Thursday, August 31, 2023

 ದಡ್ಡನೂ ಗೆಲುವು ಸಾಧಿಸಬಹುದು*

ಮಕ್ಕಳು ಬಾಲ್ಯದಲ್ಲಿ ಹೇಗಿರುತ್ತಾರೆ ಎನ್ನುವುದರ ಆಧಾರದ ಮೇಲೆ ಅವರ ಇಡೀ ಭವಿಷ್ಯವನ್ನು ನಿರ್ಧಾರ ಮಾಡಲು ಆಗುವುದಿಲ್ಲ. ಬಾಲ್ಯವೇ ಬೇರೆ ಬದುಕೇ ಬೇರೆ. ಬಾಲ್ಯದ ವಿದ್ಯಾಭ್ಯಾಸದ ಅನುಭವಗಳು ಬಹು ರೋಚಕವಾಗಿರುತ್ತವೆ. ಶಾಲೆ ಎನ್ನುವುದು ಕೆಲವರಿಗೆ ಖುಷಿ, ಕೆಲವರಿಗೆ ಬೇಸರ. ಹಿಂದೆಯಂತೂ ಮಕ್ಕಳನ್ನು ಶಾಲೆಗೆ ಕಳುಹಿಸಲು ಬಹಳ ಕಷ್ಟಪಡಬೇಕಾದ ಪರಿಸ್ಥಿತಿ ಇತ್ತು. ಶಾಲೆಗೆ ಕಳುಹಿಸಲು ದುಡ್ಡಿಲ್ಲದ ಸ್ಥಿತಿ ಕೆಲವರಾದರೆ, ಮಕ್ಕಳಿಗೆ ಮನಸಿಲ್ಲದ್ದು ಇನ್ನೊಂದು!

ಅದರಲ್ಲೂ ಒಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ಹಿಂದಿದ್ದಾನೋ ಅಥವಾ ಮುಂದಿದ್ದಾನೋ ಎಂಬ ವಿಷಯ ಬಹು ಸ್ವಾರಸ್ಯಕರವಾದುದು. ಒಬ್ಬ ವಿದ್ಯಾರ್ಥಿ ಕಲಿಕೆಯಲ್ಲಿ ತುಸು ಹಿಂದೆ ಬಿದ್ದನೆಂದಾದರೆ, ಆತನ ಮಾತಾಪಿತರೂ, ಶಿಕ್ಷ ಕರೂ, ಬಂಧುಗಳೂ, ಸಹಪಾಠಿಗಳೂ ಎಲ್ಲರೂ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಹಾಗಂತ ಮಕ್ಕಳು ಮನಸ್ಸು ಮಾಡಿದರೆ, ವಿಶೇಷ ಪ್ರಯತ್ನ ಮಾಡಿದರೆ, ವಿಶೇಷವಾದ ಸಾಧನೆಯನ್ನು ಮಾಡಬಲ್ಲರು. ಈ ಮಾತಿಗೆ ಒಬ್ಬ ಲೋಕ ವಿಖ್ಯಾತ ವಿಜ್ಞಾನಿಯ ಬದುಕೇ ಒಂದು ದೊಡ್ಡ ನಿದರ್ಶನ.

ವಿಶ್ವ ಪ್ರಸಿದ್ಧ ವಿಜ್ಞಾನಿಯಾದ ಆಲ್ಬರ್ಟ್‌ ಐನ್‌ಸ್ಟೀನ್‌ ಎಲ್ಲರಿಗೂ ಗೊತ್ತು. ಅವರು ಬಾಲ್ಯದಲ್ಲಿ ಗಣಿತದಲ್ಲಿ ತುಸು ಹಿಂದುಳಿದ ವಿದ್ಯಾರ್ಥಿ ಆಗಿದ್ದರು. ಆದ್ದರಿಂದಲೇ ಸಹಪಾಠಿಗಳೆಲ್ಲರೂ 'ದಡ್ಡ', 'ಪೆದ್ದ' ಎಂದು ತಮಾಷೆ ಮಾಡುತ್ತಿದ್ದರು. ಇದರಿಂದ ಅವರಿಗೆ ಬೇಸರವಾಗುತ್ತಿತ್ತು. ಅವರ ಸಹಪಾಠಿಯೊಬ್ಬನಂತೂ ಅವರ ಕೋಟಿನ ಬೆನ್ನ ಮೇಲೆ 'ದಡ್ಡ' ಎಂದು ಬರೆದ ಚೀಟಿಯನ್ನು ಅಂಟಿಸಿ ಬಿಟ್ಟಿದ್ದ. ಹಾಗಂತ ಇದರ ಬಗ್ಗೆ ತುಟಿ ಬಿಚ್ಚುವಂತಿಲ್ಲ. ಯಾಕೆಂದರೆ, ವಿರೋಧಿಸಿದರೆ, ಆಕ್ಷೇಪ ಮಾಡಿದರೆ, ಬೈದರೆ ಇನ್ನಷ್ಟು ತೊಂದರೆ, ಪೀಕಲಾಟ ಮಾಡುತ್ತಿದ್ದರು. ಅಧ್ಯಾಪಕರ ಬಳಿ ದೂರು ಹೇಳಲು ಹೋದರೆ ಅವರೂ ಲೆಕ್ಕಿಸುತ್ತಿರಲಿಲ್ಲ. 'ಕೆಲವರು ಏಳು ಜನ್ಮಗಳಲ್ಲಿ ಗಣಿತ ಕಲಿಯುತ್ತಾರೆ' ಎಂದು ಹೀಯಾಳಿಸುತ್ತಿದ್ದರಂತೆ.

ಇದೆಲ್ಲವೂ ಬಾಲಕ ಅಲ್ಬರ್ಟ್‌ ಹೃದಯವನ್ನು ಚುಚ್ಚಿದರೂ ಆತ ಹಿಂಜರಿಯಲಿಲ್ಲ. ಇದನ್ನೇ ಒಂದು ಪಂಥಾಹ್ವಾನವನ್ನಾಗಿ ಪರಿಗಣಿಸಿ ಗಣಿತವನ್ನು ಗಂಭೀರವಾಗಿ ಅಧ್ಯಯನ ಮಾಡಲು ನಿರ್ಧರಿಸಿದ. ಊಟ, ವಿದ್ಯೆ, ಆಟ-ಪಾಠಗಳೆಲ್ಲವೂ ಗಣಿತಮಯವಾಗಿ ಬಿಟ್ಟವು. ಗಣಿತ ಪರಿಜ್ಞಾನವು ವಿಜ್ಞಾನದಲ್ಲೂ ಗಾಢ ಆಸಕ್ತಿಯನ್ನು ಉಂಟು ಮಾಡಿತು. ಇದರ ಫಲವಾಗಿ ಬಾಲ್ಯದಲ್ಲಿ 'ಪೆದ್ದ'ನಾಗಿದ್ದ ಆ ಹುಡುಗ. ಮಹಾನ್‌ ಗಣಿತಜ್ಞ & ವಿಜ್ಞಾನಿಯೂ ಆದ ಆಲ್ಬರ್ಟ್‌ ಐನ್‌ಸ್ಟೈನ್‌ ಎಂದು ವಿಶ್ವ ವಿಖ್ಯಾತನಾಗಿ ಬಿಟ್ಟ.

ಪರಿಸ್ಥಿತಿ ಇಂದಿಗೂ ಬದಲಾಗಿಲ್ಲ. ತಮಾಷೆ ಮಾಡುವವರು ಈಗಲೂ ಇದ್ದಾರೆ. ಕಲಿಕೆ ವೇಳೆ ಈ ವಿಷಯ ಕಠಿಣವಾಗಿದೆ, ಇತರರು ತಮಾಷೆ ಮಾಡುತ್ತಾರೆ ಎಂಬುದನ್ನು ಲೆಕ್ಕಿಸದೆ, ಧೈರ್ಯದಿಂದ ಮುನ್ನುಗ್ಗಿದರೆ ಗೆಲುವು ಸಾಧಿಸಲು ಸಾಧ್ಯ. ಸ್ವಲ್ಪವೇ ಸ್ವಲ್ಪ ಗಂಭೀರ ಪ್ರಯತ್ನ ಮಾಡಿದರೂ ಸಾಕು, ಎಂಥ ದಡ್ಡನೂ ಬುದ್ಧಿವಂತರಾಗಿ ಗೆಲುವು ಸಾಧಿಸಬಹುದಾಗಿದೆ ಎಂಬುದನ್ನು ಮರೆಯಬಾರದು ಎನ್ನುವುದು ಈ ಕಥೆಯ ಸಾರಾಂಶ. ಹಾಗಾಗಿ, ದಡ್ಡ ಎಂದು ಯಾರೂ ಬೇಜಾರು ಮಾಡುವುದು ಬೇಡ, ಹೆತ್ತವರಿಗೂ ಅಂಥ ನೋವು ಬೇಡ. ಮಕ್ಕಳಲ್ಲೊಂದು ಧೈರ್ಯವನ್ನು, ಆತ್ಮವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡೋಣ.

ಕೃಪೆ:ಡಾ. ಡಿ. ವೀರೇಂದ್ರ ಹೆಗ್ಗಡೆಯವರು.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು