ಕರ್ನಾಟಕ ಸರಕಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕೋಟಿ ಕಂಠ ಗಾಯನ
ಕ್ರ.ಸಂ | ಹಾಡು | ಆಡಿಯೋ | ವಿಡಿಯೋ ಜೊತೆ ಸಾಹಿತ್ಯ | ಕರೋಕೆ | ||
1 | ಜಯ ಭಾರತ ಜನನಿಯ ತನುಜಾತೆ | |||||
2 | ಹುಟ್ಟಿದರೆ ಕನ್ನಡ ನಾಡಲ್ಲಿ.ಹುಟ್ಟಬೇಕು | |||||
3 | ಬಾರಿಸು ಕನ್ನಡ ಡಿಂಡಿಮವ | |||||
4 | ಹಚ್ಚೇವು ಕನ್ನಡದ ದೀಪ | |||||
5 | ವಿಶ್ವ ವಿನೂತನ ವಿದ್ಯಾ ಚೇತನ | |||||
6 | ಉದಯವಾಗಲಿ_ನಮ್ಮ ಚೆಲುವ ಕನ್ನಡ_ನಾಡು |
ಮಾನ್ಯರೇ,
ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸುವ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುವ ಗೀತೆ; ಕವನಗಳನ್ನು ನಾಡಿನ ಹೆಮ್ಮೆಯ ಕವಿಗಳು ರಚಿಸಿದ್ದು, ಇವುಗಳ ಕೇಳುವಿಕೆಯ ನಮ್ಮಲ್ಲಿ ಅಭಿಮಾನವನ್ನು ಮೂಡಿಸುತ್ತದೆ. ಈ ದೃಷ್ಟಿಯಿಂದ ಈ ಗೀತೆಗಳು “ಕನ್ನಡದ ಶಕ್ತಿ”. ಕಳೆದ ರಾಜ್ಯೋತ್ಸವದ ಸಂದರ್ಭದಲ್ಲಿ ಪ್ರಾತಿನಿಧಿಕವಾಗಿ ಆಯ್ದ ೩ ಕನ್ನಡ ಗೀತೆಗಳ ಸಮೂಹ ಗಾಯನವನ್ನು ವಿನೂತನವಾಗಿ “ಲಕ್ಷ ಕಂಠ ಗೀತ ಗಾಯನ” ಶೀರ್ಷಿಕೆಯಡಿ ರಾಜ್ಯಾಂದ್ಯಂತ ಆಯೋಜಿಸಿ ಯಶಸ್ವಿಗೊಳಿಸಿದ ನಿಟ್ಟಿನಲ್ಲಿ ಈ ವರ್ಷವೂ ಅಕ್ಟೋಬರ್ ೨೮ರಂದು “ಕೋಟಿ ಕಂಠ ಗೀತ ಗಾಯನ” ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಆಯೋಜಿಸಲಾಗುತ್ತಿದ್ದು, ಈ ವಿಶೇಷ ಕಾರ್ಯಕ್ರಮದಲ್ಲಿ ಒಂದು ಕೋಟಿ ಜನರನ್ನು ಭಾಗಿಯಾಗಿಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮದ ವಿವರಗಳು ಕೆಳಕಂಡಂತಿದೆ:-
೧. ‘ನನ್ನ ನಾಡು - ನನ್ನ ಹಾಡು’ ಸಮೂಹ ಗೀತ ಗಾಯನ- ಅಕ್ಟೋಬರ್ ೨೮ ರಂದು ಶುಕ್ರವಾರ ಕನ್ನಡ ನಾಡು-ನುಡಿಯ ಶ್ರೇಷ್ಠತೆಯನ್ನು ಸಾರುವ-
ಅ) ನಾಡಗೀತೆ
ಆ) ಹುಯಿಲಗೋಳ ನಾರಾಯಣರಾಯರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’
ಇ) ರಾಷ್ಟ್ರಕವಿ ಕುವೆಂಪುರವರ ‘ಬಾರಿಸು ಕನ್ನಡ ಡಿಂಡಿಮವ’
ಈ) ಡಾ. ಡಿ.ಎಸ್. ಕರ್ಕಿಯವರ ‘ಹಚ್ಚೇವು ಕನ್ನಡದ ದೀಪ’
ಉ) ನಾಡೋಜ ಡಾ. ಚೆನ್ನವೀರ ಕಣವಿಯವರ ‘ವಿಶ್ವವಿನೂತನ ವಿದ್ಯಾಚೇತನ’
ಊ) ಡಾ. ಹಂಸಲೇಖರವರ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’.
ಈ ಗೀತೆಗಳನ್ನು ಅಕ್ಟೋಬರ್ 28ರಂದು ಬೆಳಗ್ಗೆ:೧೧.೦೦ ಗಂಟೆಗೆ ಏಕ ಕಾಲದಲ್ಲಿ ಹಾಡುವುದು. ನಂತರ ಕನ್ನಡ ನಾಡು-ನುಡಿಯ ಹಿರಿಮೆಯನ್ನು ಸಾರುವ ಕನ್ನಡ ಗೀತೆಗಳ ಗಾಯನವನ್ನು ಸಂದರ್ಭಾನುಸಾರ ಮುಂದುವರೆಸಬಹುದಾಗಿದೆ. ಹಾಡುಗಳ ಸಾಹಿತ್ಯ ಹಾಗೂ ಧಾಟಿಯನ್ನು ಕನ್ನಡ ಮತ್ತು ಸಂಸ್ಕ್ರತಿ ಮಾಡಿದೆ.
೨. ಕೋಟಿ ಕಂಠ ಗೀತ ಗಾಯನಕ್ಕೆ ನೋಂದಣಿ:- ಕಾರ್ಯಕ್ರಮದಲ್ಲಿ ಭಾಗವಹಿಸುವವರನ್ನು ನೋಂದಾಯಿಸಿ, ಭಾಗವಹಿಸಿದವರಿಗೆ ಸ್ವಯಂಚಾಲಿತ ಆನ್‌ಲೈನ್ ಪ್ರಮಾಣ ಪತ್ರ ನೀಡಲು ಉದ್ದೇಶಿಸಿದೆ. ಅದರ ಅಂಗವಾಗಿ ಅಕ್ಟೋಬರ್ ೧೧ ರಿಂದ ೨೮ ರವರೆಗೆ ನೋಂದಣಿ ಅಭಿಯಾನ ಮಾಡಲು ಯೋಜಿಸಲಾಗಿದ್ದು ಆನ್‌ಲೈನ್ ನೋಂದಾವಣೆಗಾಗಿ ಲಿಂಕ್: https://kannadasiri.karnataka.gov.in/kkg/public/ ಆಗಿರುತ್ತದೆ.
ಈ ನಿಟ್ಟಿನಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿನ ಎಲ್ಲಾ ಐಟಿ-ಬಿಟಿ ಕೈಗಾರಿಕೆಗಳು ಕರ್ನಾಟಕ ಸರ್ಕಾರದ ಈ ವಿನೂತನ ಕಾರ್ಯಕ್ರಮದಲ್ಲಿ ಸಂಪೂರ್ಣ ಪೂರ್ವಸಿದ್ಧತೆಯೊಂದಿಗೆ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಈ ಮೂಲಕ ತಮ್ಮನ್ನು ಕೋರಿದೆ.
ಕೋಟಿ ಕಂಠ ಗಾಯನದ ವಿಡಿಯೋಗಳನ್ನು "ಕನ್ನಡಕ್ಕಾಗಿ ನಾವು" https://www.facebook.com/kannadakkaaginaavu/ ಫೇಸ್-ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ತಾವು ಮೊದಲು ಫ್ರೆಂಡ್ ರಿಕ್ವೆಸ್ಟ್ ಕಳಿಸಬೇಕಾಗುತ್ತದೆ. ಗಾಯನದ ನಂತರ ಇಲ್ಲಿ ನಿಮ್ಮ ವಿಡಿಯೋಗಳನ್ನು ನೀವೇ ಪೋಸ್ಟ್ ಮಾಡಬೇಕು ಹಾಗೂ ಅದರ ಲಿಂಕ್ ಅನ್ನು ಈ ನೋಂದಣಿ ಪುಟದಲ್ಲಿ ಸಲ್ಲಿಸಿ ನಿಮ್ಮ ಭಾಗವಹಿಸುವಿಕೆಯ ಪ್ರಮಾಣ ಪತ್ರ ಪಡೆಯಬಹುದು.
No comments:
Post a Comment