ಕಥೆ-245
ದೇಶ ಸುತ್ತಿ ನೋಡು ಕೋಶ ಓದಿ ನೋಡು
ಮನುಷ್ಯನಿಗೆ ಲೋಕಜ್ಞಾನ ಬಹಳ ಮುಖ್ಯ.ಅಂದರೆ ಒಂದು ದೇಶ ಸುತ್ತುವುದರಿಂದ ಆ ಪ್ರದೇಶದ ಜನರ ಆಚಾರ,ವಿಚಾರ,ಪದ್ಧತಿ,ರೀತಿ, ನೀತಿಗಳ ಅರಿವಾಗುತ್ತದೆ.ನಮಗೆ ತಿಳಿಯದೇ ಇರುವ ಎಷ್ಟೋ ವಿಷಯಗಳು ತಿಳಿಯುತ್ತವೆ.
ಲೋಕಸುತ್ತುವುದೇ ಒಂದು ಬಗೆಯ ಜ್ಞಾನಾರ್ಜನೆ ಎನಿಸಿದೆ.
ತನ್ನ ಐದು ವರ್ಷಗಳ ಪ್ರವಾಸ ಮುಗಿಸಿ ಇಂಗ್ಲೆಂಡಿಗೆ ಹಿಂದಿರುಗಿದ ಜೀವ ವಿಕಾಸದ ಸಿದ್ಧಾಂತದ ಪಿತಾಮಹ ಡಾರ್ವಿನ್ ತಾನು ನೋಡಿದ ವಿಷಯಗಳ ಕುರಿತು ಬಹು-ಸಂಪುಟದ ಪುಸ್ತಕವನ್ನು ಬರೆಯಲು ಪ್ರಾರಂಭಿಸಿದನು. ಬೀಗಲ್ ಯಾನದ ಕುರಿತಾದ ಅವರ ಬರಹಗಳು 1843 ರಲ್ಲಿ ಮುಕ್ತಾಯಗೊಂಡಿತು, "ದಿ ಒರಿಜಿನ್ ಆಫ್ ಸ್ಪೀಸೀಸ್" ಎಂಬ ಶ್ರೇಷ್ಠ ಕೃತಿ ಜೀವಿಗಳ ವಿಕಾಸದ ಮಾಹಿತಿಗಳನ್ನ ಹೊರ ಹಾಕಿತು..
ಶಂಕಾರಾಚಾರ್ಯರು ಭಾರತದ ನಾಲ್ಕೂ ಮೂಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಂಚರಿಸಿ ಪೀಠಗಳನ್ನು ಸ್ಥಾಪಿಸಿದರು ಸಮಾಜ ಸುಧಾರಣೆ ಪ್ರಯತ್ನ ಮಾಡಿದರು..
ಇಂದು ಪ್ರವಾಸ ಮಾಡುವುದು ಒಂದು ದೊಡ್ಡ ಹವ್ಯಾಸವಾಗಿದೆ.. ವಿದೇಶೀಯರು ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಕ್ಕೆ ಬರುತ್ತಿದ್ದಾರೆ. ಭಾರತೀಯರೂ ಈಗ ಪ್ರವಾಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಹೀಗೆ ಪ್ರವಾಸ ಮಾಡುವುದು ಅಂದರೆ ದೇಶ ಸುತ್ತುವುದರಿಂದ ನಮ್ಮ ಅನುಭವ ಹೆಚ್ಚುತ್ತದೆ, ತಿಳಿವಳಿಕೆ ವಿಸ್ತರಿಸುತ್ತದೆ. ಅದರಲ್ಲೂ ಯುವಕರು ಹೆಚ್ಚೆಚ್ಚು ದೇಶ ಸುತ್ತಿದರೆ ಅವರ ವೃತ್ತಿಜೀವನಕ್ಕೆ ತುಂಬಾ ಅನುಕೂಲ.
ಬೇರೆ ಬೇರೆ ಪ್ರದೇಶವನ್ನು ಸಂದರ್ಶಿಸಿ ಅಲ್ಲಿಯ ಜನರ ಬದುಕು. ಅನುಭವ ಪಡೆಯುವುದು. ವಿಭಿನ್ನ ಭೋಗೋಳಿಕ ಪ್ರದೇಶಗಳ ಅನುಭವ ಪಡೆಯುವುದು. ಕರಾವಳಿ ತೀರದ ಪ್ರದೇಶದ ಬಗ್ಗೆ ಕೋಶದಲ್ಲಿ ಓದಿದ ಅನುಭವಕ್ಕಿಂತ ವಾಸ್ತವತೆ ಬಹಳಷ್ಟು ಅನುಭವವನ್ನು ಆನಂದ ನೀಡುವುದು. ಹೀಗೆ ಹಲವಾರು ಸ್ಥಳವನ್ನು ನೋಡಿ, ಅಲ್ಲಿನ ವೈಶಿಷ್ಠ್ಯತೆಯನ್ನು ಅನುಭವಸಿದರೆ ನಮ್ಮ ತಿಳುವಳಿಕೆ ಹೆಚ್ಚುತ್ತದೆ. ನಮ್ಮ ಯೋಚನಾ ರೀತಿ ಬದಲಾಗುತ್ತದೆ. ನಾವು ಕೂಪ ಮಂಡೂಕಗಳಾಗದೇ ಲೋಕದ ಜ್ಞಾನ ಪಡೆಯಲು ಪ್ರವಾಸ ಅತ್ಯುತ್ತಮ.
ಈ ಹಿಂದೆ ಜ್ಞಾನ ಪಡೆಯಲು ಒಂದೇ ವಿಧಾನವೆಂದರೆ ಪುಸ್ತಕ ಓದುವುದಾಗಿತ್ತು. ಆದರೆ ಈಗ ನಮಗೆ ಬಗೆ ಬಗೆಯ ವಿಧಾನಗಳಿದ್ದಾವೆ. ಹೊರ ಸಂಚಾರ ಕ್ಷೇತ್ರದ ವೀಕ್ಷಣೆ ಪ್ರವಾಸ ಅನುಭವಗಳ ಹಂಚಿಕೆ ಅಂತರ್ಜಾಲದ ಮೂಲಕ ಲೇಖನಗಳನ್ನು ಓದುವುದು, ವೀಡಿಯೋ ನೋಡುವುದು, ಮುಂತಾದವುಗಳು ಈ ಸಾಲಿಗೆ ಸೇರುತ್ತವೆ.
ದೇಶ ಸುತ್ತುವುದರಿಂದ ನಾವು ಜೀವನವನ್ನು ನೋಡುವ ರೀತಿಯೇ ಬದಲಾಗುತ್ತದೆ. ನಮ್ಮ ಜೀವನದಲ್ಲಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ.
ಪ್ರವಾಸಕ್ಕಾಗಿ ಮಕ್ಕಳಿಗೆ ಸಲಹೆಗಳು
1. ಮೊಟ್ಟಮೊದಲು ಆರೋಗ್ಯದ ಬಗ್ಗೆ ಕಾಳಜಿ ಇರಲಿ ಚಳಿಗಾಲ ಇರುವುದರಿಂದ ಉಣ್ಣೆ ಅಂಗಿ ಸ್ಕಾರ್ಫ್/ಟೊಪ್ಪಿಗೆಗಳನ್ನು ಧರಿಸಿರಿ.. ಆರೋಗ್ಯ ಕೆಡುವಂತಹ ಆಹಾರವನ್ನು ಸೇವಿಸದಿರಿ..
2.ಪಾಲಕರ ಮತ್ತು ಒಬ್ಬ ಶಿಕ್ಷಕರ ಫೋನ್ ನಂಬರ್ ಗಳನ್ನು ಕಡ್ಡಾಯವಾಗಿ ಬರೆದಿಟ್ಟುಕೊಂಡು ಕಂಠ ಪಾಠ ಮಾಡಿಕೊಳ್ಳಿ..
3.ಅಪಚಿತರು ತಿಂಡಿಗಳನ್ನು ಕೊಟ್ಟರೆ ತಿನ್ನಬೇಡಿ..
4. ಶಿಕ್ಷಕರನ್ನು ಮತ್ತು ನಿಮ್ಮ ಸ್ನೇಹಿತರನ್ನು ಬಿಟ್ಟು ಒಂಟಿಯಾಗಿ ತಿರುಗಬೇಡಿ..
5.ಒಂದು ವೇಳೆ ಮಿಸ್ ಆದರೆ ನಿಮ್ಮ ಪಾಲಕರಿಗೆ/ ಶಿಕ್ಷಕರಿಗೆ/112 (ಎಮರ್ಜೆನ್ಸಿ ಫೋನ್) ಕರೆ ಮಾಡಿರಿ.
6.ಪ್ರವಾಸಕ್ಕೆ ಹೊರಡುವ ಪ್ರತಿಮಗುವಿನ ಕೈಯಲ್ಲೊಂದು ನೋಟ್ ಪುಸ್ತಕ ಅಥವಾ ಡೈರಿ ಇರಲಿ. ಇದರಲ್ಲಿ ಮಗು ತನಗೆ ದಕ್ಕಿದ ವಿಶಿಷ್ಟ ಅನುಭವಗಳನ್ನ, ತಿಳಿದುಕೊಂಡ ವಿಷಯಗಳನ್ನ ತನ್ನದೇ ಭಾಷೆಯಲ್ಲಿ ಟಿಪ್ಪಣಿ ಮಾಡಿಕೊಳ್ಳಲಿ. ಮಾರ್ಗಮಧ್ಯ ಈ ಟಿಪ್ಪಣಿಗಳ ಸಹಾಯದಿಂದ ಮಕ್ಕಳು ಒಬ್ಬೊಬ್ಬರಾಗಿ ತಮ್ಮ ತಮ್ಮ ತಿಳುವಳಿಕೆಯನ್ನ ಇತರ ಮಕ್ಕಳೊಂದಿಗೆ ಹಂಚಿಕೊಳ್ಳಲು ಅವಕಾಶ ಕೊಟ್ಟರೆ ಉಳಿದ ಮಕ್ಕಳೂ ಸಹ ಒಂದು ಸ್ಥಳವನ್ನ ಅಥವಾ ವಾತಾವರಣವನ್ನ ಹೇಗೆ ಗ್ರಹಿಸಬೇಕು ಅನುಭವಕ್ಕೆ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಪ್ರಾಯೋಗಿಕ ತಿಳಿವಳಿಕೆ ಮೂಡಿ ಮುಂದಿನ ಸ್ಥಳಗಳನ್ನ ಮತ್ತಷ್ಟು ಆಸಕ್ತಿ ಮತ್ತು ಕುತೂಹಲದಿಂದ ನೋಡಲು ಸಾಧ್ಯವಾಗುತ್ತದೆ.
ಮಕ್ಕಳನ್ನು ಶಾಲಾ ಪ್ರವಾಸಗಳಿಗೆ ಕಳುಹಿಸುವುದು ಪೋಷಕರಿಗೆ ರೋಮಾಂಚನಕಾರಿ ಮತ್ತು ಆತಂಕಕಾರಿಯಾಗಿದೆ.
ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ ಮತ್ತು ಕೆಲವು ಅಗತ್ಯ ಸುರಕ್ಷತೆ ಮುಖ್ಯ.
ಪಾಲಕರಿಗೆ ಸಲಹೆಗಳು
1. ಮಕ್ಕಳ ಪ್ರವಾಸದ ಸ್ಥಳಗಳನ್ನು ತಿಳಿದುಕೊಳ್ಳಿರಿ
2. ಶಿಕ್ಷಕರ ಫೋನ್ ನಂಬರನ್ನು ನಿಮ್ಮಲ್ಲಿ ಇರಿಸಿಕೊಳ್ಳಿರಿ
3.ಮಕ್ಕಳಿಗೆ ಪೂರಕ ಕೆಡದಂತಹ ಆಹಾರ ಮತ್ತು ಲಗೇಜ್ ತಯಾರಿಗೆ ಸಹಕರಿಸಿರಿ..
3.ಅಪರಿಚಿತರೊಂದಿಗೆ ವರ್ತಿಸುವ ವಿಧಾನ ಅವರಿಂದ ಏನನ್ನೂ ಸ್ವೀಕರಿಸದಿರುವ ಪ್ರಾಮುಖ್ಯತೆಯನ್ನು ತಿಳಿಸಿರಿ
4.ಎಲ್ಲಾ ಸಮಯದಲ್ಲೂ ಶಿಕ್ಷಕರು ಮತ್ತು ಸ್ನೇಹಿತರೊಂದಿಗೆ ಗುಂಪುಗಳಲ್ಲಿ ಇರಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿ.
5.ಅನಿವಾರ್ಯ ಸಂದರ್ಭದಲ್ಲಿ ಎಲ್ಲಿಗಾದರೂ ಹೋಗುವ ಮೊದಲು ಶಿಕ್ಷಕರಿಂದ ಅನುಮತಿ ಪಡೆಯಲು ತಿಳಿಸಿರಿ.
ಕೊನೆಯ ಮಾತು ಪ್ರವಾಸ ಖುಷಿಯೊಂದಿಗೆ ಶೈಕ್ಷಣಿಕ ಮನನಕ್ಕಾಗಿ ವಿನಹ ಮೋಜು-ಮಸ್ತಿ ಸೆಲ್ಫಿ ಕುಲ್ಫಿ ಅಂತಹ ಇಲ್ಲದ ಹುಂಬತನ ಮಾಡಲು ಹೋಗಿ ಯಾವುದೇ ಅವಘಡಗಳಿಗೆ ಕಾರಣರಾಗಬೇಡಿ ಎನ್ನುವ ಕಳಕಳಿ...
ಪ್ರವಾಸ ನೆನಪುಗಳು ಕಲಿಕೆಯ ಸಂತೋಷದ ಖಜಾನೆಯಾಗಲಿ.
All the best..
Happy Journey 💐 💐💐💐
No comments:
Post a Comment