ವಿಜ್ಞಾನ ವಿಶೇಷ
1) " ಮೂಲವ್ಯಾಧಿ ಎಂದರೇನು? ಇದು ಹೇಗೆ ಬರುತ್ತದೆ? ಬಂದರೆ ಪರಿಹಾರವೇನು?."
ಪ್ರತಿಯೊಬ್ಬ ಮನುಷ್ಯರ ಗುದದಲ್ಲಿ ಇರುವಸ್ನಾಯುಗಳಿಗೆ ಮೂಲವ್ಯಾಧಿ ನರಗಳು ಎನ್ನುತ್ತಾರೆ. ಇವುಗಳು ಮಲ ವಿಸರ್ಜನೆಯನ್ನ ನಿಯಂತ್ರಣಮಾಡುತ್ತವೆ. ಅತಿ ಹೆಚ್ಚು ಹೊತ್ತು ಮಲವನ್ನ ವಿಸರ್ಜಿಸದಿದ್ದರೆ ಈ ಸ್ನಾಯುಗಳು ಶಕ್ತಿ ಕಳೆದುಕೊಂಡು ಚರ್ಮದಿಂದ ಹೊರ ಬರುತ್ತವೆ. ಆಗ ನಾವು ತಿನ್ನುವ ಆಹಾರದಲ್ಲಿರುವ ಕಾರ ಇವುಗಳ ರಕ್ತನಾಳಗಳಿಗೆ ತಟ್ಟುವುದರಿಂದ ಉರಿ ಉಂಟಾಗುತ್ತದೆ. ಆದಷ್ಟು ಸರಿಯಾದ ಸಮಯಕ್ಕೆ ಮಲ ವಿಸರ್ಜನೆ ಮಾಡಿದರೆ ಮತ್ತು ಊಟದಲ್ಲಿ ಖಾರ ಕಡಿಮೆ, ಹೆಚ್ಚು ನಾರಿನ ಅಂಶವಿರುವ ಆಹಾರ ತಿನ್ನುವುದರಿಂದ ಇವುಗಳಿಂದತಪ್ಪಿಸಿಕೊಳ್ಳಬಹುದು.. ಅನುಸರಿಸದಿದ್ದರೆ ಇದೊಂದು ಭಯಾನಕ ರೋಗ ಮುಂದೆ ಗುದ ಕ್ಯಾನ್ಸರ್ ಆಗಿ ಬದಲಾಗುತ್ತದೆ...
2) ✓ಸಿರಿಧಾನ್ಯಗಳು ಎಂದರೇನು, ಇವುಗಳ ಉಪಯೋಗ ಏನು?
ಅತಿ ಕಡಿಮೆ ನೀರಿನಲ್ಲಿ ಹೆಚ್ಚು ಉಷ್ಣಾಂಶವಿರುವ ಪರಿಸರದಲ್ಲಿ ಬೆಳೆಯುವ ಅತಿ ಚಿಕ್ಕ ಧಾನ್ಯಗಳು. ಸಿರಿ ಎಂದರೆ ಇವುಗಳಲ್ಲಿ ಪೋಷಕಾಂಶ ಶ್ರೀಮಂತ. ಬಹಳ ಕಡಿಮೆ ನೀರು ಬಳಸಿ ಬೆಳೆಯುವುದರಿಂದ ಇವುಗಳಲ್ಲಿ ನಾರಿನಾಂಶ ಹೆಚ್ಚಾಗಿದ್ದು, ಕೊಬ್ಬಿನಾಂಶ ಕಡಿಮೆ ಇರುತ್ತದೆ. ಇವುಗಳು ದೇಹದಲ್ಲಿ ಕ್ಯಾನ್ಸರ್, ಮೂಲವ್ಯಾಧಿ, ಕರುಳು ಸಮಸ್ಯೆ ಬೊಜ್ಜು ಸಾಕಷ್ಟು ಮರಣಾಂತಿಕ ರೋಗಗಳಿಂದ ದೇಹವನ್ನ ರಕ್ಷಿಸುತ್ತವೆ. ಅಕ್ಕಿ ಬದಲಾಗಿ ಇವುಗಳ ಅನ್ನವನ್ನು ಬಳಸಿದರೆ ಸಕ್ಕರೆ ಕಾಯಿಲೆಗೆ ರಾಮಬಾಣ ಈ ಸಿರಿಧಾನ್ಯ.ಉದಾಹರಣೆ ಸಾಮೆ, ಬರಗ, ನವನಿ ಮುಂತಾದವು. ಇವು ಭಾರತ ದೇಶದ, ಆಯುರ್ವೇದದ ಮೂಲ ಆಹಾರ ಧಾನ್ಯ.
3) ವಾತ, ಪಿತ್ತ ಮತ್ತು ಕಫ ಇವುಗಳ ನಡುವಿನ ವ್ಯತ್ಯಾಸವೇನು?
✓ಮಾನವರಲ್ಲಿ ಮೂರು ತರ ವಾತದೇಹಿ,ಪಿತ್ತದೇಹಿ ಮತ್ತು ಕಪಾದೇಹಿ ಶರೀರ ಇರುತ್ತವೆ. ಶರೀರದಲ್ಲಿ ವಾತ ಇದ್ದರೆ ನರದೋಷಗಳಿಂದ ಬಳಲುತ್ತಾರೆ,ಅದೇ ದೇಹದ ವಿವಿಧ ಭಾಗಗಳ ನೋವು.ಪಿತ್ತ ಹೊಂದಿರುವ ಜನರು ಜೀರ್ಣ ಕ್ರಿಯೆಯ ಸಮಸ್ಯೆ ಹೊಂದಿರುತ್ತಾರೆ, ಹಾಗೂ ಕಫ ಹೊಂದಿರುವ ಜನರು ಶ್ವಾಸಕೋಶದ ಮತ್ತು ಉಸಿರಾಟದ ಸಮಸ್ಯೆ ಹೊಂದಿರುತ್ತಾರೆ. ನಮ್ಮ ಶರೀರದ ಎಲ್ಲಾ ವಿಧದ ರೋಗಕ್ಕೆ ಕಾರಣ ಇವುಗಳೆ ಆಗಿವೆ. ಹಾಗಾಗಿ ಪರಿಹಾರವೇನೆಂದರೆ ನಿಯಮಿತವಾದ ದೈಹಿಕಕೆಲಸ, ನಡಿಗೆ, ರಕ್ತ ಸಂಚಾರ ಹೆಚ್ಚಿಸುತ್ತದೆ (ವಾತ) ಹುಳಿ, ಕಡಿಮೆ ಆಹಾರ ಸೇವನೆ (ಪಿತ್ತ) ಮತ್ತು ಬೆಳಗಿನ ಅವಧಿಯಲ್ಲಿ ದೀರ್ಘಉಸಿರಾಟ, ಹೆಚ್ಚು ಆಮ್ಲಜನಕ ಸೇವನೆ (ಕಪ) ಇವುಗಳಿಗೆ ಪರಿಹಾರ. ನಮ್ಮ ಆಯುರ್ವೇದದಲ್ಲಿ ಕೊಡುವ ಔಷಧಿ ಇವುಗಳ ಮೇಲೆ ಅವಲಂಬನೆಯಾಗಿದೆ.
4) Polished(ಒಳ್ಳೆಯ) ಮತ್ತು unpolished(ರೇಷನ್) ಅಕ್ಕಿಯ ನಡುವಿನ ವ್ಯತ್ಯಾಸ?
✓. ರೇಷನ್ ಅಕ್ಕಿಯಲ್ಲಿ ಹೊರಪದರ(ಗಂಜಿ)ಇರುತ್ತದೆ. ಈ ಹೊರಪದರ ಸಾಕಷ್ಟು ವಿಟಮಿನ್ಸ್, ಪ್ರೋಟೀನ್ಸ್, ಮಿನರಲ್ಸ್ ಮತ್ತು ನಾರು ಪದಾರ್ಥ ಹೊಂದಿರುತ್ತದೆ. ಆದರೆ ಪಾಲಿಸ್ ಮಾಡಿದ ಅಕ್ಕಿಯಲ್ಲಿ ಹೊರ ಪದರ ತೆಗೆದು ಹಾಕಿ, ಬರಿ ಒಳಗಿನ ಭಾಗ ಉಳಿದುಕೊಂಡಿರುತ್ತದೆ. ಅದರಲ್ಲಿ ಕೇವಲ ಪಿಷ್ಟ(starch) ಮಾತ್ರ ಇದ್ದು, ಅದು ದೇಹದಲ್ಲಿ ಹೋಗಿ ಜೀರ್ಣವಾದಾಗ ಗ್ಲುಕೋಸ್ ಮಾತ್ರ ಬಿಡುಗಡೆಯಾಗುತ್ತದೆ. ದೇಹದಲ್ಲಿ ಇನ್ಸುಲಿನ್ ಕೊರತೆಯಾದಾಗ ಗ್ಲುಕೋಸ್ ಗ್ಲೈಕೋಜನ್ ಆಗದೆ ರಕ್ತದಲ್ಲೇ ಉಳಿದು ಹೋಗುತ್ತದೆ. ಹೆಚ್ಚು polished ಅಕ್ಕಿಯನ್ನ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯ (glucose) ಮಟ್ಟ ಹೆಚ್ಚಾಗಿ ಸಕ್ಕರೆ ಕಾಯಿಲೆ ಬರುತ್ತದೆ. ಹಾಗಾಗಿ ಬಡವರಿಗಿಂತ, ಶ್ರೀಮಂತರಲ್ಲಿ ಸಕ್ಕರೆ ಕಾಯಿಲೆ ಹೆಚ್ಚು. ಹಾಗಾಗಿ ಇಂದು ಶ್ರೀಮಂತರ ಕಾಯಿಲೆಯಂದು ಹೆಸರುವಾಸಿಯಾಗಿದೆ. ಕಾರಣ polished ರೈಸ್🥱
No comments:
Post a Comment