Tuesday, July 5, 2022

 FLN

Fundational Literary and Numeracy

NEP 2020

Must achieve foundational  literacy and numeracy among all children by 2025

NIPUN Bharat

National initiative for proficiency in reading with understanding and numeracy 


Foundational literacy and numeracy 

 ಮೂಲಭೂತ ಸಾಕ್ಷರತೆ ಮತ್ತು ಅಂಕಿ-ಸಂಖ್ಯೆಗಳ ಪರಿಜ್ಞಾನ

 ಮಕ್ಕಳು ಸ್ಪಷ್ಟವಾಗಿ ಓದುವುದು, ಅರ್ಥೈಸಿಕೊಳ್ಳುವುದು ಹಾಗೂ ಓದಿದ್ದನ್ನು ಸ್ಪಷ್ಟವಾಗಿ  ಶುದ್ಧವಾಗಿ ಬರೆಯುವುದು ಹಾಗೂ  ಗ್ರಾಂಥಿಕ ಭಾಷೆಯಲ್ಲಿ ಮಾತನಾಡುವುದು. ಅಂಕಿಗಳ ಜೊತೆಯಲ್ಲಿ ಮೂಲಭೂತ ಲೆಕ್ಕಾಚಾರಗಳಾದ  ಕೂಡಿಸುವಿಕೆ, ವ್ಯವಕಲನ ಗುಣಾಕಾರ, ಭಾಗಾಕಾರ ಲೆಕ್ಕಾಚಾರಗಳನ್ನು ಮಾಡುವುದು ಮುಂದಿನ ಶಾಲಾಜೀವನಕಲ್ಲದೆ ಬದುಕಿನುದ್ದಕ್ಕೂ ತುಂಬಾ ಅವಶ್ಯಕವಾದ ಸಂಗತಿಗಳಿವೆ.

 ಸರ್ಕಾರ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಮೂಲಕ ನಡೆಸಲಾದ ಸರ್ವೇಕ್ಷಣೆ ಗಳ ಪ್ರಕಾರ ಮಕ್ಕಳು ಇನ್ನೂ ಕಲಿಯುವ ಗಂಭೀರ ಸಮಸ್ಯೆಗೆ ಒಳಗಾಗಿದ್ದಾರೆ. ಹಾಲಿ  ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು  ಸರಿಯಾಗಿ ಓದಲು ತಮ್ಮ ತರಗತಿಯ ಪಠ್ಯ ಸಾಮಗ್ರಿಗಳನ್ನು ಅರ್ಥಮಾಡಿಕೊಳ್ಳಲು ಹಾಗೂ ಭಾರತೀಯ ಅಂಕಿಸಂಖ್ಯೆಗಳನ್ನು ಬಳಸಿ ಕೂಡುವುದು, ಕಳೆಯುವುದು ಗುಣಕಾರ, ಭಾಗಕಾರ ಲೆಕ್ಕ ಗಳನ್ನು ಮಾಡುವುದರಲ್ಲಿ ವಿಫಲರಾಗಿದ್ದಾರೆ. 

 ಹೊಸ ರಾಷ್ಟ್ರೀಯ ಶಿಕ್ಷಣ 2020  ಹಾಗೂ ನಿಪುಣ ಭಾರತದ ಪ್ರಕಾರ ಮೂಲಭೂತವಾದ ಸಾಕ್ಷರತೆ ಮತ್ತು ಅಂಕಿಗಳ ಪರಿಜ್ಞಾನವನ್ನು ಮೂರನೇ ತರಗತಿ ಮುಗಿಯುವುದರೊಳಗಾಗಿ ಎಲ್ಲ ಮಕ್ಕಳೂ  ಗಳಿಸಬೇಕು ಎಂಬ ಗುರಿಯನ್ನು ಹೊಂದಲಾಗಿದೆ.ಗ್ರೇಡ್ 3 ತಲುಪುವ ವೇಳೆಗೆ ಪ್ರತಿಯೊಬ್ಬ ವಿದ್ಯಾರ್ಥಿಯೂ  ಮೂಲಭೂತ ಸಾಕ್ಷರತೆಯನ್ನು ಮತ್ತು ಅಂಕಿ-ಸಂಖ್ಯೆಗಳ ಜ್ಞಾನವನ್ನು ಕಡ್ಡಾಯವಾಗಿ ಪಡೆದುಕೊಂಡಿರಬೇಕು. 

 2025 ರ ಒಳಗೆ ಪ್ರಾಥಮಿಕ ಶಾಲೆಗಳಲ್ಲಿಓದುತ್ತಿರುವ ಎಲ್ಲಾ ಮಕ್ಕಳೂ  ಮೂಲಭೂತ ಸಾಕ್ಷರತೆ ಹಾಗೂ ಅಂಕಿಗಳ ಪರಿಜ್ಞಾನವನ್ನು  ಪಡೆದುಕೊಳ್ಳುವಂತೆ ಮಾಡುವುದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶವಾಗಿದೆ. 

Foundational  literacy and numeracy FLN


it is the ability to read with meaning and perform basic maths calculations by the end of class 3

Fundamental literacy

Literacy is the ability to identify ,understand, interprete,create communicate using printed and written materials. it is gives the knowledge to achieve the goal.

Numeracy

numeracy means the ability to use mathematical understanding and skills of solving problem and develop a critical view point with appropriate reasonings.


The ability to read with meaning and writing

Reading words sentences

Oral reading frequency with comprehensive

Fundamental numeracy 

Having a clear sense of numbers

Recognising double digit numbers such as 38, 78 42 etc

Knowing what's bigger and smaller numbers 

Solving two  digit number addition subtraction multiplication and division problems

Story 

Veena and Rakesh were incredible happy with their son ujjwals school.ujjwal was 6 + years old and studying in first standard in a well known public School in a lorge  City. Veena and Rakesh used to meet the class teacher once every 2 months during parent teacher meeting .and were given 5 minutes time briefing on ujjwal's progress. By all standards he was doing very well. the school had made ujjwal such a disciplined  quiet child who spoke only when spoken to , and considered studies more important than playing with his friends.
Always he was busy in doing homeworks. The school gave him load  of homework everyday of repeatedly practicing writing letters of the alphabet.
Veena and Rakesh transfer to another town. In the new town ujjwal was admitted to a new school close to their house that had a very basic facilities but the teachers appeared very warm and friendly. After one week the teachers called the parents and told them for almost an hour and informed them that ujjwal is not able to keep pace with the class because he is not able to read.
But he can read and write all the letters of the alphabet said Rakesh and Veena.
The teacher informed that ujjwal should have been able to read small sentences consisting of at least 4 to 5 simple words in unknown text.so that in the second class he  is able to read unknown text of 8 to 10 sentences with simple words with appropriate speed.

The parents were shocked and did not know what to do next ?The teacher told them not to worry and informed that she would work separately on Ujjwal's to make him catch up with the  rest of the class . At the end of 3 months Ujjwal manage to catch up . He was able to read and understand a new story book on his own way . Veena and Rakesh were happy and  decided to live   in the small town until ujjwal complete his school education in their wonderful and  joyful School.

 
Methods of implementation of foundational literacy and numeracy

ELPS approach 

E- experience with the physical objects

L-spoken language that describe the experience

P-pictures that represents the experience

S-written  symbols that generalize the experience.


ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020  ಅನುಷ್ಠಾನ ದಡಿಯಲ್ಲಿ 7ನೇ ವರ್ಷದ ಅಮೃತ ಮಹೋತ್ಸವ ಹಾಗೂ 1 ರಿಂದ 9ನೇ ತರಗತಿ ಕಲಿಕಾ ಚೇತರಿಕೆ ವರ್ಷಾಚರಣೆ  F L N  ಚಟುವಟಿಕೆಗಳ ಕಾರ್ಯಾನುಷ್ಠಾನಕ್ಕಾಗಿ ಶಿಕ್ಷಕರ  ಶ್ರಮದಾನ

 ಪ್ರಾಥಮಿಕ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಲ್ಲಿ ಮೂಲಭೂತವಾದ ಸಾಕ್ಷರತೆಯನ್ನು ಉಂಟುಮಾಡಲು ಪ್ರತಿಯೊಂದು ಮಗುವನ್ನು ಕನ್ನಡದಲ್ಲಿ ಬರೆಯಿಸಿ,  ಓದಿಸಿ ಮೌಖಿಕವಾಗಿ ಪ್ರಶ್ನಿಸಿ ನಂತರ ಭಾಷಾಕಲಿಕೆಯಲ್ಲಿ ಯ ಮೂಲ ಅಂಶಗಳ ಬಗ್ಗೆ ಸ್ಪಷ್ಟತೆ ಇರುವುದನ್ನು ಹಾಗೂ ಇಲ್ಲದಿರುವುದನ್ನು ಗುರುತಿಸುವುದು.

 ಮಕ್ಕಳು ಸ್ಪಷ್ಟವಾಗಿ ಪರಿಶುದ್ಧವಾಗಿ  ಅರ್ಥಪೂರ್ಣ ವಾಗಿ ಓದುವುದನ್ನು ಪರೀಕ್ಷಿಸುವುದು.

 ಮಕ್ಕಳು ಶುದ್ಧವಾಗಿ ಬರೆಯುವುದನ್ನು ಪರೀಕ್ಷಿಸಬೇಕು

 ಬರವಣಿಗೆಯಲ್ಲಿ ಸ್ಪಷ್ಟತೆ,  ಅಕ್ಷರಗಳು ಗುಂಡಾಗಿ ಗುಂಡಾಗಿಲ್ಲ, ಬರವಣಿಗೆಯ ಶುದ್ಧತೆ ಹಾಗೂ ಕಾಗುಣಿತ ದೋಷಗಳನ್ನು ಪರೀಕ್ಷಿಸಬೇಕು.

 ಮಕ್ಕಳು ಭಾರತೀಯ ಅಂಕಿಸಂಖ್ಯೆಗಳನ್ನು ಬಳಸಿಕೊಂಡು ಸಂಕಲನ ವ್ಯವಕಲನ ಗುಣಾಕಾರ ಭಾಗಾಕಾರ ಲೆಕ್ಕ ಗಳನ್ನು ಸರಿಯಾಗಿ ಮಾಡುವುದನ್ನು ಪರಿಶೀಲಿಸಬೇಕು.

 ಮಕ್ಕಳು ಸ್ಪಷ್ಟವಾಗಿ ಓದುವುದು,  ಶುದ್ಧವಾಗಿ ಬರೆಯುವುದನ್ನು  ಹಾಗೂ ಸರಳ ಗಣಿತ ಲೆಕ್ಕಾಚಾರಗಳನ್ನು ಮಾಡುವುದರ ಬಗ್ಗೆ ಪರಿಶೀಲಿಸಬೇಕು.

 ಈ ರೀತಿ ಮಕ್ಕಳು ಸ್ಪಷ್ಟವಾಗಿ ಓದುವುದು,  ಶುದ್ಧವಾಗಿ  ಬರೆಯುವುದು  ಹಾಗೂ ಸರಳ ಗಣಿತದ ಲೆಕ್ಕಾಚಾರಗಳನ್ನು ಮಾಡುವ ಅವರ ಸಾಮರ್ಥ್ಯದ ಆಧಾರದ ಮೇಲೆ ಎ ಬಿ ಸಿ ಎಂದು ಶ್ರೇಣಿ ನೀಡಬೇಕು .
(ನಿಗದಿತ ನಮೂನೆಗಳಲ್ಲಿ ) 

   ಮಕ್ಕಳು ಸ್ಪಷ್ಟವಾಗಿ,  ಅರ್ಥಪೂರ್ಣವಾಗಿ ಓದುವ,  ತಪ್ಪಿಲ್ಲದೆ ದುಂಡಾಗಿ ಬರೆಯುವ  ಹಾಗೂ ಸರಳ ಲೆಕ್ಕಾಚಾರವನ್ನು ಮಾಡುವ ವಿದ್ಯಾರ್ಥಿಗಳನ್ನು ಶ್ರೇಣಿಯಲ್ಲಿ ಎ ಯಲ್ಲಿ ಪರಿಗಣಿಸಬೇಕು. 
 ಶ್ರೇಣಿ ಎ ಯಲ್ಲಿರುವ ಮಕ್ಕಳಿಗೆ ಯಾವುದೇ ರೀತಿಯ ವಿಶೇಷ ತರಗತಿಗಳ ಅವಶ್ಯಕತೆ ಇರುವುದಿಲ್ಲ.

 ಸ್ಪಷ್ಟವಾಗಿ ಓದದೇ ಇರುವ ಬರೆಯದೇ ಇರುವ ಹಾಗೂ ಸರಳ ಲೆಕ್ಕಗಳನ್ನು ಮಾಡದೇ ಇರುವ  ಮಕ್ಕಳನ್ನು ಬಿ ಮತ್ತು ಸಿ ಶ್ರೇಣಿಗಳಲ್ಲಿ  ಅವರ ಸಾಮರ್ಥ್ಯಕ್ಕೆ ಅನುಸಾರವಾಗಿ ಪರಿಗಣಿಸಿ ಅವರಿಗೆ ಪ್ರತಿದಿನ ಶಾಲಾ ಪೂರ್ವದಲ್ಲಿ ಅಥವಾ ಅವಧಿಯ ನಂತರ ಕನ್ನಡ ಮತ್ತು ಗಣಿತ ವಿಷಯದ ಮೂಲ ಕಲಿಕಾಂಶಗಳನ್ನು ಕಲಿಸಬೇಕು.

 ಮಕ್ಕಳನ್ನು ಶ್ರೇಣಿ ವಾರು ಗುರುತಿಸಿದ ನಂತರ ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗೆ ಬಿ ಮತ್ತು ಸಿ ಶ್ರೇಣಿಯಲ್ಲಿರುವ ಮಕ್ಕಳಿಗೆ  ಕನ್ನಡ ಹಾಗೂ ಗಣಿತ ವಿಷಯಗಳ  ವಿಶೇಷ ತರಗತಿಗಳನ್ನು ನಡೆಸಿ  ಅಕ್ಟೊಬರ್ 1 ರಂದು ಆ ಮಕ್ಕಳಿಗೆ ಪೋಸ್ಟ್ ಟೇಸ್ಟ್ ಮಾಡಿ ಆ ಮಕ್ಕಳ ಸಾಧನೆಯನ್ನು ಅಕ್ಟೊಬರ್ 2 ರಂದು ಗಾಂಧಿಜಯಂತಿಯಂದು ಪಾಲಕರಿಗೆ ತಿಳಿಸುವುದು. 


ಈ ತರಗತಿಗಳಿಗೆ ಕನ್ನಡ ಮತ್ತು ಗಣಿತ ಅಭ್ಯಾಸಕ್ಕಾಗಿ ಒಂದು ಪ್ರತ್ಯೇಕ  ನೋಟ್ಬುಕ್ ತರಲು ತಿಳಿಸುವುದು.


 ಪ್ರತ್ಯೇಕವಾದ ನೋಟ್ಬುಕ್ ತರದೇ ಇರುವ ಮಕ್ಕಳಿಗೆ ದಾನಿಗಳಿಂದ ನೋಟ್ಬುಕ್ ಕೊಡಿಸುವ ವ್ಯವಸ್ಥೆಯನ್ನು ಮಾಡುವುದು.

 ಕನ್ನಡ ಮತ್ತು ಗಣಿತ ವಿಷಯದ ಮೂಲ ಕಲಿಕಾಂಶಗಳನ್ನು ಪರೀಕ್ಷಿಸಲು ಶಿಕ್ಷಕರು ತಮ್ಮದೇ ಆದ ಪ್ರಶ್ನಾವಳಿಗಳ ಮೂಲಕ,  ಅವಲೋಕನದ ಮೂಲಕ ಚಿಕಿತ್ಸಕಾ  ವಿಧಾನಗಳ ಮೂಲಕ ಪರೀಕ್ಷಿಸಬಹುದಾಗಿದೆ.

 ಮಕ್ಕಳ ಪೂರ್ವ ಜ್ಞಾನವನ್ನು ಪರೀಕ್ಷಿಸಿದ ಮಾಹಿತಿಯನ್ನು ದಾಖಲೆ ರೂಪದಲ್ಲಿ ನಿರ್ವಹಿಸುವುದು.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು