Sunday, November 5, 2023

 ದಿನ ಕಥೆ-204 ದೂರವಾಣಿ (ಟೆಲಿಫೋನ್) ಹುಟ್ಟಿದ್ದು ಹೀಗೆ …*  


       
     

 ಇತ್ತೀಚಿನ ದಿನಗಳಲ್ಲಿ ದೂರವಾಣಿ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಅಲ್ಲವೇ? 

ಅದು ನಿಸ್ತಂತು (ಲ್ಯಾಂಡ್‍ಲೈನ್) ಆಗಿರಬಹುದು ಅಥವಾ ಸಂಚಾರಿ ದೂರವಾಣಿ ಆಗಿರಬಹುದು (ಮೊಬೈಲ್ ಫೋನ್) ಆಗಿರಬಹುದು. ಇವು ಇಲ್ಲದ ಜೀವನವನ್ನು ಊಹಿಸಿಕೊಳ್ಳುವುದೇ ಕಷ್ಟ! ಅಲ್ಲದೇ ಈ ಫೋನ್ ಗಳ ಮೂಲಕ ನಾವು ಸುಮಾರು ದೇಶ ಕಾಲದ ಎಲ್ಲೇ ಮೀರಬಹುದು. ಪ್ರಪಂಚದ ಯಾವುದೇ ಮೂಲೆಯಲ್ಲಿರುವ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ಸ್ಮಾರ್ಟ್ ಫೋನಿಂದ ಜಗತ್ತು ಅಂಗೈನಲ್ಲಿದೆ ಎನ್ನುವಂತಾಗಿದೆ.. ದೂರವಾಣಿ ಕ್ಷೇತ್ರದಲ್ಲಿ ಇಷ್ಟೊಂದು ಕ್ರಾಂತಿಗೆ ಕಾರಣರಾದವರು ಅವರೇ “ಅಲೆಗ್ಸಾಂಡರ್ ಗ್ರಾಹಂಬೆಲ್”. ಈಗ ನಾವೇನು ಸಾರ್ವಜನಿಕ ಕ್ಷೇತ್ರದಲ್ಲಿ ದೂರವಾಣಿ ಅಥವಾ ಮೊಬೈಲ್ ಫೋನ್ ಬಳಸುತ್ತೇವೆ ಹಾಗೆ ಉಪಯೋಗವಾಗಲಿ ಎಂಬ ದೃಷ್ಟಿಯಿಂದ ಬೆಲ್ ಇದನ್ನು ಕಂಡುಹಿಡಿಯಲಿಲ್ಲ ! ಕಿವುಡು ಹಾಗೂ ಮೂಗರಾಗಿದ್ದ ತನ್ನ ತಾಯಿ ಹಾಗೂ ಹೆಂಡತಿಯೊಂದಿಗೆ ಮಾತನಾಡಲು ಒಂದು ಸಾಧನ ಬೇಕಿತ್ತು ! ಆಗ ಜನ್ಮ ತಾಳಿದ್ದೆ ಈ ದೂರವಾಣಿ ! ತಾನು ಕಂಡು ಹಿಡಿದ ಸಾಧನ ಮುಂದೊಂದು ದಿನ ಪ್ರಪಂಚದಲ್ಲಿ ಮಹಾಕ್ರಾಂತಿ ಮಾಡುತ್ತದೆ ಎಂದು ಗ್ರಾಹಂಬೆಲ್ ಕನಸಿನಲ್ಲಿ ಸಹ ಊಹಿಸಿರಲಿಲ್ಲವೆಂದು ಕಾಣುತ್ತದೆ! ಗ್ರಾಹಂಬೆಲ್ ಹುಟ್ಟಿದ್ದು ಸ್ಕಾಟ್‍ಲ್ಯಾಂಡಿನ ಎಡಿನ್ ಬರ್ಗನಲ್ಲಿ. ಮಾರ್ಚ್ 3, 1847 ರಂದು. ಮೂವರು ಮಕ್ಕಳಲ್ಲಿ ಮಧ್ಯದವನು ಇವನು. ಇವನ ಅಣ್ಣ ತಮ್ಮ ಇಬ್ಬರು ಕ್ಷಯದಿಂದ ಮರಣ ಹೊಂದಿದರು. ಎಡಿನ್ ಬರ್ಗನ ರಾಯಲ್ ಸ್ಕೂಲ್‍ನಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದನು. ಅತ್ಯಂತ ಚುರುಕು ಹಾಗೂ ಬುದ್ಧಿವಂತನಾದ ಇವನಿಗೆ 16ನೇ ವಯಸ್ಸಿನಲ್ಲಿಯೇ ವೆಸ್ಟರ್ನ್ ಹೌಸ್ ಅಕಾಡೆಮಿಯಲ್ಲಿ ವಿದ್ಯಾರ್ಥಿ ಭೋದಕನಾಗಿ ಕೆಲಸಕ್ಕೆ ಸೇರಿದನು. ಉತ್ತಮ ವಾಕ್ಪಟುತ್ವವವನ್ನು ಹೊಂದಿದ್ದ ಬೆಲ್ ಲಂಡನ್ ವಿಶ್ವವಿದ್ಯಾನಿಲಯದ ಕಾಲೇಜಿನಿಂದ ಪದವಿ ಪಡೆದನು. ನಂತರ ವಿಜ್ಞಾನ ಕ್ಷೇತ್ರದಲ್ಲಿ ಇವನ ಒಲವು ಹರಿಯಿತ್ತಲ್ಲದೇ ತನ್ನ ತಾಯಿಯ ಕಿವುಡುತನವನ್ನು ನಿವಾರಿಸುವ ಮಾರ್ಗೋಪಾಯವನ್ನು ಕಂಡುಹಿಡಿಯಲು ಮುಂದಾದನು. ಗ್ರಾಹಂಬೆಲ್‍ನ ತಂದೆ ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಕಿವುಡು ಮೂಗರಿಗೆ ಸನ್ನೆಗಳ ಮೂಲಕ ಹೇಗೆ ಮಾತನಾಡುವುದು ಎಂಬ ಬಗ್ಗೆ ಪಾಠ ಮಾಡುತ್ತಿದ್ದರು. ಇದನ್ನು ಗಮನಿಸುತ್ತಿದ್ದ ಗ್ರಹಂಬೆಲ್‍ಗೆ ಕಿವುಡು ಹಾಗೂ ಮೂಗರಿಗೆ ಮಾತನಾಡಲು ಉಪಯೋಗವಾಗುವಂತಹ ಸಾಧನೆವೊಂದನ್ನು ಕಂಡುಹಿಡಿಯಬೇಕೆಂದು ಆಸಕ್ತಿ ಬರುತ್ತಿತ್ತು. ಈತನಿಗಿದ್ದ ಸಾಮರ್ಥ ಆಸಕ್ತಿ ಇವನಿಗೆ ಬೂಸ್ಟನ್ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ವೃತ್ತಿ ಸಿಗುವಂತೆ ಮಾಡಿತು. ಅಲ್ಲಿ ತನ್ಕ ಸಂಶೋದನೆಯನ್ನು ಮುಂದುವರೆಸಿದ ಗ್ರಾಹಂಬೆಲ್ ಕೊನೆಗೆ ದೂರವಾಣಿ ಕಂಡು ಹಿಡಿದ..


 1876 ರಲ್ಲಿ ಮಾರ್ಚ್ 10 ರಂದು, ಮೊದಲ ದೂರವಾಣಿ ಕರೆಯನ್ನು ಗ್ರಹಾಂ ಬೆಲ್ ಅವರು "ವಿದ್ಯುತ್ ಜೊತೆಗೆ ಮಾತನಾಡುವ" ಸಾಮರ್ಥ್ಯವನ್ನು ಪ್ರದರ್ಶಿಸಿದರು. ಬೆಲ್‌ನ ಸಹಾಯಕನಾಗಿದ್ದ ಥಾಮಸ್ ವ್ಯಾಟ್ಸನ್‌ಗೆ ಮೊದಲ ಫೋನ್ ಕರೆ ಮಾಡಲಾಯಿತು. *"Mr Watson, come here. I want to see you,"* (ಮಿಸ್ಟರ್ ವ್ಯಾಟ್ಸನ್, ಇಲ್ಲಿಗೆ ಬನ್ನಿ. ನಾನು ನಿನ್ನನ್ನು ನೋಡಬೇಕು) ಇದು ಫೋನಲ್ಲಿ ಮಾತನಾಡಿದ ಮೊದಲ ಪದಗಳಾಗಿದ್ದವು...


ಟೆಲಿಫೋನ್ ಅನ್ನು ಕಂಡುಹಿಡಿದಾಗ, ಅಲೆಕ್ಸಾಂಡರ್ ಗ್ರಹಾಂ ಬೆಲ್ *"ಅಹೋಯ್"* ಪದವನ್ನು ಶುಭಾಶಯವಾಗಿ ಬಳಸಿದ್ದರು. ಅವನ ಪ್ರತಿಸ್ಪರ್ಧಿ ಥಾಮಸ್ ಎಡಿಸನ್ ಫೋನ್ ಶುಭಾಶಯ ಪದವಾಗಿ *ಹಲೋ* ಎಂದು ಬಳಸಿದರು ಈಗ *"ಹಲೋ"* ರೂಢಿಯಲ್ಲಿದೆ


 ಈ ದೂರವಾಣಿ ಸಂಶೋಧನೆಗೆ ಆತ 1876 ರಲ್ಲಿ “ವಿಶಿಷ್ಟಾಧಿಕಾರಿ ಪತ್ರ’ (ಪೇಟೆಂಟ್) ನ್ನು ಸಹ ಪಡೆದುಕೊಂಡನು. ಇದಾದ ನಂತರವೂ ಆತ ಸಂವಹನದಲ್ಲಿ ಅನೇಕ ಸಂಶೋಧನೆಗಳನ್ನು ಮಾಡಿದನು. ಇವು ಇಂದಿನ ‘ಆಪ್ಟಿಕಲ್ ಫೈಬರ್; ಕಂಡು ಹಿಡಿಯಲು ನಾಂದಿ ಹಾಡಿತು. ಬೆಲ್‍ನ ಅನೇಕ ಸಂಶೋಧನೆಗಳಲ್ಲಿ ಹಲವಕ್ಕೆ ಪೆಟೆಂಟ್ ಸಿಕ್ಕಿದೆ. ಅದರಲ್ಲಿ 14 ಪೆಟೆಂಟ್‍ಗಳು ‘ದೂರವಾಣಿ’ ಹಾಗೂ ‘ತಾರಾಯಂತ್ರ’. ನಾಲ್ಲು ಪೇಟೆಂಟ್‍ಗಳು ಫೋಟೋಫೋನ್ ಗೆ ದೊರಕಿದೆ. ಗ್ರಾಹಂಬೆಲ್ ದೂರಶ್ರವಣಯಂತ್ರ. ಅಥವಾ ದೂರವಾಣಿಯನ್ನು ಕಂಡುಹಿಡಿಯದೇ ಇದ್ದರೆ ಇಂದು ಪ್ರಪಂಚದಲ್ಲಿ ಇಷ್ಟೊಂದು ಮೊಬೈಲ್ ಕ್ರಾಂತಿಯಾಗುತ್ತಿರಲಿಲ್ಲ... ಅನ್ನಿಸುತ್ತದೆ.. ಕಿವುಡರು ಇಂದು ಉಪಯೋಗಿಸುವ ‘ಹಿಯರಿಂಗ್ ಏಡ್’ ಹುಟ್ಟಲಿಕ್ಕೆ ‘ಗ್ರಾಹಂಬೆಲ್’ ಕಾರಣ ಎಂದರೆ ತಪ್ಪಾಗಲಾರದು. ಆದರೆ ಗ್ರಾಹಂಬೆಲ್ ಕಂಡು ಹಿಡಿದ ದೂರಶ್ರವಣಯಂತ್ರದಲ್ಲಿ ತನ್ನ ತಾಯಿ ಹಾಗೂ ಹೆಂಡತಿಯೊಡನೆ ಎಂದು ಮಾತನಾಡಲಿಲ್ಲ ಎಂಬುದು ವಿಪರ್ಯಾಸ! 1922 ರಲ್ಲಿ ತನ್ನ 80ನೇ ವಯಸ್ಸಿನಲ್ಲಿ ಗ್ರಾಹಂಬೆಲ್ ನಿಧನಹೊಂದಿದನು...    

ಗ್ರಾಹಂಬೆಲ್ ಸಂಶೋಧನೆಯ ಫಲವಾಗಿ ನಮಗೆ ಫೋನ್ ಎಂಬ ಅದ್ಭುತ ಯಂತ್ರ ದೊರೆತಿದೆ,ಇದನ್ನು ವಿವೇಚನೆಯಿಂದ ಸದ್ಬಳಕೆ ಮಾಡಿಕೊಳ್ಳಬೇಕಾಗಿರುವುದು ಅವಶ್ಯಕವಾಗಿದೆ....👍💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು