Sunday, October 29, 2023

 ಕಥೆ-198 

ನಮ್ಮ ಚಿಂತನೆಗಳು

ಸ್ಟೀವ್ ಫಾಸೆಟ್ ಅವನೊಬ್ಬ ವಿಶೇಷ ವ್ಯಕ್ತಿ. ವೃತ್ತಿಯಲ್ಲಿ ಅವನೊಬ್ಬ ಹಣಕಾಸು ವ್ಯವ­ಹಾರ ಮಾಡುವ ಬ್ಯಾಂಕರ್. ಆದರೆ, ಆತ ಒಳ್ಳೆಯ ಈಜುಗಾರ, ಇಂಗ್ಲಿಷ್ ಕಾಲು­ವೆ­ಯನ್ನು ಈಜಿದ್ದಾನೆ. ಅವನಿಗೆ ಕಾರ್ ರೇಸ್ ಕೂಡ ತುಂಬ ಪ್ರಿಯ­ವಾ­ದದ್ದು. ಆ ಪಂದ್ಯಗಳಲ್ಲೂ ಭಾಗವಹಿಸಿ ಅನೇಕ ಪ್ರಶಸ್ತಿ ಪಡೆದಿ­ದ್ದಾನೆ. ಇವೆಲ್ಲ ಸಾಹಸ ಕ್ರೀಡೆಗಳಿಗಿಂತ ಅವನಿಗೆ ಅತ್ಯಂತ ಖುಷಿ ಕೊಡುವುದು ಬಿಸಿ ಗಾಳಿಯ ಬಲೂ­ನಿ­ನಲ್ಲಿ ಕುಳಿತು ಪ್ರಯಾಣ ಮಾಡುವುದು.

ಸ್ಟೀವ್ ಫಾಸೆಟ್ ಜನವರಿ ೧೯೯೭ ರಲ್ಲಿ ಅಮೆರಿಕದ ಸೇಂಟ್ ಲೂಯಿಸ್ ಮಿಸೋರಿಯಿಂದ ಹೊರಟು ಭಾರತ­­ವನ್ನು ತಲುಪಿದ. ಅಷ್ಟು ದೂರ ಬಲೂನಿನಲ್ಲಿ ಸಾಗಿ ಬಂದದ್ದು ಒಂದು ವಿಶ್ವ­ದಾಖಲೆಯಂತೆ. ಈ ಪ್ರವಾಸದಲ್ಲಿ ನಡೆದ ಘಟನೆಯೊಂದನ್ನು ಆತ ವಿವರಿಸು­ತ್ತಿದ್ದ. ಆತ ಅಟ್ಲಾಂಟಿಕ್ ಸಮುದ್ರದ ಮೇಲೆ ಪೂರ್ವ ದಿಕ್ಕಿನನೆಡೆಗೆ ಸುಮಾರು ೨೪,೦೦೦ ಅಡಿ ಎತ್ತರದಲ್ಲಿ ಹಾರುತ್ತಿದ್ದ. ಮುಂದೆ ಬರುವ ದೇಶ ಲಿಬಿಯಾ. ಆಗೊಂದು ಸಮಸ್ಯೆ ಬಂತು. ಅವನಿಗೆ ತಕ್ಷಣ ಒಂದು ಸಂದೇಶ ಬಂದಿತು. ಬಲೂನು ಲಿಬಿಯಾದ ವಾಯುಪ್ರದೇಶದ ಮೇಲೆ ಹಾರಲು ಅನುಮತಿ ಇಲ್ಲ. ಅವ­ನೇ­ನಾದರೂ ಈ ಸಂದೇಶವನ್ನು ಉಲ್ಲಂಘಿಸಿ ಹಾರಿದರೆ ಅದನ್ನು ಗುಂಡಿಟ್ಟು ಉರುಳಿ­ಸ­­ಲಾಗು­ವುದು. ಸ್ಟೀವ್‌ನಿಗೆ ಗಾಬರಿಯಾಯಿತು. ಬಲೂನುಗಳನ್ನು ಬೇಕಾದ ಹಾಗೆ ತಿರುಗಿಸಲು ಗಾಲಿಗಳಿಲ್ಲ, ಸ್ಟಿಯರಿಂಗ್ ಇಲ್ಲ. ಅದೇನಿದ್ದರೂ ಬೀಸುವ ಗಾಳಿ­ಯನ್ನೇ ಬಳಸಿಕೊಂಡು ದಿಕ್ಕನ್ನು ಬದಲಿಸಬೇಕು. ಈಗ ಗಾಳಿ ಲಿಬಿಯಾ­­ದತ್ತಲೇ ಬೀಸುತ್ತಿದೆ. ಸ್ಟೀವ್ ಈ ಶಾಸ್ತ್ರದಲ್ಲಿ ಪರಿಣತನಾದ್ದರಿಂದ ಒಂದು ಕ್ಷಣ ಯೋಚಿಸಿದ. ಗಾಳಿಯ ಬೀಸು ಎತ್ತರದ ಮೇಲೆ ಅವಲಂಬಿತ­ವಾ­ಗಿದೆ, ಬೇರೆ ಬೇರೆ ಎತ್ತರದಲ್ಲಿ ಗಾಳಿ ಬೇರೆ ಬೇರೆ ದಿಕ್ಕಿಗೆ ಬೀಸುತ್ತದೆ. ನೀವು ದಿಕ್ಕನ್ನು ಬದಲಿಸಬೇಕಾದರೆ ಬಲೂನಿನ ಎತ್ತರ­ವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳ­ಬೇಕು. ಹೆಚ್ಚು ಎತ್ತರಕ್ಕೆ ಏರಬೇಕಾದರೆ ಬಲೂನಿನಲ್ಲಿ ಉರಿಯುವ ಜ್ವಾಲೆಯನ್ನು ಹೆಚ್ಚು ಮಾಡಬೇಕು. ಆಗ ಒಳಗಿನ ಒತ್ತಡ ಕಡಿಮೆಯಾಗಿ ಬಲೂನು ಮೇಲಕ್ಕೆ ಏರು­ತ್ತದೆ. ಎತ್ತರವನ್ನು ಕಡಿಮೆ ಮಾಡಬೇಕಾದರೆ ಬಲೂನಿನಲ್ಲಿದ್ದ ಹೀಲಿಯಂ ವಾಯು­ವನ್ನು ಕಡಿಮೆ ಮಾಡಬೇಕು. ಆಗ ತೂಕ ಹೆಚ್ಚಾಗಿ ಕೆಳಗೆ ಬರುತ್ತದೆ.

ಸ್ಟೀವ್ ಬಲೂನಿನಲ್ಲಿದ್ದ ಹೀಲಿ­ಯಂನ್ನು ಕಡಿಮೆ ಮಾಡತೊಡಗಿದ. ನಿಧಾನ­ವಾಗಿ ಸುಮಾರು ಆರು ಸಾವಿರ ಅಡಿ ಕೆಳಗೆ ಬಂತು ಬಲೂನು. ಆಗ ಅದಕ್ಕೆ ದಕ್ಷಿಣ­ದೆಡೆಗೆ ಬೀಸುವ ಗಾಳಿ ದೊರಕಿತು. ಆಗ ಬಲೂನು ಲಿಬಿಯಾದ ವಾಯು­ಪ್ರದೇಶ­ವನ್ನು ಪ್ರವೇಶಿಸದೇ ಸಾಗಿ ಮುಂದೆ ಬಂದಿತು. ಲಿಬಿಯಾ ಪ್ರದೇಶ ದಾಟಿದ ಮೇಲೆ ಮತ್ತೆ ಜ್ವಾಲೆಯನ್ನು ಹೆಚ್ಚು ಮಾಡಿದ. ಆಗ ಅದು ಮತ್ತೆ ಮೊದಲಿನಂತೆ ಅಡಿಗೆ ಏರಿ ಪೂರ್ವಕ್ಕೆ ಬೀಸುವ ಗಾಳಿಯಲ್ಲಿ ಸೇರಿ ಭಾರತದೆಡೆಗೆ ಸಾಗಿತು. ತನಗಾದ ಆಪತ್ತಿನಿಂದ ಪಾರಾದ.

ಅವನು ಹೇಳಿದ ಮಾತು ...

‘ನಮ್ಮ ಎತ್ತರ ನಮ್ಮ ದಿಕ್ಕನ್ನು ತೀರ್ಮಾನಿ­ಸುತ್ತದೆ’. ಹೌದಲ್ಲವೇ? ನಮ್ಮ ಜೀವನದ ಗತಿ, ದಿಕ್ಕು ನಮ್ಮ ಎತ್ತರದ ಮೇಲೆ ನಿಂತಿದೆ! ನಮ್ಮ ಚಿಂತನೆಗಳು, ಧೋರಣೆ­ಗಳು, ವಿಚಾರಗಳು ಎಷ್ಟು ಎತ್ತರದಲ್ಲಿರುತ್ತವೆಯೋ ಅಷ್ಟು ಎತ್ತರಕ್ಕೇ ನಮ್ಮ ಬದುಕು ಏರುತ್ತದೆ. ನಮ್ಮ ವಿಚಾರಗಳು, ಚಿಂತನೆಯ ವಿಧಾನ ಸಂಕುಚಿತ­ವಾದಷ್ಟು ಜೀವನ ಕೆಳಮಟ್ಟಕ್ಕೆ ಕುಸಿಯುತ್ತದೆ. ಹಾಗಾದರೆ ನಮ್ಮ ಜೀವನದ ಮಟ್ಟವನ್ನು ಎತ್ತರಿಸಲು, ಉದಾತ್ತಗೊಳಿಸಲು ಬೇಕಾದ ಮೂಲ­ಸಾಮಗ್ರಿ­ಯೆಂದರೆ ನಮ್ಮ ಚಿಂತನಾ ವಿಧಾನ. ನಾವು ಎಷ್ಟು ಒಳ್ಳೆಯ­ದ್ದನ್ನು ಚಿಂತಿಸು­ತ್ತೇವೋ ಯೋಚಿ­ಸುತ್ತೇವೋ ಹಾಗೆಯೇ ನಡೆಯುತ್ತೇವೋ ಹಾಗೆಯೇ ನಮಗೆ ಅರಿ­ವಿಲ್ಲ­ದಂತೆ ನಮ್ಮ ಜೀವನ ಅಷ್ಟು ಎತ್ತರಕ್ಕೆ ಏರುತ್ತದೆ, ಸಮಾಜಕ್ಕೆ ಪ್ರಯೋಜನಕಾರಿ­ಯಾಗು­ತ್ತದೆ. ಕೃಪೆ : ಮುಖ ಪುಸ್ತಕ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು