‘ಬಾಬ್ಬಿ ಫಿಶರ್’- ಚದುರಂಗ
ಸಾಲಾಗಿ ಕೂತಿದ್ದ ಇಪ್ಪತ್ತು ಜನ ವಿದ್ಯಾರ್ಥಿಗಳ ಮುಂದಿರುವ ಟೇಬಲ್ಲಿನ ಮೇಲೆ ಚೆಸ್ ಬೋರ್ಡುಗಳನ್ನು ಜೋಡಿಸಲಾಗಿತ್ತು.
ಒಬ್ಬ ಅಮೇರಿಕನ್ ಗ್ರಾಂಡ್ ಮಾಸ್ಟರ್ ಪ್ರತಿಯೊಬ್ಬ ವಿದ್ಯಾರ್ಥಿಗಳ ಮುಂದಿದ್ದ ಚೆಸ್ ಬೋರ್ಡಿನ ಒಂದೊಂದು ಕಾಯಿ ನಡೆಸುತ್ತಾ ಮುಂದೆ ಸಾಗುತ್ತಿದ್ದನು ಆ ಗ್ರಾಂಡ್ ಮಾಸ್ಟರ್ ಮಿಕ್ಕವರ ಕಾಯಿ ನಡೆಸುತ್ತಾ ಒಂದು ಸುತ್ತು ಬರುವುದರೊಳಗೆ ಹಿಂದಿನವರು ಕಾಯಿ ನಡೆಸಿರಬೇಕಿತ್ತು.
ವಿದ್ಯಾರ್ಥಿಗಳೆಲ್ಲರೂ ಹನ್ನೆರಡು ವರ್ಷದದವರಾದ್ದರಿಂದ ಆ ಗ್ರಾಂಡ್ ಮಾಸ್ಟರನಿಗೆ ಚದುರಂಗದ ಕಾಯಿಗಳನ್ನು ನಡೆಸುವುದು ಏನಂತಹಾ ಸಮಸ್ಯೆಯಾಗಿರಲಿಲ್ಲ .
ಎಲ್ಲರ ಚೆಸ್ ಬೋರ್ಡಿನ ಮುಂದೆ ಹೋದ ತಕ್ಷಣ ತಟಕ್ಕನೆ ಕಾಯಿ ನಡೆಸಿ ಮುಂಜೆ ಸಾಗುತ್ತಿದ್ದ ಆ ಗ್ರಾಂಡ್ ಮಾಸ್ಟರನಿಗೆ ಒಬ್ಬ ಹುಡುಗನ ಚೆಸ್ ಬೋರ್ಡಿನ ಮುಂದೆ ಮಾತ್ರ ಈ ಸ್ವಲ್ಪ ಹೊತ್ತು ಯೋಚಿಸಿ ಕಾಯಿ ನಡೆಸಬೇಕಾದಂತೆ ತೋರುತ್ತಿತ್ತು
ನಂತರ ಸಮಯ ಮುಂದುವರೆದಂತೆ ಎಲ್ಲರ ಬೋರ್ಡಿನ ಮುಂದೆಯೂ ನೋಡಿದ ತಕ್ಷಣಕ್ಕೆ ಕಾಯಿ ನಡೆಸಿ ಮುಂದೆ ಸಾಗುತ್ತಿದ್ದ ಆ ಗ್ರಾಂಡ್ ಮಾಸ್ಟರನಿಗೆ ಮಾತ್ರ ಆ ಒಬ್ಬ ಹುಡುಗನ ಚೆಸ್ ಬೋರ್ಡಿನ ಮುಂದೆ ಬಂದರೆ ಮಾತ್ರ ಕ್ಷಣಗಳು ಸಾಲದೆ ಈ ಸಲ ಮೂರು ನಿಮಿಷಗಳ ಕಾಲ ಯೋಚಿಸಬೇಕಾದ ಪರಿಸ್ಥಿತಿ ಉಂಟಾಯಿತು ಆದರೂ ಕಾಯಿ ನಡೆಸಿ ಮುಂದುವರೆದನಾದರೂ ಮಿಕ್ಕೆಲ್ಲಾ ವಿದ್ಯಾರ್ಥಿ ಕಾಯಿ ನಡೆಸಿ ಆ ವಿಚಿತ್ರ ನಡೆಗಳ ವಿದ್ಯಾರ್ಥಿಯ ಬೋರ್ಡಿನ ಮುಂದೆ ಬಂದ ಗ್ರಾಂಡ್ ಮಾಸ್ಟರನಿಗೆ ಆಘಾತ ಕಾದಿತ್ತು.
ಅಂದರೆ ಆ ವಿಧ್ಯಾರ್ಥಿ ತನ್ನ ಚೆಸ್ ಬೋರ್ಡಿನ ಮೇಲೆ ಇಟ್ಟಿದ್ದ ಕಾಯಿಗಳ ನಡೆಯಲ್ಲಿ ರಣತಂತ್ರವನ್ನೇನೂ ಹೂಡಿರಲಿಲ್ಲ ಆದರೆ ಆ ವಿದ್ಯಾರ್ಥಿಯು ಕಾಯಿ ನಡೆಸಲು ಬಂದ ಗ್ರಾಂಡ್ ಮಾಸ್ಟರನಿಗೆ ಹೇಳಿದ್ದು
“ಮುಂದಿನ ಹದಿನೆಂಟು ನಡೆಗಳಲ್ಲಿ ನೀವು ಚೆಕ್ ಮೇಟ್ ಆಗುತ್ತೀರಿ” ಎಂದು ನಸುನಕ್ಕನು.
‘ಅಸಲಿಗೆ ಆ ವಿದ್ಯಾರ್ಥಿಯೇ ಸೋಲುವಂತಹಾ ನಡೆಗಳನ್ನು ನಾನು ನಡೆಸಿದ್ದೇನೆ’ಎಂದು ಆ ಗ್ರಾಂಡ್ ಮಾಸ್ಟರ್ ತಿಳಿದಿದ್ದನಾದರೂ...ಆ ವಿದ್ಯಾರ್ಥಿಯೇ ನನ್ನ ಕಾಯಿಗಳನ್ನೂ ಕೂಡ ಅವನಿಗೆ ಬೇಕಿರುವ ಹಾಗೆ ಇಡುವಂತೆ ಪ್ರೇರೇಪಿಸಿದ್ದಾನೆ ಎಂಬುದು ಆ ಗ್ರಾಂಡ್ ಮಾಸ್ಟರನಿಗೆ ಅರ್ಥವಾಗಲಿಕ್ಕೆ ಹತ್ತಾರು ನಿಮಿಷಗಳೇ ಬೇಕಾದವು.
ಅಗ ಆದ ಗಾಬರಿಗೆ ಆ ಗ್ರಾಂಡ್ ಮಾಸ್ಟರ್ ಚೇರನ್ನು ಎಳೆದುಕೊಂಡು ಆ ವಿದ್ಯಾರ್ಥಿಯ ಮುಂದೆ ಕೂತು ಮುಂದಿನ ನಡೆಗಳನ್ನು ಘನಗಂಭೀರವಾಗಿ ಯೋಚಿಸಿದನಾದರೂ ವಿದ್ಯಾರ್ಥಿಯ ಮೊದಲ ಮಾತಿನಂತೆ ಆ ಗ್ರಾಂಡ್ ಮಾಸ್ಟರ್ ಚೆಕ್ ಮೇಟ್ ಆಗಿಹೋದನು.
ಆಟ ಮುಗಿದ ನಂತರ ಬೋರ್ಡ್ ನೋಡಿದರೆ ಗ್ರಾಂಡ್ ಮಾಸ್ಟರಿನ ಕಾಯಿಗಳೇ ಹೆಚ್ಚಾಗಿದ್ದವು ಆದರೂ ಸೋತಿದ್ದನು, ‘ಗೆಲ್ಲಲಿಕ್ಕೆ ಚೆಸ್ ಬೋರ್ಡಿನ ಮೇಲಿರುವ ಕಾಯಿಗಳ ಮೊತ್ತ ಲೆಕ್ಕವಲ್ಲ ! ಬುದ್ಧಿವಂತಿಕೆ ಅಷ್ಟೇ ಮುಖ್ಯ’ ಎಂಬ ಚೆಸ್ ನಿಯಮ ಆ ಗ್ರಾಂಡ್ ಮಾಸ್ಟರನಿಗೆ ಹೊಸ ಪಾಠ ತಿಳಿಸಿದಂತಾಗಿತ್ತು
ಗ್ರಾಂಡ್ ಮಾಸ್ಟರ್ ನ್ನು ಸೋಲಿಸಿದ ಆ ಹುಡುಗನ ಹೆಸರು ‘ಬಾಬ್ಬಿ ಫಿಶರ್’
ನಂತರ ಆ ಬಾಬ್ಬಿ ಫಿಶರನ್ನು ಗ್ರಾಂಡ್ ಮಾಸ್ಟರ್ ಕ್ಲಬ್ಬಿಗೆ ಕರೆಸಿಕೊಂಡು ನಾಲ್ಕು ಜನ ಒಂದು ಬದಿ ಕೂತು 13 ವರ್ಷದ ಬಾಬ್ಬಿ ಫಿಶರನ ಜೊತೆ ಚೆಸ್ ಆಟವಾಡಿದರು ಆದರೆ ಈ ಬಾಬ್ಬಿ ಫಿಶರ್ ಎಂಬ ಪ್ರಚಂಢ ಯೋಚನೆಗಳ ಮುಂದೆ ಅಷ್ಟೂ ಜನ ಗ್ರಾಂಡ್ ಮಾಸ್ಟರುಗಳು ಮಾಕಾಡೆ ಸೋತರು.
ಚದುರಂಗದ ಚೌಕದಲ್ಲಿ
ಎಂಟು ಸೈನಿಕ-ಕೇವಲ ಒಂದು ಹೆಜ್ಜೆ ಮುಂದಿಡುವವು ಇವುಗಳ ಪ್ರತಿಯೊಂದಕ್ಕೂ ಕೇವಲ 1ಪಾಯಿಂಟ್,
ಎರಡು ಒಂಟೆಗಳು ಇವೆರಡೂ ಬೇರೆ ಬೇರೊ ಬಣ್ಣದಲ್ಲಿದ್ದು ತನ್ನ ಬಣ್ಣದ ಚೌಕದಲ್ಲಿ ಮಾತ್ರ ಓಡಾಡುವಂತಹವು ಇವಕ್ಕೆ 3ಪಾಯಿಂಟ್.
ಎರಡು ಕುದುರೆಗಳು ಇವೆರಡೂ ಕೂಡ ಕುದುರೆಯಂತೆ ಮೂರೆ ಚೌಕ ಹಾರಿ ಎಡ ಅಥವಾ ಬಲದ ಚೌಕಕ್ಕೆ ಕೂರುವ ನಿಯಮದವು ಇವಕ್ಕೂ ಕೂಡ 3 ಪಾಯಿಂಟ್.
ಎರಡು ಆನೆ ಕೇವಲ ಸಮಾನಾಂತರವಾಗಿ ಚಲಿಸುವವು ಇವಕ್ಕೆ 5 ಪಾಯಿಂಟ್.
ನಂತರದ್ದು ಮಂತ್ರಿ ಇದು ಎಲ್ಲಾ ದಿಕ್ಕಿನಲ್ಲೂ ಚಲಿಸುವಂತಹುದು 9 ಪಾಯಿಂಟ್.
ಇವಿಷ್ಟೂ ಸೇರಿ ರಾಜನನ್ನು ರಕ್ಷಿಸುವುದೇ ಚದುರಂಗ.
ಈ ಆಟದಲ್ಲಿ ಅದುವರೆಗೂ ಸೈನಿಕನಿಗೆ ಸೈನಿಕನು ಹೊಡೆಯುವುದು,ಮಂತ್ರಿಗೆ ಮಂತ್ರಿ ಹೊಡೆಯುವುದು ಹೀಗೆ ಆಯಾ ಕಾಯಿಯಿಂದ ಅದೇ ಪಾಯಿಂಟಿನ ಅಥವಾ ಸಮಾನ ಬೆಲೆಯ ಕಾಯಿ ಹೋದರೆ ಚಿಂತೆಯಿಲ್ಲ ಎಂಬಂತಹಾ ಕಾನೂನು ಮುರಿದವನೇ ಬಾಬ್ಬಿ ಫಿಶರ್.
ಎದುರಾಳಿಯು ಸಣ್ಣ ಒಂಟೆಯಿಂದ ಮಂತ್ರಿಯನ್ನು ಹೊಡೆಯುವ ಯೋಚನೆ ಹಾಕಿದ್ದರೂ ಅದು ಕಣ್ಣಿಗೆ ಕಾಣುತ್ತಿದ್ದರೂ ಕೂಡ ಅದೇ ಮಂತ್ರಿಯನ್ನು ಕಳೆದುಕೊಂಡು ಗೆಲ್ಲಬಹುದಾ ಎಂಬ ಯೋಚನೆ ಇತ್ತಲ್ಲ ಆ ಯೋಚನೆಗಳೇ ಈ ಅದ್ಭುತ ಆಟಗಾರನನ್ನು ರೂಪಿಸಿದ್ದು.
ಇದರ ಹೊರತಾಗಿ ಈ ಬಾಬ್ಬಿ ಫಿಶರನೇ ಹೋರಾಟದ ಆಟಕ್ಕಿಳಿದನೆಂದರೆ ಆತ ರಾಜನು ಟಾರ್ಗೆಟ್ ಮಾಡಿದ್ದಾನಾ ಅಥವಾ ಮಂತ್ರಿಯನ್ನು ಟಾರ್ಗೆಟ್ ಮಾಡಿದ್ದಾನಾ ಎಂಬುದೇ ಅರಿಯಲಾಗದಂತಹಾ ಗೌಪ್ಯ ನಡೆಗಳನ್ನು ಪ್ರಪಂಚಕ್ಕೆ ಕಲಿಸಿದವನು ಈ ಬಾಬ್ಬಿ ಫಿಶರ್.
ಬೇರೆಲ್ಲಾ ಆಟದಲ್ಲಿ ಅಂದರೆ ಕ್ರಿಕೆಟ್,ಫುಟಬಾಲ್,ವಾಲಿಬಾಲ್,ಟೆನ್ನಿಸ್ ಇವೆಲ್ಲದರಲ್ಲಿಯೂ ಅದೃಷ್ಟ ಎಂಬುದೊಂದು ಇರುತ್ತದೆ ಹಾಗೂ ಯಾವುದೇ ಕ್ರಿಕೆಟ್ ಆಟಗಾರ ಆಡಿದ ನೂರು ಬಾಲುಗಳಲ್ಲಿ ನೂರೂ ಬಾಲುಗಳನ್ನು ಸಿಕ್ಸರಿಗೆ ಅಟ್ಟಲಾಗದು ಆದರೆ ಚೆಸ್ ಆಟ ಏನಿದೆಯಲ್ಲ ಇದರಲ್ಲಿ ಮಾತ್ರ ಯಾವುದೇ ಅದೃಷ್ಟದ ಆಟ ನಡೆಯದು ಇಲ್ಲೇನಿದ್ದರೂ ಬುದ್ಧಿವಂತಿಕೆಗೆ ಮಾತ್ರ ಕೆಲಸ.ಎದುರಾಳಿಯ ಕ್ರಿಮಿನಲ್ ಮನಸ್ಥಿಯನ್ನೂ ಕೂಡ ಅಳೆಯಬಹುದಾದ ಆಟ ಇದು.
ಇಂತಹಾ ಆಟದಲ್ಲಿ ಬೋರ್ಡಿನ ಮೇಲಿರುವ ಯಾವುದೇ ಕಾಯಿಗೆ ಹೆಚ್ಚಿನ ಬೆಲೆಯೇನಿಲ್ಲ ಎಂದು ತಾನು ಆಡಿದ ಎಲ್ಲಾ ಆಟಗಳಲ್ಲೂ ಈ ಬಾಬ್ಬಿ ಫಿಶರ್ ಸಾಬೀತು ಮಾಡುತ್ತಲೇ ಸಾಗಿದನು.
1956 ರಲ್ಲಿ ನ್ಯೂಯಾರ್ಕಿನಲ್ಲಿ ನಡೆದ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಡೊನಾಲ್ಡ್ ಬೈರ್ನ್ ಜೊತೆಗೆ ಆಟವಾಡಿದ 13 ವರ್ಷದ ಕಿರಿಯ ಗ್ರಾಂಡ್ ಮಾಸ್ಟರಾದ ಬಾಬ್ಬಿ ಫಿಶರ್ ಆ ಆಟದಲ್ಲಿ “
B6ನಲ್ಲಿದ್ದ ಕಪ್ಪು ಆನೆಯಿಂದ ಬಿಳಿಯ ಮಂತ್ರಿಯು ಸಾವಿನಂಚಿನಲ್ಲಿ ನಿಂತಿದ್ದಾಗ ಮಂತ್ರಿಯನ್ನು ಬೇರೊ ಜಾಗಕ್ಕೆ ವರ್ಗಾಯಿಸಲು ಹಲವು ದಾರಿಗಳಿದ್ದರೂ ಕೂಡ ಆ ಯಾವುದನ್ನೂ ಆಯ್ದುಕೊಳ್ಳದೆ F4 ರಲ್ಲಿದ್ದ ಸೈನಿಕನಿಂದ E5ನಲ್ಲಿದ್ದ ಸೈನಿಕನ್ನು ಹೊಡೆದು ಹಾಕಿದಾಗ ಚದುರಂಗ ಪಂಡಿತರೂ ಹಾಗೂ ಆಟ ನೋಡುತ್ತಿದ್ದವರೆಲ್ಲರೂ ನಿಬ್ಬೆರಗಾಗಿ ಹೋಗಿದ್ದರು.
ಬಿಳಿಯ ಕಾಯಿಯ ಮುಂದಿನ ನಡೆ ಇದಾಗಬಹುದೆಂದು ಅಂದು ಸೇರಿದ್ದ ಸಾವಿರಾರು ಜನರಲ್ಲಿ ಯಾರೊಬ್ಬರೂ ಊಹಿಸಿರಲಿಲ್ಲ ಏಕೆಂದರೆ ಅಂತಹಾ ಯೋಚನೆ,ಯೋಜನೆಗಳನ್ನು ರೂಪಿಸುತ್ತಿದ್ದವನೇ ಬಾಬ್ಬಿ ಫಿಶರ್ ಅದಾದ ನಂತರ ಹಲವು ಗ್ರಾಂಡ್ ಮಾಸ್ಟರಗಳ ಹೇಳಿಕೆಯಂತೆ ಬಾಬ್ಬಿ ಫಿಶರನ ಬಲಿಷ್ಟ ಕಾಯಿಯೊಂದು ಹೋಗುತ್ತಿದ್ದರೂ ಈ ಬಾಬ್ಬಿ ಫಿಶರ್ ಬೇರಾವುದೋ ಕಾಯಿಯನ್ನು ನಡೆಸಿದನೆಂದರೆ ಎದುರಾಳಿಯ ಸೋಲು ಹತ್ತಿರದಲ್ಲಿದೆ ಎಂದರ್ಥ”ಎಂದಿದ್ದರು.
ಆ ಆಟದಲ್ಲಿ ಮಂತ್ರಿ ಕಳೆದುಕೊಂಡ ನಂತರ ಪ್ರಚಂಢ ಆಟವಾಡಿದ ಬಾಬ್ಬಿ ಮುಂದಿನ ಹಲವಾರು ನಡೆಗಳಲ್ಲಿಯೇ ಗೆಲುವಿನ ನಗೆ ಬೀರಿದನು, ಚೆಸ್ ಇತಿಹಾಸದಲ್ಲಿ ಈ ಆಟ *ಗೇಮ್ ಆಫ್ ದ ಸೆಂಚುರಿ*” ಎಂಬ ಹೆಸರು ಪಡೆಯಿತು.
14 ನೇ ವಯಸ್ಸಿನಲ್ಲಿ ಅವನು ಮೊದಲ ಉತ್ತರ-ಅಮೇರಿಕನ್ "ವಯಸ್ಕ" ಚಾಂಪಿಯನ್ ಆದ, ಈ ಸಾಧನೆಯನ್ನು 8 ಬಾರಿ ಪುನರಾವರ್ತಿಸಲಾಯಿತು (ಅವರು ಆಡಿದ ಎಲ್ಲಾ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳನ್ನು ಗೆದ್ದ)! 15 ನೇ ವಯಸ್ಸಿನಲ್ಲಿ, ಅವರು ಮೊದಲ ಬಾರಿಗೆ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ಗೆ ಅರ್ಹತೆ ಪಡೆದಾಗ ಅಲ್ಲಿಯವರೆಗೆ ಕಿರಿಯ ಗ್ರ್ಯಾಂಡ್‌ಮಾಸ್ಟರ್ ಆದನು.
ಚೆಸ್ ನಲ್ಲಿ ಅನೇಕ ಪ್ರಶಸ್ತಿಗಳನ್ನು ಪಡೆದನು..
ನಾವು ಚದುರಂಗ ಆಡಬೇಕು ಹಾಗು ಮಕ್ಕಳೂ ಬುದ್ಧಿವಂತರಾಗಬೇಕೇ ಹಾಗಿದ್ದರೆ ಈಗಲೇ ಚದುರಂಗ ಕಲಿಸಿ....
ಆಟದಲ್ಲಿ ಬಲಿಷ್ಟ ಕಾಯಿಯೊಂದು ಹೋಗುತ್ತಿದೆ ಎಂಬ ಪರಿಸ್ಥಿಯಲ್ಲಿಯೇ ನಮ್ಮ ಬುದ್ಧಿವಂತಿಕೆಗೆ ಕೆಲಸ ಕೊಡಬೇಕು ,ಯಾವ ಸಂದರ್ಭದಲ್ಲಿ ಎದುರಾಳಿಯು ‘ಬಲಿಷ್ಟ ಕಾಯಿಯನ್ನು ಉಳಿಸಿಕೊಳ್ಳಲು ಈತ ಪ್ರಯತ್ನಿಸುತ್ತಾನೆ’ ಎಂಬ ಊಹೆ ಏನಿರುತ್ತದಲ್ಲಾ ? ಮೊದಲು ಆ ಊಹೆಯನ್ನು ಸೋಲಿಸಬೇಕು ಅದೇ ಎದುರಾಳಿಯ ಮೊದಲ ಸೋಲು ಎಂದಿದ್ದನು.
ಚದುರಂಗದಲ್ಲಿ ನಿಮಗೆ ನೂರಾರು ಆಟಗಾರರು ಇಷ್ಟವಿರಬಹುದು ಆದರೆ ಚದುರಂಗದಲ್ಲಿ ಅದರಲ್ಲಿಯೂ ಚೆಸ್ ಬೋರ್ಡಿನ ಪರಿಸ್ಥಿತಿ ಅದೆಷ್ಟೇ ಹೀನಾಯವಾಗಿದ್ದರೂ ಕೂಡ ಗೆಲ್ಲಬಹುದು ಎಂದು ಬಾಬ್ಬಿ ಫಿಶರ್ ಮೂಡಿಸಿದ ಛಾಪು ಇದೆಯಲ್ಲ ಅದು ಮಾತ್ರ ಮರೆಯಲಸಾಧ್ಯ.
“ಚೆಸ್ ಆಟದಲ್ಲಿ ಎದುರಾಳಿಯನ್ನು ಸೋಲಿಸುವುದು ಗೆಲುವಲ್ಲ ! ನೀವು ಸೋಲದಂತಿರುವುದೇ ಗೆಲುವು “ಅಷ್ಟೇ.👍
No comments:
Post a Comment