ಕೆಲಸವ ಚಿಕ್ಕದಾದರೇನು, ದೊಡ್ಡದಾದರೇನು ಶ್ರದ್ಧೆ ಮುಖ್ಯ..
ಚಪ್ಪಲಿ ಅಂಗಡಿಯಲ್ಲಿ ನಡೆದ ಒಂದು ಮನಕಲಕುವ ಘಟನೆ…ನಾವು ಕಲಿಯುವುದು ತುಂಬಾ ಇದೆ.
ಒಬ್ಬ ವ್ಯಕ್ತಿ ಚಪ್ಪಲಿ ಅಂಗಡಿಗೆ ಹೋದ. ಆ ಅಂಗಡಿಯವ ಅವರನ್ನು ಗೌರವದಿಂದ ಒಳಗೆ ಆಹ್ವಾನಿಸಿದರು. ಕುಳಿತುಕೊಳ್ಳಲು ಹೇಳಿ ಚಪ್ಪಲಿಗಳನ್ನು ತೋರಿಸಲು ಆರಂಭಿಸಿದರು. ಪ್ರತಿಯೊಂದು ಚಪ್ಪಲಿ ಜೊತೆಯನ್ನು ಸ್ವತಃ ಅವರ ಕಾಲಿಗೆ ಹಾಕುತ್ತಿದ್ದಾರೆ. ಅವರಿಗ್ಯಾಕೋ ತುಂಬಾ ಕಷ್ಟ ಅನ್ನಿಸಿತು…..
ನೀವು ಆ ರೀತಿ ನನ್ನ ಕಾಲುಗಳನ್ನು ಹಿಡಿದು ಚಪ್ಪಲಿ ಹಾಕುತ್ತಿದ್ದರೆ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದರು.
ನೀವು ತೆಗೆದುಕೊಡಿ ನಾನೇ ಹಾಕಿಕೊಂಡು ನೋಡುತ್ತೇನೆ” ಎಂದು ಹೇಳಿದರು.
ಅದಕ್ಕೆ ಆತ “ಪರ್ವಾಗಿಲ್ಲ ಬಿಡಿ! ನಿಮಗೆ ಇಷ್ಟವಾದ ಚಪ್ಪಲಿ ನೋಡಿಕೊಂಡು
ತೆಗೆದುಕೊಂಡು ಹೋಗಿ. ನಿಮಗೆ ಸಂತೋಷವಾದರೆ ಅಷ್ಟೆ ಸಾಕು ನಮಗೆ” ಎಂದ.
“ನೀವು ಮನುಷ್ಯರೇ… ನಾವೂ ಮನುಷ್ಯರೇ. ನೀವು ಆ ರೀತಿ ನಮ್ಮ ಕಾಲುಗಳನ್ನು
ಹಿಡಿದು ಚಪ್ಪಲಿ ಹಾಕಿ ತೋರಿಸುವುದು ಸ್ವಲ್ಪ ಮುಜುಗರ ಅನ್ನಿಸುತ್ತದೆ” ಎಂದರು.
ಅದಕ್ಕೆ ಅವರು ಹೇಳಿದ ಮಾತುಗಳು ಅವರನ್ನು ತುಂಬಾ ಚಕಿತಗೊಳಿಸಿದವು.
“ಈ ಅಂಗಡಿಯಲ್ಲಿ ನನ್ನ ಜವಾಬ್ದಾರಿ ಅದು…. ಅಂಗಡಿ ಹೊರಗೆ ನೀವು ಕೋಟಿ ರೂಪಾಯಿಗಳನ್ನು
ಕೊಟ್ಟರೂ ನಿಮ್ಮ ಕಾಲು ಹಿಡಿಯುವುದಿಲ್ಲ.
ಅಂಗಡಿಯಲ್ಲಿ ನೀವು ಕೋಟಿ ರೂಪಾಯಿ ಕೊಟ್ಟರೂ
ನಿಮ್ಮ ಕಾಲು ಬಿಡಲ್ಲ.” ಎಂದ ಆ ವ್ಯಕ್ತಿ.
ನಿಜವಾಗಿ ತಾನು ಮಾಡುವ ಕೆಲಸದ ಮೇಲೆ ಆ ವ್ಯಕ್ತಿಗೆ ಎಷ್ಟು ಗೌರವ, ಭಕ್ತಿ ಇದೆಯೋ ನೋಡಿ. ಪ್ರತಿಯೊಬ್ಬರೂ ಅವರು ಮಾಡುವ ಕೆಲಸವನ್ನು ಚಿಕ್ಕದಾದರೂ, ದೊಡ್ಡದಾದರೂ ಆ ಕೆಲಸದ ಮೇಲೆ ಇಂತಹದ್ದೇ ಭಾವನೆ ಹೊಂದಿದ್ದರೆ ಖಚಿತವಾಗಿ ಅವರು ಅಂದುಕೊಂಡದ್ದನ್ನು ಸಾಧಿಸುತ್ತಾರೆ....👍
💐💐💐💐💐👍
No comments:
Post a Comment