*ಬರ್ಡ್ ಮ್ಯಾನ್*
ಭಾರತ ಕಂಡ ಬರ್ಡ್ ಮ್ಯಾನ್
ಅವರೇ ನಮ್ಮ ಡಾ.ಸಲೀಂ ಅಲಿ,
ಅಂತಃಕರಣದಿಂದ ಆಲಿಸಿದರು
ಹಕ್ಕಿ-ಪಿಕ್ಕಿ ಸಂಕುಲದ ಚಿಲಿ ಪಿಲಿ
ಕೋಳಿಯಂತೆ ಹಕ್ಕಿಯ ಹಲಾಲು
ಮಾಡಿ ತಿನ್ನುತ್ತಿದ್ದರು ಮನೆಯಲ್ಲಿ,
ಹೀಗೊಂದು ಹಕ್ಕಿ ಸೀಳುತಲಿರಲು
ಹಳದಿ ಚುಕ್ಕಿ ಕಂಡಿತು ಗಂಟಲಲ್ಲಿ
ಆ ಹಕ್ಕಿಯು ತಿನ್ನಲು ಯೋಗ್ಯವೇ
ಪ್ರಶ್ನೆಯು ಮೂಡಿತು ಮನದಲಿ,
ಹಕ್ಕಿಯ ಪತ್ತೆ ಹಿಡಿಯಲು ಸಂಸ್ಥೆಗೆ
ಹಕ್ಕಿಯ ಕಳಿಸಿ ಬರೆದರು ಪತ್ರದಲಿ
ಹಕ್ಕಿಯ ಗುರ್ತಿಸಿ ಹೆಸರಿಸಿ ಜೊತೆಗೆ
ತೋರಿಸಲು ಸಂಸ್ಥೆಯ ಪಕ್ಷಿಸಂಕುಲ,
ಕೈಗಿತ್ತರು ಪಕ್ಷಿಯ ಕುರಿತು ಪುಸ್ತಕವ
ಓದುತಲಿ ಮೂಡಿತಾಗ ಕುತೂಹಲ
ಅಂದು ಭಾರತದಲ್ಲಿ ಇರಲಿಲ್ವಂತೆ
ಶಾಖೆಗಳು ಪಕ್ಷಿ ಅಧ್ಯಯನಕ್ಕೆಂದು,
ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ
ಅಧ್ಯಯನ ನಡೆಸಿದರಂತೆ ಬಂದು
ಪಕ್ಷಿಗಳ ಸರ್ವೇಕ್ಷಣೆಯ ಕಾರ್ಯಕ್ಕೆ
ಬ್ರಿಟಿಷೇತರರಲ್ಲಿ ಸುವರ್ಣ ಪದಕ,
ಕಾಶ್ಮೀರದ ಹಿಡಿದು ಕೇರಳದವರೆಗೆ
ಕಚ್ ಸುತ್ತುವರಿದು ಮೀಶ್ಮಿ ತನಕ
ತಿಳಿಸಿದರು ನೇಕಾರ ಹಕ್ಕಿತ ಕುರಿತು
ಅರ್ಧಗೂಡ ಗಂಡು ಕಟ್ಟವುದೆಂದು,
ಹೆಣ್ಣು ಹಕ್ಕಿ ಒಪ್ಪಿ ಒಳ ಬಂದಾಗಲೇ
ಪೂರ್ಣವಾಗುವದು ಗೂಡೊಂದು
ಗೈದಿರುವ ಸೇವೆಗೆ ಒಲಿದು ಬಂತು
ಪದ್ಮ ಭೂಷಣ, ಪದ್ಮ ವಿಭೂಷಣ
ಪಕ್ಷಿ ಅಧ್ಯಯನಕ್ಕೆಂತಲೇ ಮೀಸಲು
ಸಲೀಂ ಅಲಿಯವರ ಇಡೀ ಜೀವನ
*ಎಮ್ಮಾರ್ಕೆ*

No comments:
Post a Comment