Monday, August 29, 2022

 ಯಾರೋ ಒಬ್ಬ ವ್ಯಕ್ತಿ ಬರೆದ ಬರಹ ಇದು, ಹೆಸರು ತಿಳಿದಿಲ್ಲ.. ಒಮ್ಮೆ ಓದಿ


ಒಂದು ಯಾರೋ ಒಬ್ಬ ವ್ಯಕ್ತಿ ಬರೆದ ಬರಹ ಇದು, ಹೆಸರು ತಿಳಿದಿಲ್ಲ.. ಒಮ್ಮೆ ಓದಿ


ಒಂದು ನಿಮಷ ಓದಿ ಫ್ರೆಂಡ್ಸ್ *ಹೋಟೆಲ್ ಮಾಲಿಕ ಎಲೆಯಿಟ್ಟು ಊಟ ಬಡಿಸಲು ಬಗ್ಗುತಿದ್ದಂತೆ ಆ ವ್ಯಕ್ತಿ ಕೇಳಿದರು.*ಊಟಕ್ಕೆ ಎಷ್ಟಾಗುತ್ತದೆ?* ಮಾಲಿಕ ಉತ್ತರಿಸಿದರು..*ಮೀನು ಬೇಕಿದ್ದರೆ 50 ರೂಪಾಯಿ, ಮೀನು ಬೇಡವಾದರೆ 20 ರೂಪಾಯಿ....*

*ಆ ವ್ಯಕ್ತಿ ತನ್ನ ಹರಿದ ಅಂಗಿಯ ಕಿಸೆಯಿಂದ ತೆಗೆದ ಹತ್ತು ರೂಪಾಯಿ ಯನ್ನು ಮಾಲಿಕನತ್ತ ಚಾಚುತ್ತಾ...*


*ನನ್ನ ಕೈಯಲ್ಲಿ ಇದುವೇ ಇರೋದು..*

*ಇದಕ್ಕೆ ಸಿಕ್ಕುವುದು ಕೊಟ್ಟರೆ ಸಾಕು.... ಬರೀ ಅನ್ನವಾದರೂ ಸಾಕು..*


*ಹಸಿವು ನೀಗಿದರೆ ಸಾಕು..*


*ನಿನ್ನೆ ಮಧ್ಯಾಹ್ನದಿಂದ ಏನೂ ತಿಂದಿಲ್ಲ....*


*ಅದು ಹೇಳಬೇಕಾದರೆ ಅವರ ಮಾತುಗಳು ತಡವರಿಸಿದವು....*


*ಹೋಟೆಲ್ ಮಾಲಿಕ ಮೀನು ಬಿಟ್ಟು ಬಾಕಿ ಎಲ್ಲಾ ಅವರಿಗೆ ಬಡಿಸಿದರು....*


*ನಾನು ಅವರು ಊಟ ಮಾಡುವುದನ್ನೇ ನೋಡಿ ನಿಂತೆ... ಅವರ ಕಣ್ಣಿನಿಂದ ಕಣ್ಣೀರು ಸಣ್ಣದಾಗಿ ಕೆಳ ಜಾರುತಿತ್ತು.ಅದನ್ನು ಉಜ್ಜಿಕೊಂಡು ಸಣ್ಣ ಮಗುವಿನಂತೆ ನಿಧಾನವಾಗಿ ಊಟಮಾಡುವುದನ್ನ ಕಂಡ ಪಕ್ಕದಲ್ಲಿ ಕುಳಿತ ವ್ಯಕ್ತಿ ಕೇಳಿದರು...*


*ನೀವ್ಯಾಕೆ ಅಳುತಿದ್ದೀರಾ?*


*ಅವರು ಕೇಳಿದ ವ್ಯಕ್ತಿಯ ಮುಖವನ್ನ ನೋಡಿ ಕಣ್ಣನ್ನು ಉಜ್ಜಿಕೊಂಡು ಹೇಳಿದರು....*


*ನನ್ನ ಕಳೆದು ಹೋದ ಜೀವನವನ್ನು ನೆನೆದು ಕಣ್ಣೀರು ಬಂತು.. ಮೂರು ಮಕ್ಕಳು ನನಗೆ ಎರಡು ಗಂಡು, ಒಂದು ಹೆಣ್ಣು...*

*ಮೂರು ಜನರಿಗೂ ಒಳ್ಳೆಯ ಕೆಲಸವಿದೆ... ನನಗೆ ಸಿಕ್ಕಿದ ಎಲ್ಲಾ ಸೌಭಾಗ್ಯ ವನ್ನು ನಾನು ಅವರಿಗೆ ನೀಡಿದೆ.... ಅದಕ್ಕಾಗಿ ನಾನು ಕಳೆದು ಕೊಂಡದ್ದು ನನ್ನ ಯೌವನ ವನ್ನು.... ಇಪ್ಪತ್ತೆಂಟು ವರುಷದ ಪ್ರವಾಸ ಜೀವನ.....*


*ಎಲ್ಲದಕ್ಕೂ ನನ್ನ ಬೆನ್ನೆಲುಬಾಗಿದ್ದ ಅವಳು ಮೊದಲೇ ನನ್ನನ್ನು ಒಂಟಿಯಾಗಿಸಿ ಹೊರಟು ಹೋದಳು.... ಆಸ್ತಿ ಪಾಲು ಮಾಡುವ ಸಂಧರ್ಭ ಎದುರಾಯಿತು ನನ್ನ ಮಕ್ಕಳು, ಸೊಸೆಯಂದಿರಿಗೆ. ಪಾಲು ಮಾಡುತಿದ್ದಂತೆ ನಾನು ಅವರಿಗೆ ಭಾರವಾಗತೊಡಗಿದೆ.... ಮುಟ್ಟಿದ್ದಕ್ಕೆಲ್ಲಾ ನನ್ನನ್ನು ದೂರಲಾರಂಭಿಸಿದರು... ನಾನು ಒಬ್ಬ ಮುದುಕನಲ್ವಾ? ಆ ಒಂದು ಪರಿಗಣನೆಯಾದರು ಕೊಡಬಹುದಿತ್ತಲ್ಲಾ? ಅದೂ ಇಲ್ಲ... ಅವರ ಅಹಾರ ಸೇವನೆಯ ನಂತರವೇ ನಾನು ಕುಳಿತುಕೊಳ್ಳುತಿದ್ದೆ. ಆದರೂ ಬಯ್ಯುತಿದ್ದರು.. ಆಹಾರವೆಲ್ಲಾ ಕಣ್ಣೀರು ಬಿದ್ದು* *ಉಪ್ಪುರಸ‌ವಾಗುತಿತ್ತು ತಿನ್ನುವಾಗ..ಮೊಮ್ಮಕ್ಕಳು ಕೂಡಾ ನನ್ನಲ್ಲಿ ಮಾತಾಡುತ್ತಿ ರಲಿಲ್ಲ... ಕಾರಣ ಮಾತನಾಡುವುದ ಕಂಡರೆ ಮಕ್ಕಳು ಅವರನ್ನು ಬಯ್ಯುತಿದ್ದರು... ಯಾವಾಗಲು ಅವರದು ಒಂದೇ ಮಾತು ಎಲ್ಲಿಗಾದರು ಹೊರಟು* *ಹೋಗಬಾರದೇ ಎಂದು...ಈ ಕಲ್ಲು ಭೂಮಿಯಲ್ಲಿ ರಾತ್ರಿ ಹಗಲು ಎನ್ನದೆ ಬೆವರು ಸುರಿಸಿ ದುಡಿದು ಉಂಟುಮಾಡಿದ ಹಣದಲ್ಲಿ , ತಿನ್ನದೆಯೂ ಮಲಗದೆಯೂ ನಾನೂ ಅವಳೂ ಕೂಡಿ ಇಟ್ಟ* *ಹಣದಲ್ಲಿ ಕಟ್ಟಿದ ಈ ಮನೆ... ಅವಳ ನೆನಪುಗಳು ಮಲಗಿರೋದು ಆ ಮನೆಯಲ್ಲಿಯೇ. ಆ ಮನೆ ಬಿಟ್ಟು ಹೋಗಲು ಮನಸ್ಸು ಕೇಳಲಿಲ್ಲ.*

*ಅದರೇ ಏನು ಮಾಡಲಿ ನಿನ್ನೆ ಹೊರಟು ಬಿಟ್ಟೆ... ಸೊಸೆಯ ಒಡವೆ ಕದ್ದೆ ಎಂದು ಕಳ್ಳನ ಪಟ್ಟ ಕಟ್ಟಿ ಮಗ ನನ್ನಲ್ಲಿ ಸಿಟ್ಟುಗೊಂಡ. ಆದರೆ ಹೊಡೆದಿಲ್ಲ ಅದೇ ನನ್ನ ಭಾಗ್ಯ. ... ಇನ್ನೂ ಮತ್ತೆ ಅಲ್ಲಿ ನಿಂತರೆ ಅದೂ ನಡೆಯಬಹುದು.. "ಅಪ್ಪನಿಗೆ* *ಹೊಡೆದ ಮಗ" ಎಂಬ ಹೆಸರು ಬರಬಾರದಲ್ಲ.,.. ನನಗೆ ಸಾಯಲು ಭಯವಿಲ್ಲ ಅಲ್ಲದೆ ಇನ್ನು ನಾನು ಯಾರಿಗಾಗಿ ಬದುಕಬೇಕು.*


*ಅವರು ಪೂರ್ತಿ ಊಟ ಮಾಡದೆ ಎದ್ದರು.. ತನ್ನಲ್ಲಿರುವ ಹತ್ತು ರೂಪಾಯಿ ಮಾಲಿಕರೆಡೆಗೆ ಚಾಚಿದರು.. ಮಾಲಿಕರೆಂದರು ಬೇಡ ಕೈಯಲ್ಲಿ ಇರಲಿ....*


*ಯಾವಾಗ ಬೇಕಿದ್ದರು ನೀವು ಇಲ್ಲಿಗೆ ಬರಬಹುದು...*


*ನಿಮಗಿರುವ ಊಟ ಇಲ್ಲಿ ಇರುತ್ತದೆ.*


*ಆದರೆ ಆ ವ್ಯಕ್ತಿ ಆ ಹತ್ತು ರೂಪಾಯಿ ಅಲ್ಲಿ ಇಟ್ಟು ಹೇಳಿದರು*

*ತುಂಬಾ ಸಂತೋಷವಾಯಿತು ನಿಮ್ಮ ಉಪಕಾರಕ್ಕೆ.. . ಏನೂ ತಿಳಿಯದಿರಿ..ಸ್ವಾಭಿಮಾನ ನನ್ನನ್ನು ಬಿಡುತ್ತಿಲ್ಲ.*

*ಬರ್ತೀನಿ ಇನ್ನೊಮ್ಮೆ ಕಾಣುವಾ ಎಂದು ಅವರ ಗಂಟನ್ನು ಎತ್ತಿಕೊಂಡು ಎಲ್ಲಿಗೆಂದಿಲ್ಲದೆ ಅವರಷ್ಟಕೆ ನಡೆದು ಹೋದರು...*

*ಆ ವ್ಯಕ್ತಿ ನನ್ನ ಮನಸಿಗೆ ಉಂಟು ಮಾಡಿದ ಆ ಗಾಯ ಈಗಲೂ ಒಣಗಲಿಲ್ಲ.*


*ಅದ್ಯಾಕೆ ಎಲ್ಲಾ ಹಸುರು ಎಲೆಗಳೂ ಒಂದು ದಿನ ಹಣ್ಣೆಲೆಯಾಗುತ್ತೆಂದು ಯಾರು ಚಿಂತಿಸುತ್ತಿಲ್ಲ.???*


*ಬೇಡದ್ದು ,ಬೇಕಾದದ್ದು ಕಳುಹಿಸಿ MB ಮುಗಿಸುವಾಗಲೂಇಂತಹ ಒಂದು ಕೂಡಾ ಷೇರು ಮಾಡಿ. ಯಾರಾದರು ಒಬ್ಬರ ಮನಸು ಬದಲಾದರೆ.....*

*ಸಾಕು*

*ಬದಲಾವಣೆ ನಮ್ಮಿಂದಲೇ ಆಗಲಿ* ಶೇರ್ ಮಾಡಿ ಫ್ರೆಂಡ್ಸ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು