಿರಿ.
ಅಗತ್ಯಕ್ಕೆ ತಕ್ಕಷ್ಟು ಮಾತ್ರ ಪ್ರಶ್ನೆಗಳಿಗೆ ಉತ್ತರಿಸಿರಿ ಹಾಗೂ ಉತ್ತರಗಳನ್ನು ನಿಖರವಾಗಿ, ಸ್ಪಷ್ಟವಾಗಿ ಮತ್ತು ಅಂದವಾಗಿ ಬರೆಯಿರಿ. ನಿಮ್ಮ ಶಿಸ್ತುಬದ್ಧ ಓದು ಮತ್ತು ಸಮರ್ಪಕ ತಯಾರಿಯು ಒಳ್ಳೆಯ ಆತ್ಮವಿಶ್ವಾಸ ತುಂಬುತ್ತದೆ,ಕಠಿಣ ಪ್ರಶ್ನೆಗಳಿಗೆ ವಿಶೇಷ ತಯಾರಿ ಮಾಡಿರಿ, ಗೆಳೆಯರೊಂದಿಗೆ ಚರ್ಚಿಸಿ ಕಳೆದ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅವಲೋಕಿಸಿರಿ.
ಪ್ರತಿ ವಿಷಯಗಳ ಮಧ್ಯದಲ್ಲಿ ಸಾಕಷ್ಟು ಸಮಯ ಅವಕಾಶ ನಿಮಗೆ ಇದೆ. ಇದರ ಸದುಪಯೋಗ ಮಾಡಿಕೊಳ್ಳಿರಿ.
ಆತ್ಮೀಯ ವಿದ್ಯಾರ್ಥಿಗಳೇ
"ನಿಮ್ಮ ಎಸ್ಎಸ್ಎಲ್ ಸಿ ಹಬ್ಬದ ಸ್ಪರ್ಧೆ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತೇವೆ"💐💐💐💐💐💐
👍👍👍👍👍👍
ಸ.ಪ.ಪೂ.ಕಾ(ಪ್ರೌಢ ಶಾಲಾ ವಿಭಾಗ) ಹಿರೇಮ್ಯಾಗೇರಿ...
SSLC Exam Time Table-2022
28-03-22--->Kannada
30-03-22--->English
04-04-22--->Maths
06-04=22--->Social
08-04-22--->Hindi
11-04-22--->Science
No comments:
Post a Comment