Tuesday, November 21, 2023

  ಕಥೆ-220 ಸೇವೆ ಮಾಡುವ ಮನಸ್ಸು, ಬದ್ಧತೆ ಮುಖ್ಯ..


ಇವರ ಹೆಸರು ಪಾರ್ಥಿಬನ್‌. ತಮಿಳುನಾಡು ಮೂಲದವರು. ದೆಹಲಿಯ ಏರಿಯಾವೊಂದರ ಎಸ್‌ಬಿಐ ಬ್ಯಾಂಕ್‌ ವ್ಯವಸ್ಥಾಪಕರು(Manager) ಆಗಿದ್ದರು. ಮಧ್ಯಾಹ್ನದ ಊಟದ ನಂತರ ಒಂದು ನಾಲ್ಕು ಹೆಜ್ಜೆ ಹಾಕುವುದು ಅವರ ಅಭ್ಯಾಸವಾಗಿತ್ತು. ಹೆಜ್ಜೆ ಹಾಕುವಾಗ ಹಣ್ಣು ಮಾರುವವರು, ಚಹಾ ಮಾರುವವರೊಂದಿಗೆ ನಾಲ್ಕು ವಿಷಯ ಹಂಚಿಕೊಳ್ಳುತ್ತಿದ್ದರು.

ಮಾತುಕತೆ ನಡುವೆ ಆತ ಭಿಕ್ಷುಕರು, ಬೀದಿ ಬದಿ ವ್ಯಾಪಾರಿಗಳ ಆದಾಯ ಎಷ್ಟೆಂಬುದನ್ನು ಗಮನಿಸಿ, ತಿಳಿದುಕೊಂಡರು. ಒಳ್ಳೆಯ ದುಡಿಮೆ ಇದ್ದರೂ ನಾನಾ ಕಾರಣಗಳಿಗೆ ಖಾಸಗಿ ಬಡ್ಡಿ ವಹಿವಾಟುದಾರರ ಕಪಿಮುಷ್ಟಿಯಲ್ಲಿದ್ದಾರೆಂದು ತಿಳಿದು ಹೊರತರಲು ನಿರ್ಧರಿಸಿದರು.


ಮೊದಲಿಗೆ ತಾನು ಬ್ಯಾಂಕ್‌ ಮ್ಯಾನೇಜರ್‌ ಎನ್ನುವ ವಿಷಯವನ್ನು ಯಾರಿಗೂ ಹೇಳಲಿಲ್ಲ. ಆದರೆ, ಉಳಿತಾಯ ಮಾಡಬಹುದಾದವರ ಬಳಿ ಹೋಗಿ ಪಕ್ಕದ ಬೀದಿಯಲ್ಲಿರುವ ಎಸ್‌ಬಿಐ ಬ್ಯಾಂಕ್‌ನಲ್ಲಿ ನೀವು ಖಾತೆ ತೆರೆದರೆ ನಿಮಗೆ ಸಾಲ ಸಿಗುವ ಅವಕಾಶಗಳಿವೆ ಎಂದು ಹೇಳುತ್ತಿದ್ದರು. ಮೊದ ಮೊದಲು ಯಾರೊಬ್ಬರೂ ಸ್ಪಂದಿಸಲಿಲ್ಲ. ಖಾತೆ ತೆರೆಯುವಷ್ಟು ಹಣ ನಮ್ಮಲ್ಲಿಲ್ಲವೆಂದೂ, ಊಟ ಗಿಟ್ಟಿಸಿಕೊಳ್ಳುವುದೇ ಕಷ್ಟ ಎಂತಲೂ ಸಬೂಬು ಹೇಳುತ್ತಿದ್ದರು. ಪಟ್ಟು ಬಿಡದ ಪಾರ್ಥಿಬನ್‌ ತಮ್ಮ ಪ್ರಯತ್ನ ಮುಂದುವರಿಸಿದರು. ಕೊನೆಗೆ ಕೆಲ ಭಿಕ್ಷಕರು, ಬೀದಿ ವ್ಯಾಪಾರಿಗಳು ಧೈರ್ಯ ಮಾಡಿ ಬ್ಯಾಂಕ್‌ ಖಾತೆ ತೆರೆಯಲು ಮುಂದಾದರು. ಅವರಿಗೆ ಯಾವ ಗುರುತಿನ ಚೀಟಿಗಳೂ ಇರಲಿಲ್ಲ. ಪಾರ್ಥಿಬನ್‌ ತಾವೇ ಪರಿಚಿತರಾಗಿ ಬ್ಯಾಂಕ್‌ ಖಾತೆ ತೆರೆದರು. ಅಷ್ಟೇ ಅಲ್ಲ, ವಹಿವಾಟು ನಡೆಸುವ ವಿಧಾನಗಳು ಕುರಿತೂ ಮಾಹಿತಿ ನೀಡಿದರು. ಒಬ್ಬರನ್ನು ನೋಡಿ ಮತ್ತೊಬ್ಬರು ಖಾತೆ ತೆರೆಯಲು ಪ್ರಾರಂಭಿಸಿದರು. ಕೆಲವೇ ದಿನಗಳಲ್ಲಿ ಹಣ ಉಳಿತಾಯ, ಅಗತ್ಯವಿದ್ದವರು ಸಾಲ ಪಡೆಯಲಾರಂಭಿಸಿದರು. ಕೆಲವೊಮ್ಮೆ ಪಾರ್ಥಿಬನ್‌ ತಾವೇ ಜಾಮೀನುದಾರರಾದರು. ನೀರಿನ ಪಾಕೆಟ್‌ ಮಾರುತ್ತಿದ್ದ ಯುವಕನೊಬ್ಬ ಮಾಸಿಕ ಇಪ್ಪತ್ತೈದರಿಂದ ಮೂವತ್ತು ಸಾವಿರ ಹಣ ದುಡಿಮೆ ಮಾಡುತ್ತಿದ್ದ. ಅವನಿಗೆ ಹಣ ಏನು ಮಾಡಬೇಕೋ ತಿಳಿಯುತ್ತಿರಲಿಲ್ಲ. ಪಾರ್ಥಿಬನ್‌ ಸಲಹೆ ಮೇರೆಗೆ ಮಾಸಿಕ ಒಂದಷ್ಟು ಹಣ ಉಳಿಸಲು ಪ್ರಾರಂಭಿಸಿದ. ಎಲ್ಲರಂತೆ ಪಾರ್ಥಿಬನ್‌ಗೆ ವರ್ಗಾವಣೆ ಆಯಿತು. ಅಚ್ಚರಿಯೆಂದರೆ, ಅಷ್ಟು ಹೊತ್ತಿಗೆ ನೀರಿನ ಪಾಕೆಟ್‌ ಮಾಡುವ ಹುಡುಗ ಎರಡೂವರೆ ಲಕ್ಷ ಹಣ ಉಳಿತಾಯ ಮಾಡಿದ್ದ. ಬಡ್ಡಿ ಹಣಕ್ಕೆ ಜೋತು ಬೀಳದೇ ತಮ್ಮ ಮಕ್ಕಳು ಮದುವೆ ಮಾಡಿದವರು, ಭಿಕ್ಷೆಯ ವೃತ್ತಿಯಲ್ಲಿರುವ ಮಕ್ಕಳನ್ನು ಶಾಲೆಗೆ ಸೇರಿಸಿದವರು ಹೀಗೆ ಹಲವು ನಿದರ್ಶನಗಳು ಸಿಗುತ್ತವೆ. ಪಾರ್ಥಿಬನ್‌ ತಮಿಳುನಾಡಿನ ಸೇಲಂಗೆ ವರ್ಗಾವಣೆಯಾದಾಗಲೂ ಗ್ರಾಮೀಣ ಜನರಿಗೆ ಸ್ವಯಂ ಸೇವೆ ನೀಡಿ, ಜನರ ಆರ್ಥಿಕ ಸ್ಥಿತಿ, ಶಿಸ್ತು ಸುಧಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈಗಲೂ ಅವರ ಈ ಜನಸೇವೆಯ ಕಾಳಜಿ ಬದಲಾಗಿಲ್ಲ.

 ನಿತ್ಯ ಲಕ್ಷಾಂತರ ನಾಗರಿಕರು ತಮ್ಮ ಕೆಲ ಕಚೇರಿ ಕೆಲಸಗಳಿಗೆ ಕನಿಷ್ಟ ಮಾಹಿತಿ ಇಲ್ಲದೇ ಅಥವಾ ಸರಳವಾದೊಂದು ದಾಖಲೆ ಪಡೆಯಲು ತಿಂಗಳುಗಟ್ಟಲೇ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಅವರ ದುಡಿಮೆ ಸಮಯದ ಜತೆಗೆ ಖರ್ಚು, ವೆಚ್ಚ ಎಲ್ಲ ಲೆಕ್ಕಹಾಕಿದರೆ ಎಷ್ಟಾಗಬಹುದು?

ದೇವರನ್ನು ಮೆಚ್ಚಿಸಲು ನಾವು ದೇವಸ್ಥಾನಗಳಿಗೇ ಹೋಗಬೇಕೆಂದೇನೂ ಇಲ್ಲ. ನಾನಾ ಸಂಕಷ್ಟದಲ್ಲಿರುವ, ಅಸಹಾಯಕತೆಯಲ್ಲಿರುವ ಜನರ ಸೇವೆ ಮಾಡುವುದು ಕೂಡಾ ದೇವರ ಸೇವೆಯೇ. ನಾವು ಯಾವ ಸ್ಥಾನದಲ್ಲಿದ್ದರೂ ಜನಸೇವೆ ಮಾಡಲು ಯೋಗ್ಯರು. ಆದರೆ, ಸೇವೆ ಮಾಡುವ ಮನಸ್ಸು, ಬದ್ಧತೆ ನಮ್ಮಲ್ಲಿರಬೇಕಷ್ಟೆ.

 ಪಾರ್ಥಿಬನ್‌ರಂತವರು ನಮಗೆ ಮಾದರಿಯಾಗುತ್ತಾರೆ...

ಕೃಪೆ: ಶ್ರೀ ಬಸವ ಮೂರ್ತಿ

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು