Monday, August 21, 2023

 ಅಹಂಕಾರ ಅಳಿಯದ ಹೊರತು ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ. 

‘ನಾ’, ‘ನಾನು’, ‘ನಾನೇ’, ‘ನನ್ನ’, ‘ನನಗೆ’, ‘ನನ್ನನ್ನು’, ‘ನನ್ನಿಂದ’ ಎನ್ನುವ ಪದಗಳು ಕೇವಲ ಅಹಂಕಾರ ಸೂಚಕವಾಗಿವೆ. ನಮ್ಮ ಎಲ್ಲ ಬಯಕೆಗಳೂ ಆ ಅಹಂಕಾರವನ್ನು ತಣಿಸಿಕೊಳ್ಳುವುದಕ್ಕಾಗಿಯೇ ಇರುತ್ತವೆ. ಎಲ್ಲಿಯ ತನಕ ನಮ್ಮನ್ನು ನಾವು ಈ ಜಗತ್ತಿನಲ್ಲಿರುವ ವಸ್ತು, ವಿಷಯ ಮತ್ತು ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳುತ್ತೇವೆಯೋ, ಅಲ್ಲಿಯ ತನಕ ಅಹಂಕಾರ ಹೋಗುವುದೇ ಇಲ್ಲ.

ಶಂಕರಾಚಾರ್ಯರ ನೀತಿ ಪಾಠ :

ಒಮ್ಮೆ ಶಂಕರಾಚಾರ್ಯರು ಅವರ ಶಿಷ್ಯರ ಜೊತೆಗೆ ಹಿಮಾಲಯದತ್ತ ಯಾತ್ರೆ ಮಾಡುತ್ತಿದ್ದರು. ಮುಂದೆ ನಡೆಯುತ್ತಾ ಅಲಕನಂದಾ ನದಿಯ ತೀರಕ್ಕೆ ಅವರೆಲ್ಲರೂ ಬಂದು ಸೇರಿದರು. ಆಗ ಒಬ್ಬ ಶಿಷ್ಯನು ಅವರ ಸ್ತುತಿ ಮಾಡುತ್ತ ‘ಆಚಾರ್ಯರೆ, ನಿಮ್ಮ ಜ್ಞಾನವು ಎಷ್ಟು ಅಗಾಧವಾಗಿದೆ! ನಮ್ಮ ಮುಂದೆ ಪವಿತ್ರ ಅಲಕನಂದಾ ನದಿಯು ಹರಿಯುತ್ತಿದೆ. ನಿಮ್ಮ ಜ್ಞಾನವು ಈ ಅಲಕನಂದಾ ನದಿಯ ಪ್ರವಾಹಕ್ಕಿಂತಲೂ ಎಷ್ಟೋ ಪಟ್ಟು ದೊಡ್ಡದಾಗಿರುವ ಆ ಮಹಾಸಾಗರದಂತೆ ಭಾಸವಾಗುತ್ತದೆ‘.

ಆಗ ಶಂಕರಾಚಾರ್ಯರು ಕೈಯಲ್ಲಿರುವ ದಂಡವನ್ನು ನೀರಿನಲ್ಲಿ ಮುಳುಗಿಸಿ ಹೊರತೆಗೆದರು. ಶಿಷ್ಯರಿಗೆ ತೋರಿಸಿ ಹೀಗೆ ಹೇಳಿದರು, ‘ನೋಡು, ಈ ದಂಡವನ್ನು ಆ ಪವಿತ್ರ ನದಿಯಲ್ಲಿ ಅದ್ದಿ ತೆಗೆದಿದ್ದೇನೆ. ಆದರೆ ಇದಕ್ಕೆ ಒಂದೇ ಒಂದು ಹನಿ ನೀರು ಮಾತ್ರ ಅಂಟಿಕೊಂಡಿದೆ ಅಲ್ಲವೇ!’ ನಗುತ್ತಲೇ ಶಂಕರಾಚಾರ್ಯರು ಮುಂದುವರಿಸಿದರು. ‘ಅರೆ ಹುಚ್ಚ, ನನ್ನ ಜ್ಞಾನದ ಪರಿಮಿತಿ ಏನು ಗೊತ್ತೇ? ಅಲಕನಂದೆಯಲ್ಲಿ ಎಷ್ಟೊಂದು ನೀರಿದೆ! ಆದರೆ ಅದಷ್ಟೂ ನೀರಿನಲ್ಲಿ ಈ ದಂಡವನ್ನು ಅಂಟಿಕೊಂಡಿದ್ದು ಕೇವಲ ಒಂದು ಬಿಂದು! ಅಂತಯೇ ಸಮಸ್ತ ಬ್ರಹ್ಮಾಂಡದಲ್ಲಿರುವ ಜ್ಞಾನಸಾಗರದಲ್ಲಿ ನನ್ನಲ್ಲಿರುವ ಕೇವಲ ಒಂದು ಬಿಂದು ಜ್ಞಾನವಷ್ಟೆ.

ಆದಿ ಶಂಕರಾಚಾರ್ಯರೇ ತಮ್ಮಲ್ಲಿರುವ ಅಗಾಧ ಜ್ಞಾನದ ಬಗ್ಗೆ ಹೀಗೆ ಹೇಳಿರಬೇಕಾದರೆ, ನಾವು ನೀವು ಏನು ಹೇಳುವುದು?

ಅಹಂಕಾರ ಅಳಿಯದ ಹೊರತು ವ್ಯಕ್ತಿತ್ವ ವಿಕಸನ ಸಾಧ್ಯವಿಲ್ಲ.

ಯಾವುದೇ ವಿಷಯದ ಬಗ್ಗೆ ಅಹಂಕಾರ ಬೇಡ.                    

ಕೃಪೆ: ಸಣ್ಣ ಕಥೆ ವಾಟ್ಸ್ ಆಪ್ ಗ್ರೂಪ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು