(ಕಥೆ-201) ಹಿಂಸೆಯಿಂದ ಹೊರಬರಲು ಪ್ರಯತ್ನಿಸೋಣ
*ಕಪ್ಪೆಯೊಂದನ್ನು ತೆಗೆದುಕೊಂಡು “ಬಿಸಿ ನೀರಿ”ನಲ್ಲಿ ಹಾಕಿದರೆ, ಅದು ಕೂಡಲೇ ಹೊರಗೆ ಜಿಗಿಯುತ್ತದೆ! ಅದೇ ಕಪ್ಪೆಯನ್ನು ತಣ್ಣಗಿನ ನೀರಿನ ಬಟ್ಟಲಲ್ಲಿ ಹಾಕಿ, ಅದು ಅಲ್ಲೇ ಇರುತ್ತದೆ. ಈಗ ನಿಧಾನಕ್ಕೆ ನೀರನ್ನು ಬಿಸಿ ಮಾಡಿ. ಕಪ್ಪೆಯ ಸಹಜ ಗುಣ ಏನೇಂದರೆ ನೀರು ಬಿಸಿ ಹೆಚ್ಚಾಗುತ್ತಾ ಹೋದಂತೆ ತನ್ನ ದೇಹವನ್ನು ಆ ಬಿಸಿಗೆ ಹೊಂದಿಸಿಕೊಳ್ಳುತ್ತಾ ಹೋಗುತ್ತದೆ*.
*ಆದರೆ ನೀರು ಕುದಿಯಲು ಆರಂಭಿಸುತ್ತಿದ್ದಂತೆ ಕಪ್ಪೆಗೆ ಅಲ್ಲಿರಲು ಸಾಧ್ಯವಾಗುವುದಿಲ್ಲ. ಹೊರಗೆ ಜಿಗಿಯಬೇಕೆಂದು ನೋಡುತ್ತದೆ. ಆದರೆ ಅದು ಜಿಗಿಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ನೀರಿನ ಉಷ್ಣತೆಗೆ ಕಪ್ಪೆ ಅಲ್ಲಿಯವರೆಗೂ ಹೊಂದಿಕೊಳ್ಳಲು ತನ್ನೆಲ್ಲಾ ಶಕ್ತಿಯನ್ನೆಲ್ಲಾ ಕಳೆದುಕೊಂಡಿರುತ್ತದೆ. ಇನ್ನು ಹೊರಗೆ ಜಿಗಿಯಲು ಶಕ್ತಿಯಿಲ್ಲದೆ ಅದರಲ್ಲೇ ಉಳಿದು ಕೊನೆಗೆ ಸಾಯುತ್ತದೆ*.
*ಕಪ್ಪೆ ಸತ್ತಿದ್ದು ಹೇಗೆ*?
*ಬಿಸಿ ನೀರಿನಿಂದ ಅನ್ನಿಸುತ್ತದೆ*!
*ಆದರೆ ನಿಜವಾಗಿ ಕಪ್ಪೆ ಬಿಸಿನೀರಿನಿಂದ ಸಾಯಲಿಲ್ಲ. ನೀರಿನಿಂದ ಹೊರಗೆ ಯಾವಾಗ ಹೊರಗೆ ಜಿಗಿಯಬೇಕು ಎಂದು ನಿರ್ಧರಿಸಿಕೊಳ್ಳದೆ ಸತ್ತುಹೋಯಿತು. ನೀರು ಸ್ವಲ್ಪ ಬಿಸಿಯಾಗುತ್ತಿದ್ದಂತೆ, ಹೊಂದಿಕೊಳ್ಳೋಣ ಬಿಡು ಎಂದುಕೊಂಡು ಬಿಸಿ ನೀರಿನಲ್ಲೇ ಉಳಿಯಿತು. ಕೊನೆಗೆ ನೀರು ಕುದಿಯೋ ವೇಳೆಗೆ ಅದು ಹೊರಗೆ ಜಿಗಿಯಲು ಸಾಧ್ಯವಾಗಲಿಲ್ಲ*!!!!
*ಅದೇ ರೀತಿ ನಾವು ಸಹ ಜೀವನದಲ್ಲಿ ಅಡ್ಜೆಸ್ಟ್ ಆಗಿಬಿಡುತ್ತೇವೆ. ಆದರೆ ಹೊಂದಾಣಿಕೆ / ಅಡ್ಜಸ್ಟ್ ಮಾಡಿಕೊಂಡೇ ಜೀವನದಲ್ಲಿ ಮೇಲೇರದೇ ಅಲ್ಲೇ ಇರಬಾರದು. ನಾವು ಆರಂಭದಲ್ಲಿ ಹಿಂಸೆ ಯನ್ನು ನಿಭಾಯಿಸಲು ನಮ್ಮ ಶಕ್ತಿಯನ್ನು ಬಳಸುತ್ತೇವೆ. ಆದರೆ ಕೊನೆಗೆ ಅದರಿಂದ ಹೊರಬರಲು ಪ್ರಯತ್ನಿಸುವುದಿಲ್ಲ. ಕೊನೆ ಕೊನೆಗೆ ಹಿಂಸೆಯನ್ನು ನಿಭಾಯಿಸಲು ಸಾಧ್ಯವಾಗವುದಿಲ್ಲ*...
*ಆದಕಾರಣ ನಮಗೆ ಶಕ್ತಿ ಇರುವಾಗಲೇ ಸಮಸ್ಯೆಯಿಂದ ಹೊರಬಂದುಬಿಡಬೇಕು. ಪರ್ವಾಗಿಲ್ಲ ಬಿಡು ಎಂದು ಹಿಂಸೆ ಅನುಭವಿಸುತ್ತಾ ಇದ್ದರೆ, ಕೊನೆಗೆ ಸಮಸ್ಯೆಯ ಬಲೆಯಲ್ಲಿ ಸಿಕ್ಕಿಕೊಂಡು ಸಾಯಬೇಕಾಗುತ್ತದೆ!*.
*ಹಿಂಸೆಯನ್ನು ನಿಭಾಯಿಸುವುದದ ಬದಲು ಅದರಿಂದ ಹೊರಬರಲು ಪ್ರಯತ್ನಿಸೋಣ*
No comments:
Post a Comment