Thursday, November 16, 2023

 ಬದುಕಿನ ಕೊಳದಲ್ಲಿ ಶಾರ್ಕ್‌🌹

ಇತ್ತೀಚೆಗೆ ಒಬ್ಬ ಸ್ನೇಹಿತರೊಬ್ಬರು ತಿಳಿಸಿದ ಸಂಗತಿ ಇದು. ಜಪಾನೀಯರಿಗೆ ತಾಜಾ ಮೀನೆಂದರೆ ಬಲು ಇಷ್ಟ. ಆದರೆ ಜಪಾನ್‌ ಕರಾವಳಿ ಪ್ರದೇಶದಲ್ಲಿ ಮೀನುಗಳು ಬಹಳ ಕಡಿಮೆ. ತುಂಬ ವರ್ಷಗಳಿಂದ ಅಲ್ಲಿ ಮೀನುಗಳನ್ನು ಹಿಡಿ­ಯು­­ತ್ತಿ­­ದ್ದರಿಂದ ಹೀಗಾಗಿರಬೇಕು. ಆದ್ದರಿಂದ ಮೀನುಗಾರರು ಮೀನು ಹಿಡಿ­ಯಲು ಸಮುದ್ರದ ಆಳಕ್ಕೆ ಹೋಗಬೇಕಾಗುತ್ತದೆ. ಅಷ್ಟು ದೂರ ಹೋಗಿ ಸ್ವಲ್ಪವೇ ಮೀನು ತಂದರೆ ಅದು ಹೆಚ್ಚು ಆದಾಯವನ್ನು ತರುವುದಿಲ್ಲ. ಅದಕ್ಕೆಂದೇ ಅವರು ದೊಡ್ಡ, ಅತಿ ದೊಡ್ಡ ನಾವೆಗಳನ್ನು ಮಾಡಿಕೊಂಡಿದ್ದಾರೆ.

ಈ ನಾವೆಗ­ಳಲ್ಲಿ ಸಮುದ್ರದಲ್ಲಿ ಅತ್ಯಂತ ದೂರದವರೆಗೆ ಹೋಗಿ ರಾಶಿ ರಾಶಿ ಮೀನುಗಳನ್ನು ಹಿಡಿದು ತರುತ್ತಾರೆ. ಇವರು ದೂರ ಹೋದಷ್ಟು ಮರಳಿ ಬರುವುದರಲ್ಲಿ ತಡ­ವಾಗುತ್ತಿತ್ತು. ಗ್ರಾಹ­ಕರು ಮನೆ ಸೇರುವಷ್ಟರಲ್ಲಿ ಮೀನುಗಳು ತಾಜಾ ಆಗಿ ಉಳಿ­ಯುತ್ತಿರಲಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಮೀನುಗಾರರು ತಮ್ಮ ನಾವೆ­ಗಳಲ್ಲಿ ದೊಡ್ಡ ದೊಡ್ಡ ಶೈತ್ಯಾಗಾರಗಳನ್ನು ನಿರ್ಮಿಸಿ ತಾವು ಹಿಡಿದ ಮೀನು­ಗಳನ್ನು ಅವುಗಳಲ್ಲಿ ಹಾಕಿಡು­ತ್ತಿದ್ದರು. ಹೀಗೆ ಮೀನುಗಳು ತಾಜಾ ಇರುವಂತೆ ನೋಡಿಕೊಳ್ಳುತ್ತಿದ್ದರು. ಆದರೆ ಜಪಾನೀಯರಿಗೆ ತಾಜಾ ಮೀನಿನ ಹಾಗೂ ಶೈತ್ಯಾ­ಗಾರದ ಮೀನುಗಳ ವ್ಯತ್ಯಾಸ ಬೇಗನೇ ತಿಳಿಯುತ್ತಿತ್ತು. ಮರಗ­ಟ್ಟಿಸಿದ ಮೀನುಗಳ ರುಚಿ ಕಡಿಮೆ. ಹೀಗಾಗಿ ಅವುಗಳ ಬೆಲೆಯೂ ಕಡಿಮೆ­ಯಾಗುತ್ತಿತ್ತು.

ಇದಕ್ಕೂ ಒಂದು ಪರಿಹಾರವನ್ನು ಕಂಡುಕೊಳ್ಳಲು ಮೀನುಗಾ­ರರು ಪ್ರಯತ್ನಿಸಿ­ದರು. ಈ ಬಾರಿ ಅವರು ಶೈತ್ಯಾಗಾ­ರದ ಬದಲಾಗಿ ದೊಡ್ಡ ನೀರಿನ ಟ್ಯಾಂಕುಗ­ಳನ್ನು ಇರಿಸಿ­ಕೊಂಡು ಹಿಡಿದ ಮೀನು­ಗಳನ್ನು ಜೀವಂತವಾಗಿಯೇ ಟ್ಯಾಂಕಿನಲ್ಲಿ ಇಟ್ಟು ದಡಕ್ಕೆ ತರುತ್ತಿ­ದ್ದರು. ಆದರೆ ಈ ಮೀನುಗಳಿಗೂ ತಾಜಾ ಮೀನಿನ ದರವನ್ನು ಜನ ಕೊಡು­ತ್ತಿರ­ಲಿಲ್ಲ. ಯಾಕೆಂದರೆ ಟ್ಯಾಂಕುಗಳಲ್ಲಿದ್ದ ಸಾವಿರಾರು ಮೀನುಗಳು ವಿಶಾಲ­ವಾದ ಸಮುದ್ರದಿಂದ ಬಂದ­ವು­ಗಳು. ಈ ಇಕ್ಕಟ್ಟಿನ ಸ್ಥಾನದಲ್ಲಿ ಅವು­ಗಳಿಗೆ ಉಸಿರುಕ­ಟ್ಟಿದಂತಾಗುತ್ತಿತ್ತು. ಸ್ವಚ್ಛವಾಗಿ ಈಜಲಾರದೇ ಸ್ವಲ್ಪ ಹೊತ್ತಿಗೇ ಸುಸ್ತಾಗಿ ಬಿದ್ದು ಸತ್ತು ಹೋಗುತ್ತಿದ್ದವು. ಈ ಮೀನುಗಳ ರುಚಿಯೂ ಕಡಿಮೆಯೇ.

ಈ ಕಾರಣಗಳಿಂದಾಗಿ ತಮ್ಮ ಜನರಿಗೆ ತಾಜಾ ಮೀನುಗಳನ್ನು ನೀಡುವುದು ಹೇಗೆ ಎನ್ನುವುದೇ ಬಹುದೊಡ್ಡ ಸವಾಲಾಗಿತ್ತು. ಜಪಾನೀಯರು ಇದ­ಕ್ಕೊಂದು ಪರಿಹಾರ ಕಂಡುಹಿಡಿದಿದ್ದಾರೆ. ಅದು ಹೇಗೆ ಗೊತ್ತೇ? ಹಡಗುಗಳಲ್ಲಿ ಈಗಲೂ ನೀರಿನ ಟ್ಯಾಂಕುಗಳಿವೆ. ಹಿಡಿದ ಮೀನುಗಳನ್ನು ಅವುಗಳಲ್ಲಿಯೇ ಹಾಕು­ತ್ತಾರೆ. ಆದರೆ ಆ ಮೀನುಗಳ ಜೊತೆಯಲ್ಲಿ ಪ್ರತಿ ಟ್ಯಾಂಕಿನಲ್ಲೂ ಒಂದೆರಡು ಶಾರ್ಕ್‌ ಮೀನುಗಳನ್ನು ಹಾಕುತ್ತಾರೆ. ಈ ಶಾರ್ಕ್‌ಗಳು ಉಗ್ರವಾದ­ವುಗಳು, ಮೀನು­ಗಳನ್ನು ಬೆನ್ನಟ್ಟಿ ಕೊಂದು ತಿನ್ನುತ್ತವೆ. ತಮ್ಮ ಟ್ಯಾಂಕಿನಲ್ಲಿದ್ದ ಶಾರ್ಕ್‌ಗಳಿಂದ ತಪ್ಪಿಸಿಕೊಳ್ಳಲು ಉಳಿದ ಮೀನುಗಳು ಚುರುಕಾಗಿರ­ಬೇಕಾಗು­ತ್ತದೆ.


ಒಂದು ಕ್ಷಣ ಮೈಮರೆತರೂ ಪ್ರಾಣ ಹೋಗಿ ಬಿಡುತ್ತದೆ. ಸದಾ ಎಚ್ಚ­ರಿಕೆಯ ಈ ಜೀವನ ಅವು­ಗ­ಳನ್ನು ತಾಜಾ ಆಗಿಯೇ ಇಡುತ್ತದೆ, ಅಂದರೆ ಸವಾಲಿನ ಮುಖದಲ್ಲಿ ಮೀನು­ಗಳು ಸದಾ ಕಾಲ ಓಡಾಡುತ್ತ, ಚುರುಕಾಗಿದ್ದು ತಾಜಾ ಆಗಿ ಉಳಿದಿದ್ದವು. ನಾವೂ ನಮ್ಮ ನಮ್ಮ ಬದುಕಿನ ಟ್ಯಾಂಕ್‌ಗಳಲ್ಲಿ ಎಷ್ಟೋ ಬಾರಿ, ಸುಸ್ತಾಗಿ, ಕೈ ಚೆಲ್ಲಿ ಕುಳಿತುಕೊಳ್ಳುತ್ತೇವೆ. ಸಾಕಪ್ಪ, ಇನ್ನೇಕೆ ಒದ್ದಾಟ ಎಂದು­ಕೊಂಡು ಹಳತಾಗು­ತ್ತೇವೆ. ಹಾಗಾದರೆ ನಾವು ತಾಜಾ ಆಗಿಯೇ ಇರ­ಬೇಕಾದರೆ ಏನು ಮಾಡಬೇಕು? ಸವಾಲುಗಳನ್ನು ಎದುರಿಸಬೇಕು. ಸವಾಲು­ಗಳು ಇಲ್ಲದಿದ್ದರೆ ಸೃಷ್ಟಿಸಿಕೊಳ್ಳಬೇಕು. ಅವು ಇದ್ದಾಗ ನಾವು ಚುರುಕಾ­ಗುತ್ತೇವೆ, ಹೊಸ­ತಾ­ಗು­ತ್ತೇವೆ, ಹಳಸುವುದಿಲ್ಲ, ಬದುಕು ರಸಹೀನವಾಗುವುದಿಲ್ಲ. ನಮ್ಮ ಜೀವನದ ಕೊಳದಲ್ಲಿ ಒಂದು ಶಾರ್ಕ್‌ ಬಿಟ್ಟುಕೊಳ್ಳಿ, ಸದಾ ತಾಜಾ ಆಗಿ ಇರಿ.

ಅಂದಾಗ ಮಾತ್ರ ಜೀವನ ಚುರಕಾಗಿರುತ್ತದೆ ಇಲ್ಲದಿದ್ದರೆ ಜೀವನ ನಿರ್ಜೀವಿ ರೀತಿಯಲ್ಲಿ ಆಗುತ್ತದೆ ಅಥವಾ ಯಾಂತ್ರಿಕವಾಗುತ್ತದೆ... ಕೃಪೆ: ಮುಖ ಪುಟ.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು