*ಒಳ್ಳೆಯ ಸಂಸ್ಕಾರದಿಂದ ಸಂಸಾರವೇ ಗೆಲ್ಲುತ್ತದೆ*...
*ಆ, ತಂದೆ ತಾಯಿ ತಮ್ಮ ಮಗನನ್ನು ಮಮತೆಯಿಂದ ಸಾಕಿ,ವಿದ್ಯಾಭ್ಯಾಸವನ್ನು ಕೊಡಿಸಿದರು.. ಮಗನೂ ಸಹ ಕಷ್ಟಪಟ್ಟು ಓದಿ, ವಿಧೇಯನಾಗಿ ನಡೆದು, ವಿಧ್ಯಾಭ್ಯಾಸ ಮುಗಿಸಿ ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದನು.ಒಂದು ಉತ್ಕೃಷ್ಟ ಕಂಪನಿಯಲ್ಲಿ ಕೆಲಸವೂ ಅರಸಿಕೊಂಡು ಬಂತು.ಮೊದಲನೇ ಸಂಬಳವೂ ಸಹ ಕೈ ಸೇರಿತು .*
*ತನ್ನ ಮೊದಲ ಸಂಬಳವನ್ನು ತಾಯಿಯ ಕೈಗೆ ಕೊಟ್ಟು ನಮಸ್ಕರಿಸಿದ.. ತಾಯಿಗೆ ಖುಷಿಯಾಯಿತು.ಅವಳು ಒಂದು ಕ್ಷಣ ಆಲೋಚಿಸಿ, ಮೊದಲು ಇದನ್ನು ನಿಮ್ಮ ತಂದೆಯ ಕೈಗೆ ಕೊಡು ಎಂದಳು.ಮಗನು ತಾಯಿಯ ಮಾತು ಕೇಳಿಸಿಕೊಂಡು, ಕಿವಿಗೆ ಕೇಳಿದರೂ ಕೇಳದಂತೆ ಇದ್ದನು.ಮತ್ತೆ ತಾಯಿಯು,ತಂದೆಯ ಕೈಗೆ ಕೊಡುವಂತೆ ಜೋರಾಗಿ ಹೇಳಿ,ಆ ಹಣವನ್ನುಮರಳಿ ಮಗನ ಕೈಗೆ ನೀಡಿದಳು.*
*ಆಗ ಮಗನು, ಇಲ್ಲಮ್ಮ ನಾನು ಕೊಡುವುದಿಲ್ಲ ಎಂದನು.ಹಾಗೆ ಹೇಳಬಾರದು ಕಂದಾ.. ಎಂದಳು.ನನ್ನಿಂದ ಸಾಧ್ಯವಿಲ್ಲ!! ಸಾಧ್ಯವಿಲ್ಲ!! ಎಂದನು.ಇದರಿಂದ ತಾಯಿಗೆ ಸಿಟ್ಟು ಬಂದಿತು.ಇದುವರೆಗೆ ವಿಧೇಯನಾಗಿದ್ದ ಮಗನ ಈ ವರ್ತನೆಗೆ ನೊಂದಳು.ಬೆಳೆದ ಮಗ ಮುಂದೆ ಮನೆಯ ಜವಾಬ್ಧಾರಿ ಹೊರುವ ಈತ ಹೀಗೇಕೆ ???? ಎಂದು ಮನದಲ್ಲಿಯೇ ಸಂಕಟ ಮಾಡಿಕೊಂಡಳು.ಕೊನೆಗೆ ಏನಾಯಿತೋ ಏನೋ, ಮಗನೆಂದು ನೋಡದೆ ತಕ್ಷಣವೇ ಕಪಾಳಕ್ಕೆ ಚಟಾರ್ ಎಂದು ಭಾರಿಸಿದಳು.ಕೋಪದಿಂದ ಬೈದಳು.....ಹಾಗೆ ಹೀಗೆ ಅಂದಳು. ಮುಂದುವರೆದು,ಮೊದಲ ಸಂಬಳ ತೆಗೆದುಕೊಂಡ ಕೂಡಲೆ ನೀನು ದೊಡ್ಡವನಾದಿಯೇನೋ... ಬಹಳ ದೊಡ್ಡ ವ್ಯಕ್ತಿ ಆಗಿಬಿಟ್ಟಿಯೇನೋ.. ಛೇ! .. ಎಂದು ಮೂದಲಿಸಿದಳು..*
*ತಂದೆಗೆ ಕೊಡು ಎಂಬ ನನ್ನ ಮಾತನ್ನು ಸಹ ದಿಕ್ಕರಿಸಿರುವಿ. ಇದೇನಾ ನೀನು ಇದುವರೆಗೂ ಕಲಿತುಕೊಂಡ ಸಂಸ್ಕಾರ ಎಂದು ಬೈದಳು..*
