ಕಥೆ-238 ರಾಜನ ಕಣ್ಣು ತೆರೆಸಿತು.
ಒಂದು ಊರಲ್ಲಿ ಒಬ್ಬ ರಾಜ ದಿನ ಬೆಳಿಗ್ಗೆ ಎದ್ದು ಸೂರ್ಯನನ್ನು ನೋಡುವುದು ರೂಡಿ ಹಾಗೆ ನೋಡಿದಾಗ ಅಂದಿನ ದಿನವೆಲ್ಲ ತನ್ನ ಜೀವನದಲ್ಲಿ ಒಳ್ಳೆಯದೆ ನಡೆಯುವುದು ಎಂಬುದು ಆ ರಾಜನ ನಂಬಿಕೆ
ಅಂದುಕೊಂಡ ಹಾಗೆ ಎಲ್ಲವು ಒಳ್ಳೆಯದೆ ನಡೆಯುತಿತ್ತು ಹೀಗಿರುವಾಗ ಒಂದು ದಿನ ರಾಜ ಸೂರ್ಯ ನಮಸ್ಕಾರ ಮಾಡಲು ಹೊರಗೆ ಬಂದಾಗ ಒಬ್ಬ ಬಿಕ್ಷುಕ ಅಡ್ಡ ಬರುತ್ತಾನೆ ಆ ರಾಜ ಅಂದಿನ ದಿನ ಬಿಕ್ಷುಕ ನನ್ನು ನೋಡುತ್ತಾನೆ ಹೀಗೆ ನೋಡಿ ಆ ರಾಜ ಹಿಂತಿರುಗುವಾಗ ಕಾಲು ಜಾರಿ ಕೆಳಗೆ ಬೀಳುತ್ತಾನೆ ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತದೆ ಹೀಗೆಲ್ಲ ಆಗುವುದೆಂದು ಆ ರಾಜ ಎಂದಿಗೂ ಉಹಿಸಿರಲಿಲ್ಲ ಈ ಅನಾಹುತಕ್ಕೆಲ್ಲ ಆ ಬಿಕ್ಷುಕನೇ ಕಾರಣ ಎಂದು ಆ ಬಿಕ್ಷುಕನನ್ನು ತಂದು ಗಲ್ಲಿಗೇರಿಸಲು ಆಗ್ನೆ ನೀಡುತ್ತಾನೆ ರಾಜನ ಆಗ್ನೆಯಂತೆಯೆ ಆ ಬಿಕ್ಷುಕನನ್ನು ಕರೆತಂದು ಗಲ್ಲಿಗೇರಿಸಲು ಸಿದ್ದತೆ ಮಾಡುತ್ತಾರೆ ಗಲ್ಲಿಗೇರಿಸೊ ಕೊನೆಯ ಸಮಯದಲ್ಲಿ ಆ ಬಿಕ್ಷುಕ ರಾಜನನ್ನು ನೋಡಿ ನಗುತ್ತಾನೆ ಇದು ಆ ರಾಜನಿಗೆ ಆಶ್ಚರ್ಯವನ್ನು ಮೂಡಿಸಿತು
ಆ ರಾಜ ಬಿಕ್ಷುಕನನ್ನು ಕೇಳಿದ ಇಂದು ನಿನ್ನನ್ನು ಗಲ್ಲಿಗೇರಿಸುತಿದ್ದೇನೆ ನಿನಗೆ ಸ್ವಲ್ಪವಾದರೂ ದುಃಖ ಆಗಲಿ ಬೇಜಾರು ಆಗಲಿ ಯಾವುದು ನಿನ್ನ ಮುಖದಲ್ಲಿ ಕಾಣಿಸುತ್ತಿಲ್ಲವಲ್ಲ ಯಾಕೆ ಎಂದು ಪ್ರಶ್ನಿಸಿದನು?
ಅದಕ್ಕೆ ಆ ಬಿಕ್ಷುಕ ಹೇಳಿದ ಇಂದು ನೀವು ನನ್ನ ಮುಖ ನೋಡಿದ್ದರಿಂದ ನಿಮ್ಮ ತಲೆಗೆ ಮಾತ್ರ ಪೆಟ್ಟಾಯಿತು ಆದರೆ ನಾನು ನಿಮ್ಮ ಮುಖ ನೋಡಿದ್ದರಿಂದ ಇಂದು ನಾನು ಗಲ್ಲಿಗೇರುತಿದ್ದೇನೆ ಎಂದು ಹೇಳಿದನು..
ಅಂದು ಆ ಬಿಕ್ಷುಕನ ಮಾತು ಮೂಡನಂಬಿಕೆ ಇಂದ ಮುಚ್ಚಿದ ರಾಜನ ಕಣ್ಣು ತೆರೆಸಿತು.
ಒಳ್ಳೆಯತನದಿಂದ ಒಳ್ಳೆಯದಾಗುತ್ತದೆ ಕೆಟ್ಟತನದಿಂದ ಕೆಟ್ಟದ್ದಾಗುತ್ತದೆ ವ್ಯಕ್ತಿಯನ್ನಾಗಲಿ ವಸ್ತುವನ್ನಾಗಲಿ ನೋಡುವುದರಿಂದ ಅಲ್ಲ..
ಬೆಕ್ಕು ತನ್ನ ಪಾಡಿಗೆ ತಾನು ಹೋಗುತ್ತಿದ್ದರೆ ಬೆಕ್ಕು ಅಡ್ಡ ಬಂತು ಎಂದು ರಸ್ತೆ ದಾಟದೇ ನಿಲ್ಲುವವರು ಇರುತ್ತಾರೆ..
ಒಳ್ಳೆದಾಗಲಿ ಎಂದು ದೇವಸ್ಥಾನಕ್ಕೆ ಹೋಗುವರು ಎಷ್ಟೋ ಮಂದಿ ಮಸಣಕ್ಕೂ ಹೋಗಿದ್ದಾರೆ..
ನಮ್ಮ ಮನಸ್ಥಿತಿ ಹೇಗಿರುತ್ತದೆ ಹಾಗೆ ಆಗುತ್ತದೆ.. ವಿನಹ ಯಾವುದಕ್ಕೂ ಅಪಶಕುನ ಶುಭಶಕುನ ಅಂತ ಇಲ್ಲ.. ಅದು ನಾವು ಹಾಕಿಕೊಂಡಿರುವ ಮೂಢನಂಬಿಕೆ ಅಷ್ಟೇ..
ಕೃಪೆ :ಪೂರ್ಣ ಚಂದ್ರ ಗ್ರೂಪ್.
No comments:
Post a Comment