ವೈಜ್ಞಾನಿಕ ಕಾರಣ @39
(Shiva Negali, teacher)
* ಲಿವರ್ ,ಕಿಡ್ನಿಯಲ್ಲಿ ಹರಳು ಉಂಟಾಗುವುದು ಹೇಗೆ?
✓ ನಾವು ತಿನ್ನುವ ಆಹಾರದಲ್ಲಿ ಚಿಕ್ಕಚಿಕ್ಕ ಕಲ್ಲು/ಮಣ್ಣಿನ ಕಣಗಳು, ಹಣ್ಣಿನಬೀಜಗಳು ಸೇರಿರುತ್ತವೆ. ಇವುಗಳಿಂದ ಯಾವುದೇ ಕಾರಣಕ್ಕೂ ದೇಹದ ಅಂಗಗಳಲ್ಲಿ ಹರಳುಗಳು ಉಂಟಾಗುವುದಿಲ್ಲ. ಜೀರ್ಣಕ್ರಿಯೆ ನಂತರ ಇವು ಮಲದಜೊತೆ ಹೊರಬರುತ್ತವೆ. ನಾವು ಸೇವಿಸುವ ಆಹಾರದಲ್ಲಿ, ಉಪ್ಪು,ಹುಳಿ,ಕಾರ,ಸಿಹಿ,& ಮಸಾಲೆಯಲ್ಲಿರುವ ಲವಣಗಳು ಜೀರ್ಣಕ್ರಿಯೆ ನಂತರ ರಕ್ತದೊಂದಿಗೆ ಸಂಚರಿಸುವಾಗ ಕಿಡ್ನಿ,ಲಿವರ್ ಮುಂ,ಅಂಗಗಳ ತಳದಲ್ಲಿ ಸೇರಿ ನೀರಿನಂಶ ಕಡಿಮೆಯಾದಾಗ ಅಲ್ಲೇಉಳಿದು ಹರಳು ಉಂಟಾಗುತ್ತವೆ. ಇವುಗಳು ನಾಳಗಳ ದ್ವಾರಕ್ಕೆ ಅಡ್ಡವಾಗಿ, ಮೂತ್ರ/ರಸ ಹೊರ ಹೋಗದಂತೆ ತಡೆದು ವಿಪರೀತ ನೋವು ಉಂಟುಮಾಡಿ ವಿರುದ್ಧದಿಕ್ಕಿನಲ್ಲಿ ಮೂತ್ರ/ರಸ ಚಲಿಸುವಂತೆಮಾಡಿ ನೋವು/ಸಾವಿಗೆ ಕಾರಣವಾಗಬಹುದು. ಸಮಯಕ್ಕೆ ಸರಿಯಾಗಿ ನೀರು ಕುಡಿಯುವುದು & ಹೆಚ್ಚು ನೀರಿನ ಅಂಶವಿರುವ, ಕಡಿಮೆ ಲವಣಾಂಶವಿರುವ ಆಹಾರ ಬಳಸುವುದು ಇದಕ್ಕೆ ಪರಿಹಾರ. ಇತ್ತೀಚಿನ ದಿನದಲ್ಲಿ ರಸ್ತೆಬದಿಯಲ್ಲಿ, ದೊಡ್ಡದೊಡ್ಡ ಹೋಟೆಲ್ನಲ್ಲಿ ಸೇವಿಸುವ ಹೆಚ್ಚು ಮಸಾಲೆಭರಿತ ಆಹಾರ, ಹರಳು ಉಂಟಾಗಲು ಮೂಲಕಾರಣ.
No comments:
Post a Comment