ಕಥೆ-206 ಹಣದಿಂದ ಗುಣ ಬರುತ್ತಾ,
ಇನ್ಫೋಸಿಸ್ ಫೌಂಡೇಷನ್ ಚೇರ್ಮನ್, ಬರಹಗಾರ್ತಿ ಸುಧಾಮೂರ್ತಿ ಬರೆದಿರುವ ’ತ್ರಿ ಥೌಸಂಡ್ ಸ್ಟಿಚಸ್’ ಪುಸ್ತಕದಲ್ಲಿ ತನಗೆ ಎದುರಾದ ಆಸಕ್ತಿಕರವಾದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಬಟ್ಟೆ, ಆಹಾರದ ಬಗ್ಗೆ ಮೂಲಭೂತವಾದ ಭಾವನೆಗಳನ್ನು ಖಂಡಿಸುತ್ತಾ ಅವರಿಗೆ ಎದುರಾದ ಅನುಭವಗಳನ್ನು ಮೆಲುಕುಹಾಕಿದ್ದಾರೆ...
ಸುಧಾಮೂರ್ತಿ ಒಮ್ಮೆ ಲಂಡನ್‌ನಿಂದ ಬೆಂಗಳೂರಿಗೆ ಹೊರಟಿದ್ದರು. ಅದಕ್ಕಾಗಿ ಬಿಜಿನೆಸ್ ಕ್ಲಾಸ್ ಟಿಕೆಟ್‌ಗಳನ್ನು ಬುಕ್ ಮಾಡಿಕೊಂಡಿದ್ದರು. ಹಾಗಾಗಿ ಲಂಡನ್‌ನ ಹೀತ್ರೂ ಇಂಟರ್‌ನ್ಯಾಶನಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆದರೆ ಸಾಮಾನ್ಯವಾಗಿ ಅವರು ಸೀರೆಯನ್ನೇ ಉಡುತ್ತಾರೆ. ಪ್ರಯಾಣದಲ್ಲಿದ್ದರೆ ಚೂಡಿದಾರ ಹಾಕಿಕೊಳ್ಳುತ್ತಾರೆ. ಆ ದಿನ ಚೂಡಿದಾರ ಉಟ್ಟಿದ್ದರು. ನೋಡಲು ತುಂಬಾ ಸರಳವಾಗಿರುತ್ತಾರೆ. ಅವರ ಡ್ರೆಸ್ಸಿಂಗ್ ಸಹ ಯಾವಾಗಲೂ ಅದೇ ರೀತಿ ಇರುತ್ತದೆ. ಅಂದು ತೊಟ್ಟಿದ್ದ ಚೂಡಿದಾರ ಸಹ ಅಂತಹ ದುಬಾರಿಯದ್ದೇನು ಆಗಿರಲಿಲ್ಲ. ಆ ರೀತಿ ಆಕೆ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಬೋರ್ಡಿಂಗ್ ಪಾಸ್ ತೆಗೆದುಕೊಂಡು ವಿಮಾನ ಹತ್ತಲು ಸಾಲಿನಲ್ಲಿ ನಿಂತರು.
ಅವರ ಮುಂದೆ ನಿಂತಿದ್ದ ಒಬ್ಬಾಕೆ…ಹೋಗಮ್ಮಾ ಹೋಗು ಇದು ಬಿಝಿನೆಸ್ ಕ್ಲಾಸ್, ನೀನು ನಿಂತುಕೊಳ್ಳಬೇಕಾದ ಎಕನಾಮಿಕ್ ಕ್ಲಾಸ್ ಅಲ್ಲಿದೆ ನೋಡು ಅಲ್ಲಿಗೆ ಹೋಗು ಎಂದು ತಿರಸ್ಕಾರವಾಗಿ ಮಾತನಾಡಿದ ಆಕೆಯನ್ನು ನೋಡಿ ಏನೂ ಮಾತನಾಡದೆ ಸೈಲೆಂಟ್ ಆಗಿ ಇದ್ದರು ಸುಧಾಮೂರ್ತಿ.ಅತ್ತ ಹೋಗಿ ನಿಂತುಕೊಳ್ಳಿ ಎಂದಾಕೆ ನೋಡಲು ನೀಟಾಗಿ ಡ್ರೆಸ್ ಮಾಡಿಕೊಂಡಿದ್ದಳು. ಹೈಹೀಲ್ಸ್ ಹಾಕಿಕೊಂಡಿದ್ದಳು..
“ಎಕಾನಮಿ ಕ್ಲಾಸ್ ಅತ್ತಕಡೆ…ಇದು ಬಿಝಿನೆಸ್ ಕ್ಲಾಸ್” ಎಂದು ಸೂಚಿಸಿದ್ದರು. ಸುಧಾಮೂರ್ತಿ ಅದನ್ನ ಕೇರ್ ಮಾಡದೆ ಕ್ಯೂನಲ್ಲಿ ಇರುವುದನ್ನು ನೋಡಿ “ಹೇಳ್ತಿದ್ದರೆ ಅರ್ಥಾವಾಗುತ್ತಿಲ್ಲವೇ” ಎಂದು ಮತ್ತೊಮ್ಮೆ ಜೋರು ಮಾಡಿದ್ದಳು ಆಕೆ.
ಕಡೆಗೆ ವಿಮಾನದ ಒಳಗೆ ಬಂದ ಸುಧಾಮೂರ್ತಿ ಆ ಮಹಿಳೆ ಬಳಿ ಹೋಗಿ….ನಾನು ಹಳ್ಳಿಯವಳೇ. ಆದರೆ ನೀವು ಮಾತ್ರ ಕ್ಲಾಸ್ ಮಹಿಳೆಯರಲ್ಲ. ಒಬ್ಬ ಮನುಷ್ಯನಿಗೆ ಕ್ಲಾಸ್ ಎಂಬುದು ಅವರು ಸಂಪಾದಿಸುವ ಹಣ, ಅಲಂಕಾರದಿಂದ ಬರಲ್ಲ. ತಾನು ಮಾಡುವ ಒಳ್ಳೆಯ ಕೆಲಸಗಳಿಂದ ಬರುತ್ತದೆ. ಅಷ್ಟೇ ಹೊರತು ಅದನ್ನು ಹಣ ತಂದುಕೊಡಲ್ಲ..ಎಂದು ಹೇಳಿ ಅಲ್ಲಿಂದ ಹೊರಟು ಹೋದರು..! ಸುಧಾಮೂರ್ತಿ ಕೊಟ್ಟ ಕೌಂಟರ್‌ಗೆ ಆ ಮಹಿಳೆ ಏನು ಮಾತನಾಡಬೇಕೋ ಅರ್ಥವಾಗಲಿಲ್ಲ. ಹೌದಲ್ಲವೇ ಸುಧಾಮೂರ್ತಿ ಹೇಳಿದ್ದು ಸತ್ಯ. ಹಣದಿಂದ ಗುಣ ಬರುತ್ತಾ, ಕ್ಲಾಸ್ ಆಗಿ ಇರುತ್ತಾರಾ.? ಅದು ಸ್ವತಃ ಬರಬೇಕು, ಅವರು ಮಾಡುವ ಕೆಲಸಗಳನ್ನು ಅವಲಂಭಿಸಿ ಅದು ಇರುತ್ತದೆ..!
No comments:
Post a Comment