Thursday, October 12, 2023

 *ಶುಚಿ-ರುಚಿ*

  ಒಂದು ಚಿಕ್ಕಗ್ರಾಮ ಇತ್ತು. ಆ ಗ್ರಾಮದ ಮಧ್ಯದಲ್ಲಿ ಒಂದು ಪ್ರಮುಖ ದಾರಿ ಇತ್ತು. ಆ ದಾರಿಯ ಮಧ್ಯದಲ್ಲಿ ಬಹಳ ದಿನಗಳಿಂದ ಒಂದು ದೊಡ್ಡ ಬಂಡೆಗಲ್ಲು ಬಿದ್ದಿತ್ತು. ಹೋಗ ಬರುವುದಕ್ಕೆ ಅದು ತುಂಬಾ ಅಡಚಣೆಯಾಗಿತ್ತು. ಜನರೆಲ್ಲ ಅದರ ಬದಿಯಿಂದ ಹೋಗುತ್ತಿದ್ದರೇ ವಿನಾ ಅದನ್ನು ತೆಗೆಯುವ ಮನಸ್ಸು ಮಾಡಿರಲಿಲ್ಲ.

  ಒಂದು ದಿನ ಒಬ್ಬ ಪ್ರಾಮಾಣಿಕ ಬಡ ಮನುಷ್ಯನು ತುಂಬಾ ಪ್ರಯಾಸದಿಂದ ಆ ಬಂಡೆಗಲ್ಲನ್ನು ತೆಗೆದು ಬದಿಗಿಟ್ಟು ದಾರಿಯನ್ನು ಸ್ವಚ್ಛಗೊಳಿಸಿದ. ಅಷ್ಟರಲ್ಲಿ ಅವನಿಗೆ ಆ ಬಂಡೆಗಲ್ಲಿನ ಕೆಳಗಿದ್ದ ಒಂದು ಪೆಟ್ಟಿಗೆ ಕಂಡಿತು. ಅದನ್ನು ಆ ಗ್ರಾಮದ ರಾಜನಿಗೆ ಒಪ್ಪಿಸಿದ. ರಾಜನು ಅದನ್ನು ಒಡೆದು ನೋಡಿದ, ಅದರಲ್ಲಿ ನೂರು ಚಿನ್ನದ ನಾಣ್ಯಗಳ ನಿಧಿ ಜೊತೆಗೊಂದು ಪತ್ರ ಇತ್ತು! ಕುತೂಹಲದಿಂದ ರಾಜನು ಪತ್ರವನ್ನು ಓದಿದ. ಅದರಲ್ಲಿ ಹೀಗೆ ಬರೆದಿತ್ತು. “ಯಾರು ಈ ಬಂಡೆಗಲ್ಲನ್ನು ತೆಗೆದು ದಾರಿಯನ್ನು ಶುಚಿಗೊಳಿಸುವರೋ ಅವರೇ ಈ ನಿಧಿಯ ಒಡೆಯರು!” ನಂತರ ರಾಜನು ಆ ನಿಧಿಯನ್ನು ಬಡವನಿಗೆ ಒಪ್ಪಿಸಿದ. ಆ ನಂತರ ಆ ಗ್ರಾಮದ ಸುತ್ತಮುತ್ತಲಿನ ರಸ್ತೆಗಳೆಲ್ಲ ತಮಗೆ ತಾವೇ ನಿರ್ಮಲವಾದವು! ಜನಜೀವನವು ಸುಗಮವಾಗಿತ್ತು. ಹಿಂದಿನ ರಾಜನು ಪ್ರಜೆಗಳಿಗೆ ಬಾಹ್ಯಶುಚಿಯನ್ನು ಕಲಿಸುವುದಕ್ಕೆ ಮಾಡಿದ ಉಪಾಯ ಅದಾಗಿತ್ತು!!

ಕೃಪೆ:ಶ್ರೀ ಸಿದ್ಧೇಶ್ವರ_ಸ್ವಾಮೀಜಿ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು