Wednesday, October 18, 2023

 ಪರಿಪೂರ್ಣ ಮೌನ

ಯೆನ್ ಮಾಸ್ಟರ್ ನಿಂದ ದೀಕ್ಷೆ ಪಡೆದ ನಾಲ್ವರು ಶಿಷ್ಯರು ಜಪಾನ್ ಗೆ ಬರುತ್ತಾರೆ. ಗುರುವಿನ ಆದೇಶದಂತೆ ಗುರುಗಳು ಬರುವವರೆಗೂ ಮೌನಾಚರಣೆಗೆ ಮುಂದಾಗಿ ಧ್ಯಾನ ಪಕ್ರಿಯೆಯಲ್ಲಿ ತೊಡಗುತ್ತಾರೆ. ಆದರೆ ಯೆನ್ ಮಾಸ್ಟರ್ ಇನ್ನೂ ಜಪಾನ್ ಗೆ ಬಂದಿರುವುದಿಲ್ಲ. ಶಿಷ್ಯರು ತಾವು ಭಾವಿಸಿದಂತೆ ಮೊದಲ ದಿನ ಕಳೆಯುತ್ತದೆ. ಮೌನವ್ರತವನ್ನು ಅವರು ಪರಿಪೂರ್ಣವಾಗಿ ಪಾಲಿಸುತ್ತಾರೆ. ಮರುದಿನ ಸಂಜೆಯಾಗುತ್ತಿದ್ದಂತೆ ದೀಪದ ಎಣ್ಣೆ ಮುಗಿದು ಬೆಳಕು ಮಂದವಾಗುತ್ತದೆ. ಆ ವಿದ್ಯಾರ್ಥಿಗಳ ಗುಂಪಿನಲ್ಲಿದ್ದ ಶಿಯಾಂಗ್ ಏನು ಮಾಡಬೇಕು ಎನ್ನುವುದೇ ತಿಳಿಯುವುದಿಲ್ಲ.

ಅವನು ಕೋಪೋದ್ರಿಕ್ತಾನಾಗುತ್ತಾನೆ. ತಾಳ್ಮೆ ಕಳೆದುಕೊಂಡು "ದೀಪವನ್ನು ಉರಿಸು" ಎಂದು ದೊಡ್ಡ ಧ್ವನಿಯಲ್ಲಿ ಬದಿಯಲ್ಲೇ ಇದ್ದ ಸೇವಕನ ಮೇಲೆ ರೇಗುತ್ತಾನೆ.

ಶಿಯಾಂಗ್ ಕೂಗು ಕೇಳಿದ ಅವನ ಗೆಳೆಯ ಮಿಯಾತ್ಸು ಕುತೂಹಲದಿಂದ ಹಿಂದಿರುಗಿ ನೋಡುತ್ತಾನೆ. ತನ್ನ ಗೆಳೆಯನನ್ನು ಉದ್ದೇಶಿಸಿ "ಶಿಯಾಂಗ್, ಮಾಸ್ಟರ್ ಹೇಳಿದಂತೆ ಮೌನವಾಗಿರಬೇಕು ಎಂಬ ಸಂಗತಿಯನ್ನು ಮರೆತುಬಿಟ್ಟಿಯಾ?" ಎಂದು ಪ್ರಶಿಸುತ್ತಾನೆ.

ಅದೇ ಹೊತ್ತಿಗೆ ಗುಂಪಿನಲ್ಲಿದ್ದ ಮತ್ತೊಬ್ಬ "ನೀವೆಲ್ಲರೂ ಮೂರ್ಖರು! ಪರಸ್ವರ ಮಾತನಾಡಿಕೊಂಡು ಸುಮ್ಮನೆ ಗದ್ದಲ ಮಾಡಿಕೊಳ್ಳುತ್ತೀರಿ. ವೃಥಾ ಯಾಕೆ ಮಾತನಾಡುತ್ತಿರಿ? ಸುಮ್ಮನಿರಲು ಆಗುವುದಿಲ್ಲವೇ? ಎಂದು ಗೊಣಗುತ್ತಾನೆ.

ಅಷ್ಟಕ್ಕೇ ಅವನು ಮಾತು ನಿಲ್ಲಿಸುವುದಿಲ್ಲ. ಮುಂದುವರಿದು "ನಿಮಗೆಲ್ಲಾ ಹೋಲಿಸಿದರೆ ನಾನೊಬ್ಬನೇ ಸುಮ್ಮನಿದ್ದೇನೆ" ಎನ್ನುತ್ತಾನೆ. ವಾಸ್ತವವಾಗಿ ಅವನೇ ಮೌನವನ್ನು ಮುರಿದಿರುತ್ತಾನೆ.

*ನೀತಿ :*

*ಇನ್ನೊಬ್ಬರನ್ನು ಮಾಪನ ಮಾಡುವುದಕ್ಕೆ ಮೊದಲು ನಮ್ಮನ್ನು ನಾವೇ ಅಳೆದುಕೊಳ್ಳಬೇಕು.*

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು