Wednesday, October 4, 2023

 ಮೂರ್ಖರನ್ನು ಮಾಡಲು ಹೋದವರು ಮೂರ್ಖರಾದರು.

ಅಕ್ಬರನ ಆಸ್ತಾನದಲ್ಲಿ ಬೀರಬಲ್ ಬಹಳ ಚತುರ ಎನಿಸಿದ್ದ. ಇದನ್ನು ಕಂಡಿದ್ದ ಇತರರು ಆತನಿಗೆ ಏನಾದರೂ ಮಾಡಿ ಮೂರ್ಖನ ಪಟ್ಟಕಟ್ಟಲು ನಿರ್ಧರಿಸಿದರು. ಒಮ್ಮೆ ಬೀರಬಲ್ ಸಭೆಗೆ ಬಂದಾಗ ರಾಜ ಎಲ್ಲರ ಸಲಹೆಯಂತೆ ಅಕ್ಬರ್ ನು ‘ಬೀರಬಲ್ ನಿನಗೆ ನ್ಯಾಯ ಬೇಕೋ ಅಥವಾ ಚಿನ್ನದ ನಾಣ್ಯ ಬೇಕೋ’ ಎಂದು ಕೇಳಿದರು.. ಆಗ ಬೀರಬಲ್ ‘ನನಗೆ ನಾಣ್ಯ ಬೇಕು’ ಎಂದು ಹೇಳಿದ.. ಅಕ್ಬರನಿಗೆ ಈ ಮಾತು ಕೇಳಿ ಬೇಸರವಾಯ್ತು.. ‘ಬೀರಬಲ್ ನೀನು ಹಣದಾಸೆಗೆ ಮಾರುಹೋಗುವವನಲ್ಲ.. ನ್ಯಾಯಕ್ಕಾಗಿ ಶ್ರಮಿಸುವ ನ್ಯಾಯವಂತ ಎಂದುಕೊಂಡಿದ್ದೆ.. ಆದರೆ ನೀನು ನನಗೆ ನಿರಾಸೆ ಮಾಡಿದೆ.. “ನಮ್ಮ ರಾಜ್ಯದಲ್ಲಿ ನ್ಯಾಯ ನೆಲೆಸುವಂತೆ ಮಾಡುತ್ತೀಯ ಎಂದುಕೊಂಡಿದ್ದೆ.. ಆದರೆ ನೀನು ಆ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ ಎಂದರು ಅಕ್ಬರ್

ಅದಕ್ಕೆ ಬೀರಬಲ್ ‘ಸ್ವಾಮಿ ಯಾರಲ್ಲಿ ಏನಿಲ್ಲವೋ ಅದನ್ನೇ ಬಯಸುತ್ತಾರೆ, ನನಗೆ ನಿಮ್ಮ ರಾಜ್ಯದಲ್ಲಿ ನ್ಯಾಯ ಸಿಕ್ಕಿದೆ. ನ್ಯಾಯ ತುಂಬಿ ತುಳುಕುತ್ತಿರುವಾಗ ಮತ್ತೆ ನ್ಯಾಯ ಬೇಕು ಎಂದು ಕೇಳುವುದು ಮೂರ್ಖತನವಲ್ಲವೇ..? ಅದಕ್ಕೆ ನಾನು ನಾಣ್ಯ ಕೇಳಿದೆ’ ಎಂದು ಉತ್ತರಿಸಿದ. ಅಕ್ಬರನಿಗೆ ಬೀರಬಲ್ಲನ ಮಾತು ಕೇಳಿ ಸಮಾಧಾನ, ಆನಂದವಾಯಿತು. ನಾಣ್ಯದೊಂದಿಗೆ ಸನ್ಮಾನಿಸಲಾಯಿತು..💐💐💐 

ಆಸ್ಥಾನಿಕರಿಗೆ ಬೀರಬಲ್ಲನನ್ನು ಪರೀಕ್ಷಿಸಿದ್ದಕ್ಕಾಗಿ ನಾಚಿಕೆಯಾಯಿತು.

ಆಧಾರ : ಕ್ರಾಂತಿಕಿಡಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು