ಕಥೆ196-ವಾಲ್ಮೀಕಿ ಜಯಂತಿ
ಕ್ರೂರನಾಗಿಧ್ದ ವ್ಯಕ್ತಿ ರಾಮಾಯಣ ಬರೆದದ್ದು ಹೇಗೆ..? ನಿಜಕ್ಕೂ ಅಚ್ಚರಿ..!
ಮಹಾಕಾವ್ಯ ರಾಮಾಯಣದ ಸಂಯೋಜಕರಾದ ಮಹರ್ಷಿ ವಾಲ್ಮೀಕಿಯ ಜನ್ಮದಿನವನ್ನು 'ವಾಲ್ಮೀಕಿ ಜಯಂತಿ' ಎಂದು ಕರೆಯಲಾಗುತ್ತದೆ.
ಮಹರ್ಷಿ ವಾಲ್ಮಿಕಿಯ ಮೂಲ ಹೆಸರು ರತ್ನಾಕರ...ಆದರೆ ಬಾಲ್ಯದಲ್ಲಿ ಮಹರ್ಷಿ ವಾಲ್ಮಿಕಿಯನ್ನು ಭೀಲಾನೀ ದ್ವಾರದಲ್ಲಿ ಅಪಹರಿಸಲಾಯಿತು. ಈ ಕಾರಣದಿಂದಾಗಿ ಅವರು ಭೀಲ್ ಸಮಾಜದಲ್ಲಿ ಒಬ್ಬರಾಗಿ ಬೆಳೆದರು. ಭೀಲ್ ಕುಟುಂಬದ ಜನರು ಆ ಸಮಯದಲ್ಲಿ ಕಾಡಿನ ಜನರನ್ನು ಲೂಟಿ ಮಾಡುತ್ತಿದ್ದರು, ಭೀಲ್ ಜನರ ವರ್ತನೆಯಿಂದ ಪ್ರಭಾವೀತರಾದ ರತ್ನಾಕರ ಕೂಡ ದರೋಡೆ, ಲೂಟಿಯಲ್ಲಿ ತಮ್ಮನ್ನು ಸಕ್ರಿಯಗೊಳಿಸಿಕೊಂಡರು
ದರೋಡೆಕೋರ ಮಹರ್ಷಿಯಾಗಿದ್ದು...
ಒಮ್ಮೆ ನಾರದ ಮುನಿ ಕಾಡಿನಲ್ಲಿ ಹಾದುಹೋಗುತ್ತಿದ್ದಾಗ, ರತ್ನಾಕರ ಅವನನ್ನು ಸೆರೆಯಲ್ಲಿಟ್ಟುಕೊಂಡನು. ಆಗ ನಾರದ ಮುನಿಗಳು ರತ್ನಾಕರನಿಗೆ, ನೀವು ಮಾಡುತ್ತಿರುವುದು ಪಾಪದ ಕೃತ್ಯ,
ನಿನ್ನ ಪಾಪದ ಪಾಲುದಾರಿಕೆಯಲ್ಲಿ ನಿನ್ನ ಕುಟುಂಬದವರು.. ಒಪ್ಪುತ್ತಾರೆಯೇ ನೋಡು ಎಂದು ಹೇಳಿದರು..
ಆಗ ವಾಲ್ಮೀಕಿ ಕುಟುಂಬದ ಎಲ್ಲಾ ಸದಸ್ಯರನ್ನು ಕುರಿತು ನನ್ನ ಪಾಪದ ಪಾಲುದಾರರಾಗುವಿರೇ ಎಂದು ಕೇಳಿದಾಗ ಎಲ್ಲರೂ ಅವರನ್ನು ನಿರಾಕರಿಸುತ್ತಾರೆ.
ಅವರು ಕೇವಲ ಪುಣ್ಯದ ಕೆಲಸದಲ್ಲಿ ಭಾಗಿಯಾಗಲು ಮಾತ್ರ ಒಪ್ಪುತ್ತಾರೆ.
ಈ ಘಟನೆ ಅವರ ಮನಪರಿವರ್ತನೆಗೆ ಕಾರಣವಾಯಿತು ಮತ್ತು ನಂತರ ನಾರದರ ಬಳಿ ತಾನು ಮಾಡಿದ ಪಾಪಕ್ಕೆ ಕ್ಷಮೆ ಕೇಳಿದ.
ಆಗ ನಾರದರು ಅವನಿಗೆ ರಾಮ ಎಂಬ ಮಂತ್ರವನ್ನು ಪಠಿಸುವಂತೆ ಸಲಹೆಯನ್ನು ನೀಡಿದರು. ನಾರದರ ಮಾತಿನಿಂದ ಪ್ರಭಾವಿತನಾದ ವಾಲ್ಮೀಕಿ ತಪಸ್ಸಿಗೆ ಕುಳಿತುಕೊಂಡು ರಾನ ನಾಮವನ್ನು ಜಪಿಸಲು ಆರಂಭಿಸಿದರು. ಅಂದಿನಿಂದ ರತ್ನಾಕರ ಎನ್ನುವ ಕ್ರೂರಿ ಮಹರ್ಷಿ ವಾಲ್ಮೀಕಿಯಾಗಿ ಪರಿವರ್ತನೆ ಹೊಂದಿದರು
(ಹುತ್ತ-ವಲ್ಮೀಕ ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ)
ಒಂದು ದಿನ ಮಹರ್ಷಿ ವಾಲ್ಮೀಕಿ ನದಿಯ ದಡದಲ್ಲಿ ಒಂದು ಜೋಡಿ ಕ್ರೌಂಚ ಪಕ್ಷಿಗಳನ್ನು ನೋಡುತ್ತಿದ್ದಾಗ, ಬೇಟೆಗಾರನು ಆ ಜೋಡಿ ಕ್ರೌಂಚ ಪಕ್ಷಿಗಳನ್ನು ಬಾಣದಿಂದ ಕೊಂದನು. ಇದರಿಂದ ಮಹರ್ಷಿ ವಾಲ್ಮೀಕಿ ಸಾಕಷ್ಟು ವಿಚಲಿತನಾದನು ಮತ್ತು ಬೇಟೆಗಾರನಿಗೆ ಪ್ರೀತಿಯಲ್ಲಿ ಭಾಗಿಯಾದ ಹಕ್ಕಿಯನ್ನು ಕೊಂದ ದುಷ್ಟ ಬೇಟೆಗಾರನಿಗೆ ಶಪಿಸಿದ ನಂತರ, ಮಹರ್ಷಿಗಳುಗೆ ತನ್ನ ಬಾಯಿಂದ ಯಾವ ಪದಗಳು ಹೊರಬಂದವು ಎನ್ನುವುದೇ ಅರಿವಿಗೆ ಬರಲಿಲ್ಲ. ನಾನು ಯಾವ ಪದದಿಂದ ಭೇಟೆಗಾರನನ್ನು ಶಪಿಸಿದೆ ಎಂದು ಚಿಂತಿಸುತ್ತಾ ಕುಳಿತಿರುವಾಗ ಅದು ಅವರ ಮೊದಲ ಪದ್ಯವಾಗಿತ್ತು..
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||
ಈ ಶ್ಲೋಕದ ಅರ್ಥ ಹೀಗಿದೆ :
ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ |
ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||
ಇದರ ನಂತರ ಮಹರ್ಷಿ ವಾಲ್ಮೀಕಿ ರಾಮಾಯಣವನ್ನು ಸಂಯೋಜಿಸಿದರು
ಸಹವಾಸ ದೋಷದಿಂದ ವ್ಯಕ್ತಿ ಕೆಟ್ಟ ಕೆಲಸಗಳನ್ನು ಮಾಡಬಹುದು.. ಅದು ತಪ್ಪು ಅಂತ ಅರಿತು ತಿದ್ದಿಕೊಂಡಾಗ ಮಹರ್ಷಿಯಂತಾಗಬಹುದು...
ಭಾರತದ ಹೆಮ್ಮೆ ರಾಮಾಯಣ ಎಂಬ ಶ್ರೇಷ್ಠ ಕಾವ್ಯ...
ಇದು ವಿಶ್ವ ಸಾಹಿತ್ಯದಲ್ಲಿ ಅತಿ ದೊಡ್ಡ ಪುರಾತನ ಮಹಾಕಾವ್ಯಗಳಲ್ಲಿ ಒಂದಾಗಿದೆ ಮತ್ತು ಸುಮಾರು 24,000 ಪದ್ಯಗಳನ್ನು ಒಳಗೊಂಡಿದೆ..
ಇದರಲ್ಲಿನ ಆದರ್ಶ ಗುಣಗಳು ಈಗಲೂ ಪ್ರಸ್ತುತ ಮತ್ತು ಅನುಕರಣೀಯ..
1.ಅಣ್ಣ ತಮ್ಮ ಇದ್ರೆ ರಾಮ ಲಕ್ಷ್ಮಣರಂತಿರಬೇಕು
2. ಆದರ್ಶ ಪುರುಷೋತ್ತಮ- ರಾಮ
3. ಮಾದರಿ ರಾಜ್ಯ(ದೇಶ) ಹೇಗಿರಬೇಕೆಂದರೆ, ರಾಮ ರಾಜ್ಯ ವಾಗಬೇಕು
4. ಮಾತಾ ಪಿತೃವಾಕ್ಯ ಪರಿಪಾಲನೆ..
ಹೀಗೆ ಹತ್ತು ಹಲವಾರು ಅನುಕರಣೀಯ ಮೌಲ್ಯಗಳನ್ನು ರಾಮಾಯಣದ ಆದರ್ಶಗಳನ್ನು ಮಾದರಿಯಾಗಿ ಹೇಳುತ್ತೇವೆ.
ಇವು ನಮಗೆ ಅನುಕರಣಣೀಯವೂ ಹೌದು..👍👍💐💐💐💐💐
No comments:
Post a Comment