*ಮಗನು ತನ್ನ ಕೆನ್ನೆಯನ್ನು ಸವರಿಕೊಳ್ಳತ್ತಾ ಕಣ್ಣಿಂದ ಸಿಡಿದ ಹನಿಯನ್ನು ಅಂಗೈಯಿಂದ ಒರೆಸಿಕೊಳ್ಳುತ್ತ...ದುಃಖದಿಂದತಾಯಿಗೆ ಹೇಳುತ್ತಾನೆ. ಇಲ್ಲಮ್ಮ.... ನನ್ನ ತಂದೆಯ ಕೈ ಯಾವತ್ತೂ ಮೇಲೆಯೇ ಇರಬೇಕು.ಕೆಳಗೆ ಕೈ ಚಾಚ ಕೂಡದು.ಹಾಗೆಯೇ ಮೇಲೆಯೇ ಇರಲಿ ಎಂಬುದೇ ನನ್ನ ಅದಮ್ಯ ಆಸೆ.. ಇದುವರೆಗೂ ಅವರಿಂದ ನಾನು ಪಡೆದುಕೊಳ್ಳುವಾಗ ಹೆಮ್ಮೆಯಿಂದ ಸ್ವೀಕರಿಸಿದ್ದೇನೆ. ಈಗ ನಾನು ಅವರಿಗೆ ಇದನ್ನು ಕೊಡುವಾಗ ಅವರ ಕೈ, ನನ್ನ ಕೈ- ಕೆಳಗೆ ಬರುತ್ತದೆ.ಅದು ನನಗಿಷ್ಟವಿಲ್ಲ.ಎಂದೆಂದೂ ಸರ್ವಕಾಲಕ್ಕೂ ನನ್ನ ತಂದೆಯ " ಕೈ" ಮೇಲೆಯೇ ಇರಬೇಕು............................. ನೀವೇ ಇದನ್ನು ಪಪ್ಪ್ ನಿಗೆ ಕೊಟ್ಟು ಬಿಡಿ.ಅವರಿಗೆ ಹಣ ಕೊಡುವಷ್ಟು ಯಾವ ಅರ್ಹತೆಯೂ ನನಗಿಲ್ಲ.ನೀವು ಕೊಡಿ, ನಾನು ನಮಸ್ಕಾರ ಮಾಡಿ ಅವರಿಂದ ಆಶೀರ್ವಾದ ಪಡೆಯುವೆ ಎಂದನು. ತಾಯಿಗೆ ದಿಗ್ಭ್ರಮೆಯಾಯಿತು. ಮೂಖ ಸ್ತಂಭೂತಳಾಗಿ ನಿಂತು ಬಿಟ್ಟಳು............................... ಕೊಠಡಿಯ ಒಳಗೆ ಕುಳಿತು ತಾಯಿ-ಮಗನ ಸಂಭಾಷಣೆಯನ್ನು ಕೇಳಿಸಿ ಕೊಳ್ಳತ್ತಿದ ತಂದೆ,ತಕ್ಷಣ ಹೊರಬಂದು ತಮ್ಮ ಮಗನನ್ನು ನೋಡಿದ.ಕಣ್ಣಲ್ಲಿ ನೀರು ತುಂಬಿ ಬಂತು.ಅದು ಆನಂದ ಭಾಷ್ಬ.ಪನ್ನೀರ ಹನಿ. ತನ್ನ ಎರಡು ಬಾಹುಗಳಿಂದ ಮಗನಿಗೆ ಬಿಗಿಯಾದ ದೀರ್ಘಾಲಿಂಗನ ಮಾಡಿದನು.*
*ತನ್ನ ಮಗ ತನ್ನನ್ನು ಎಷ್ಟು ಚೆನ್ನಾಗಿ ಅರ್ಥೈಸಿಕೊಂಡಿರುವನಲ್ಲ ಎಂದು ಹೆಮ್ಮೆಯಿಂದ ಮಗನ ಕಣ್ಣಿನೊಳಗೆ ತನ್ನ ಬಿಂಬವನ್ನು ನೋಡಿ ಪುಳಕಿತನಾದನು.ಮನದಲ್ಲಿ ಹೆಮ್ಮೆಯ ಸಾರ್ಥಕ ಭಾವ ತುಂಬಿ ಬಂದಿತು.ಮೈ ಮನಸ್ಸು ಹಗುರವಾಗಿ ಗಾಳಿಯಲ್ಲಿ ತೇಲಿದ ಅನುಭವ.ಕೈಯಲ್ಲಿ ಮೋಡ ಹಿಡಿದ ಅನುಭವ.ಆನಂದದ ಕೋಡಿ ಹರಿಯತೊಡಗಿತು. ಇದನ್ನು ನೋಡುತ್ತಿದ್ದ ತಾಯಿಯ ಕಣ್ಣಲ್ಲಿ ಅಮಿತಾನಂದದ ಆನಂದ ಭಾಷ್ಪ ಒಂದೇ ಸವನೆ ಜಿನುಗುತ್ತಿತ್ತು.*
*ತಂದೆ ಮಗನ ಬಾಂಧವ್ಯ* *ಹೀಗಿರಬೇಕಲ್ಲವೇ...*...
*ಒಳ್ಳೆಯ ಸಂಸ್ಕಾರದಿಂದ ಸಂಸಾರವೇ ಗೆಲ್ಲುತ್ತದೆ* .🙏
No comments:
Post a Comment