Monday, September 18, 2023

 ಹೃದಯ ಶ್ರೀಮಂತಿಕೆ ಮೇಲು



ಒಮ್ಮೆ ಬಿಲ್ ಗೇಟ್ಸ್ ಜೂತೆ ಮಾತನಾಡುತ್ತಿರುವಾಗ ಒಬ್ಬಾತ ಹೇಳಿದ - " ಜಗತ್ತಿನಲ್ಲಿ ನಿಮಗಿಂತಲೂ ದೊಡ್ಡ ಶ್ರೀಮಂತರಿಲ್ಲ ?...

ಆಗ ಬಿಲ್ ಗೇಟ್ಸ್ ತಮ್ಮ ಒಂದು ಅನುಭವವನ್ನು ಈ ಕೆಳಗಿನಂತೆ ವಿವರಿಸುತ್ತಾರೆ‌.

ಕೆಲವು ವರ್ಷಗಳ ಹಿಂದೆ ನನ್ನನ್ನು ಕೆಲಸದಿಂದ ತೆಗೆದುಹಾಕಿದ ಸಮಯವಾಗಿತ್ತು....

ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಒಬ್ಬ ನ್ಯೂಸ್ ಪೇಪರ್ ಮಾರುವ ಹುಡುಗನನ್ನು ನೋಡಿದೆ... ಆ ಹುಡುಗನ ಕೈಯಲ್ಲಿದ್ದ ಪೇಪರ್‌ನ ಹೆಡ್ ಲೈನ್ಸ್ ಓದಿದಾಗ ಒಂದು ಪೇಪರ್ ಖರೀದಿಸಲು ಮುಂದಾದೆ. ಆ ಹುಡುಗನನ್ನು ಕರೆದೆ.. ಆದರೆ ನನ್ನ ಬಳಿ ಚಿಲ್ಲರೆ ಇರಲಿಲ್ಲ.... ಆದ್ದರಿಂದ ನಾನು ಪೇಪರ್ ಬೇಡಾ ಅಂದು ಬಿಟ್ಟೆ..

ಆದರೆ ಆ ಕಪ್ಪು ವರ್ಣದ ಹುಡುಗ ಒಂದು ಪೇಪರನ್ನು ತೆಗೆದು ನನಗೆ ಕೊಟ್ಟ..

ನನ್ನ ಬಳಿ ಚಿಲ್ಲರೆ ಇಲ್ಲ ಅಂತ ಹೇಳಿದಾಗ , ಪರವಾಗಿಲ್ಲ ಇದು ಫ್ರೀಯಾಗಿ ಇರಲಿ ಅಂತ ಹೇಳಿ ಪೇಪರನ್ನು ಕೊಟ್ಟು ಹೊರಟು ಹೋದ....

ಸುಮಾರು ಮೂರು ತಿಂಗಳ ನಂತರ ಪುನಃ ನಾನು ಅದೇ ವಿಮಾನ ನಿಲ್ದಾಣಕ್ಕೆ ಹೋಗಬೇಕಾಯಿತು.

ಪುನಃ ಹಿಂದಿನ ಹಾಗೆ ಹೆಡ್ ಲೈನ್ಸ್ ನೋಡಿದ ನಾನು ಆ ಹುಡುಗನಿಂದ ಪೇಪರ್ ಖರೀದಿಸಲು ಮುಂದಾದೆ. ಅಂದು ಕೂಡಾ ನನ್ನ ಬಳಿ ಚಿಲ್ಲರೆ ಇರಲಿಲ್ಲ.

ಅವತ್ತು ಕೂಡಾ ಆ ಹುಡುಗ ಫ್ರೀಯಾಗಿ ನನಗೆ ಪೇಪರ್ ಕೊಟ್ಟ.. 

ನಾನು ಆತನಿಂದ ಪೇಪರನ್ನು ತೆಗೆದುಕೊಳ್ಳಲು ಹಿಂಜರಿದೆ..

ಆಗ ಆತ ಪರವಾಗಿಲ್ಲ ಇಟ್ಟುಕೊಳ್ಳಿ... 

ನನ್ನ ಲಾಭದಲ್ಲಿ ಒಂದು ಚಿಕ್ಕ ಪಾಲು ಇದಾಗಿದೆ ಅಂತ ಹೇಳುತ್ತಾ ಒತ್ತಾಯಿಸಿ ಪೇಪರ್ ಕೊಟ್ಟು ಹೋದ...

ಹತ್ತೊಂಬತ್ತು ವರ್ಷಗಳ ನಂತರ ನಾನು ಶ್ರೀಮಂತನಾದೆ...

ಅದ್ಯಾಕೋ ನನಗೆ ಆ ಹುಡುಗನನ್ನೊಮ್ಮೆ ಕಾಣಬೇಕು ಅಂತ ಮನಸಾಯಿತು.

ಒಂದೂವರೆ ತಿಂಗಳ ಹುಡುಕಾಟದ ಬಳಿಕ ಆ ಹುಡುಗ ಸಿಕ್ಕಿದ...

ಆತನತ್ರ ನಾನು ಕೇಳಿದೆ - " ನನ್ನ ಗುರುತು ಇದೆಯಾ?"

ಹೌದು ಸರ್ ಗುರುತು ಸಿಕ್ಕಿತು. ತಾವು ಅತ್ಯಂತ ದೊಡ್ಡ ಶ್ರೀಮಂತ ಬಿಲ್ ಗೇಟ್ಸ್ ಅಲ್ಲವೇ?

ಕೆಲವು ವರ್ಷಗಳ ಹಿಂದೆ ನೀನು ನನಗೆ ಎರಡು ನ್ಯೂಸ್ ಪೇಪರ್ ಫ್ರೀಯಾಗಿ ಕೊಟ್ಟದ್ದು ನಿನಗೆ ನೆನಪಿದೆಯಾ?

ಅದಕ್ಕೆ ಪ್ರಾಯಶ್ಚಿತ್ತವಾಗಿ ನಿನಗೆ ಏನಾದರೂ ಕೊಡಲು ನಾನು ಬಯಸುವೆ... ನೀನು ಏನು ಬೇಕಾದರೂ ಕೇಳಬಹುದು...

ಆ ಹುಡುಗ - 

ತಮ್ಮಿಂದ ನನಗೆ ಅದರ ಪ್ರಾಯಶ್ಚಿತ್ತವನ್ನು ಕೊಡಲು ಸಾಧ್ಯವಿಲ್ಲ ಸರ್...

ಬಿಲ್ ಗೇಟ್ಸ್ - ಏನು ಕಾರಣ....!??

ಆ ಹುಡುಗ - ನಾನು ಬಡವನಾಗಿದ್ದಾಗ ನಾನು ನಿಮಗೆ ಕೊಟ್ಟೆ...

ಆದರೆ ತಾವು ಶ್ರೀಮಂತರಾದ ಬಳಿಕ ನನಗೆ ಕೊಡಲು ತಾವು ಬಂದಿದ್ದೀರಿ.., ಹಾಗಿರುವಾಗ ಬಡವನಾಗಿದ್ದ ಅವಸ್ಥೆಯಲ್ಲಿ ನಾನು ಕೊಟ್ಟದ್ದು ಮತ್ತು ಶ್ರೀಮಂತನಾದ ಬಳಿಕ ತಾವು ಕೊಡುವುದಕ್ಕೂ ಸಾಮ್ಯತೆ ಇಲ್ಲ ಅಲ್ಲವೆ ಸರ್....!!

ಇಷ್ಟು ಹೇಳಿದ ನಂತರ ಬಿಲ್ ಗೇಟ್ಸ್ ತನ್ನನ್ನು ಅತಿ ದೊಡ್ಡ ಶ್ರೀಮಂತ ಅಂತ ಹೇಳಿದ ವ್ಯಕ್ತಿಯತ್ರ ಹೇಳುತ್ತಾರೆ - ಈಗ ಹೇಳಿ ಅತ್ಯಂತ ದೊಡ್ಡ ಶ್ರೀಮಂತ ಆ ಕಪ್ಪಾದ ಹುಡುಗನಲ್ಲವೇ...?

ಇಲ್ಲಿ ಬಡವ ಶ್ರೀಮಂತ ಎಂಬುದು ಮುಖ್ಯವಲ್ಲ. ಸಹಾಯ ಮಾಡಲು ಸಮಯದ ಪರಿಧಿ ಇಲ್ಲ. ಹೃದಯ ಶ್ರೀಮಂತಿಕೆ ಮುಂದೆ ಯಾವ ಸಿರಿಮಂತಿಕೆ ಏನು ಅಲ್ಲ......

(ದಾನ ಧರ್ಮ ಮಾಡಲು ಶ್ರೀಮಂತರಾಗಬೇಕಿಲ್ಲ ಅಥವಾ ಶ್ರೀಮಂತನಾಗುವವರೆಗೂ ಕಾಯಬೇಕಿಲ್ಲ...

ಸಹಾಯ ಮಾಡುವ ಗುಣಕ್ಕೆ ಸಮಯದ ಪರಿಧಿಯಿಲ್ಲ. ಶ್ರೀಮಂತ ಬಡವ ಎಂಬ ಭೇದಭಾವ ಇಲ್ಲ. ಆ ಗುಣವು ಹೃದಯದಿಂದ ಬರಬೇಕು). ಕೃಪೆ :ವಾಟ್ಸ್ ಆಪ್ ಗ್ರೂಪ್.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು