Sunday, September 11, 2022

 *ಎಷ್ಟು ದಿನ ಅಂಥ ದ್ವೇಷಿಸೋದು?*


        *ಒಂದು ಸಣ್ಣ ಕಥೆ*

ಒಂದು ಪ್ರಾಥಮಿಕ ಶಾಲೆಯಲ್ಲಿ ಅದೊಂದಿನ ಶಿಕ್ಷಕರು, ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿ ಟೊಮೆಟೊ ಹಣ್ಣುಗಳನ್ನು ತರುವಂತೆ ಮಕ್ಕಳಿಗೆ ಹೇಳುತ್ತಾರೆ. ನೀವು ತರುವ ಪ್ರತಿಯೊಂದು ಟೊಮೆಟೊ ಹಣ್ಣು ನೀವು ದ್ವೇಷ ಮಾಡೋ ಒಬ್ಬೊಬ್ಬ ವ್ಯಕ್ತಿಗೆ ಸಂಕೇತ. ನೀವು ಎಷ್ಟು ಜನರನ್ನು ಇಷ್ಟಪಡ್ತಿಲ್ವೋ, ದ್ವೇಷ ಮಾಡ್ತೀರೋ, ಅಷ್ಟು ಹಣ್ಣು ತಗೊಂಬನ್ನಿ.


ಮರುದಿನ ಮಕ್ಕಳು ಉತ್ಸಾಹದಿಂದ ಟೊಮೆಟೊ ಹಣ್ಣುಗಳನ್ನು ತರ್ತಾರೆ. ಒಂದು, ಎರಡು, ಮೂರು, ಐದರವರೆಗೆ ಒಬ್ಬೊಬ್ಬ ವಿದ್ಯಾರ್ಥಿಯ ಹತ್ತಿರ ಟೊಮೆಟೊ ಹಣ್ಣುಗಳಿದ್ವು. 


ಎಲ್ಲಾ ತಂದಾಯ್ತಲ್ಲ? ಅವನ್ನ ನಿಮ್ಮ ಚೀಲದಲ್ಲಿ ಇಟ್ಕೊಂಡಿರಿ. ಇವನ್ನೇ ದಿನಾ ತಗೊಂಬನ್ನಿ. ಅಷ್ಟೇ ಅಲ್ಲ, ನೀವು ಓಡಾಡುವಾಗ್ಲೂ ಇವು ನಿಮ್ಮ ಜೊತೆಗೇ ಇರಬೇಕು ಅಂತ ಹೇಳಿ ಪಾಠ ಮುಂದುವರಿಸಿದ್ರು ಟೀಚರ್.


ಮೊದಲ ದಿನ ಟೊಮೆಟೊ ಚೀಲ ಹಿಡ್ಕೊಂಡೇ ವಿದ್ಯಾರ್ಥಿಗಳು ಓಡಾಡಿದ್ರು. ಸಂಜೆ ಹೊತ್ತಿಗೆ ಅವನ್ನು ಹೊತ್ಕೊಂಡೇ ಮನೆಗೆ ಹೋದ್ರು.


ಮರುದಿನ ಶಾಲೆಗೆ ಬಂದಾಗ, ನಿನ್ನೆಯ ಉತ್ಸಾಹ ಮಕ್ಕಳಲ್ಲಿ ಇರಲಿಲ್ಲ. ಹೋದಲ್ಲೆಲ್ಲ ಟೊಮೆಟೊ ಹಿಡ್ಕೊಂಡು ಓಡಾಡೋದು ಬೇಸರ, ಕಷ್ಟ ಎಂದೆಲ್ಲಾ ಹೇಳಿದ್ರು. ಟೀಚರ್ ಸುಮ್ನೇ ನಕ್ಕು ಪಾಠ ಶುರು ಮಾಡಿದ್ರು. 


ಎರಡನೇ ದಿನ ಮಕ್ಕಳ ದೂರುಗಳ ಪಟ್ಟಿ ದೊಡ್ಡದಾಗಿತ್ತು. ಟೊಮೆಟೊಗಳು ಒಡೆದಿವೆ, ವಾಸನೆ ಬರ್ತಿವೆ ಎಂದು ದೂರಿದರು. 


ಮೂರನೇ ದಿನ ಎಲ್ಲಾ ಮಕ್ಕಳು ತಮ್ಮ ಟೊಮೆಟೊ ಎಸೆದ್ರೆ ಸಾಕು ಅಂತಿದ್ರು. ಆದ್ರೆ, ಟೀಚರ್ ಭಯ. ಕೊನೆಗೆ ಅಳುಕಿನಂದಲೇ ಕೇಳಿದ್ರು: ಟೊಮೆಟೊ ವಾಸನೆ ಬರ್ತಿವೆ ಟೀಚರ್. ಇವನ್ನು ಯಾಕೆ ತಗೊಂಡು ಓಡಾಡ್ಬೇಕು?


ಶಿಕ್ಷಕರು ನಕ್ಕು ಹೇಳಿದರು:


'ಈ ಟೊಮೆಟೊ ನೀವು ದ್ವೇಷ ಮಾಡೋ ವ್ಯಕ್ತಿಗಳಿದ್ದಂತೆ ತಾನೆ? ಅಂದರೆ, ಇವು ನಿಮ್ಮ ಮನಸ್ಸಿನ ದ್ವೇಷ ಇದ್ದ ಹಾಗೆ. ನೀವು ಯಾರನ್ನಾದರೂ ದ್ವೇಷ ಮಾಡೋಕೆ ಶುರು ಮಾಡಿದ್ರೆ, ಕ್ರಮೇಣ ಆ ಭಾವನೆ ನಿಮ್ಮ ಮನಸ್ಸನ್ನು ರೇಜಿಗೆ ಎಬ್ಬಿಸುತ್ತೆ. ಹೇಗೆ ಕೊಳೆತ ಟೊಮೆಟೊ ವಾಸನೆ ಅಹಿತಕರ ಭಾವನೆ ತರುತ್ತೋ, ನಿಮ್ಮ ಮನಸ್ಸು ಕೂಡಾ ದ್ವೇಷದಿಂದ ರಾಡಿಯಾಗುತ್ತೆ. ಅಸಮಾಧಾನ ಹೆಚ್ಚಿಸುತ್ತೆ. 


'ಆದ್ದರಿಂದ, ಯಾರನ್ನೂ ದ್ವೇಷ ಮಾಡಬೇಡಿ. ಇದರಿಂದ ಮನಸ್ಸು ಕೆಟ್ಟುಹೋಗುತ್ತೆ. ಒಂದೆರಡು ದಿನ ಈ ಟೊಮೆಟೊ ಹೊತ್ಕೊಂಡು ಓಡಾಡಿದ್ಕೇ ಇಷ್ಟೊಂದು ಬೇಸರವಾಗಿದೆ ನಿಮಗೆ. ಇನ್ನು, ಇಡೀ ಜೀವನ ಅದ್ಹೇಗೆ ದ್ವೇಷ ಮನಸ್ಸಿನಲ್ಲಿ ಇಟ್ಕೊಂಡು ಓಡಾಡ್ತೀರಿ?


'ಎಷ್ಟು ಬೇಗ ಟೊಮೆಟೊ ಆಚೆಗೆ ಎಸೆಯುತ್ತೀರೋ, ಅಷ್ಟು ಬೇಗ ಆರಾಮ ಆಗ್ತೀರಿ. ಮನಸ್ಸನ್ನು ಸ್ವಚ್ಛವಾಗಿ ಇಟ್ಕೊಳ್ಳಿ. ನಿಮಗಿಷ್ಟದ ವ್ಯಕ್ತಿ, ವಸ್ತುಗಳನ್ನು ಅದರಲ್ಲಿ ಸೇರಿಸ್ತಾ ಹೋಗಿ. ಕೆಟ್ಟ ಭಾವನೆ ಉಂಟು ಮಾಡೋ ವಿಷಯಗಳನ್ನ ದೂರ ಇಡಿ. ಅವನ್ನು ಹೊತ್ಕೊಂಡು ಓಡಾಡ್ಬೇಡಿ. ಆಗ ಜೀವನಪೂರ್ತಿ ಆರಾಮವಾಗಿರ್ತೀರಿ.'ಹೀಗೆ ಸಿಕ್ಕಿದ್ದು..🌻🌻🌻✍️.. ಶುಭದಿನ.. ಸರ್ವೇ ಜನಾಃ ಸುಖಿನೋ ಭವಂತು 🌻ಜೀವನ ಅನ್ನೋದೇ ನಶ್ವರ ಇರೋವಷ್ಟು ದಿನ ಆದಷ್ಟು ಧರ್ಮವಾಗಿ ನ್ಯಾಯವಾಗಿ ಬದುಕೋಣ.🌻👍🙏

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು