Saturday, December 23, 2023

 ರಾಷ್ಟ್ರೀಯ ರೈತರ ದಿನ

ಭಾರತದ ಬೆನ್ನುಲುಬು ರೈತರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಭಾರತ ಕೃಷಿ ಪ್ರಧಾನ ದೇಶವಾಗಿರುವುದರಿಂದ ಇಲ್ಲಿ ರೈತರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ನಾವು ತಿನ್ನುವ ದವಸ ಧಾನ್ಯಗಳು, ಹಣ್ಣು, ತರಕಾರಿ, ಹೈನುಗಾರಿಕಾ ಉತ್ಪನ್ನಗಳನ್ನೆಲ್ಲ ಉತ್ಪಾದಿಸುವುದು ಈ ರೈತರೆ. ಅನಾದಿ ಕಾಲದಿಂದಲೂ ನಮ್ಮ ದೇಶವನ್ನು ಮುನ್ನಡೆಸಿದ್ದು ಈ ರೈತರೇ ಎಂಬುದು ತುಂಬಾ ಹೆಗ್ಗಳಿಕೆಯ ವಿಷಯ. ಇದರೊಂದಿಗೆ ನಮ್ಮಲ್ಲಿ ನಡೆದ ಕೆಲವು ರೈತ ಚಳವಳಿಗಳೂ ಇತಿಹಾಸದ ಪುಟಗಳಲ್ಲಿ ಸೇರಿಕೊಂಡಿವೆ. ಈ ಶ್ರಮಜೀವಿಗಳಾದ ರೈತರು ಎಂದಿಗೂ ಗೌರವಿಸಲ್ಪಡುವ ವ್ಯಕ್ತಿತ್ವಗಳೇ ಆಗಿರುತ್ತಾರೆ. ಇದಕ್ಕಾಗಿಯೇ ನಮ್ಮ ದೇಶದಲ್ಲಿ ಇವರಿಗಾಗಿ ಒಂದು ದಿನವನ್ನು ಮೀಸಲಾಗಿಡಲಾಗಿದೆ. ಅದುವೇ ಡಿಸೆಂಬರ್‌ 23. ಈ ದಿನವನ್ನು ದೇಶದೆಲ್ಲೆಡೆ ರೈತರ ದಿನ ಅಥವಾ ಕಿಸಾನ್‌ ದಿವಸ್‌ ಎಂದು ಆಚರಿಸಲಾಗುತ್ತದೆ.


ಮೂಲತಃ ಈ ದಿನವನ್ನು ಆಯ್ಕೆ ಮಾಡಲು ಇನ್ನೊಂದು ಕಾರಣವೂ ಇದೆ. ಈ ದಿನ ಭಾರತದ ಮಾಜಿ ಪ್ರಧಾನಿ ಜನಪ್ರಿಯ ರೈತ ಮುಖಂಡ ದಿವಂಗತ ಚೌಧರಿ ಚರಣ್‌ ಸಿಂಗ್‌ ಅವರು ಹುಟ್ಟಿದ ದಿನವೂ ಹೌದು. ಅವರ ಸ್ಮರಣಾರ್ಥವಾಗಿಯೂ ಈ ದಿನವನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತದೆ. ಮುಖ್ಯವಾಗಿ ರೈತರು ಸಮಾಜಕ್ಕೆ ನೀಡುವ ಕೊಡುಗೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ. ರೈತರು ಅತ್ಯಂತ ಕಷ್ಟದ ಸ್ಥಿತಿಯಲ್ಲಿ ಹೇಗೆ ಬೆಳೆ ಬೆಳೆಸುತ್ತಾರೆ, ಅವರ ಬದುಕು ಹೇಗಿದೆ, ಅವರು ಹೇಗೆ ಜೀವನ ನಿರ್ವಹಣೆ ಮಾಡುತ್ತಾರೆ ಎಂಬುದರ ಬಗ್ಗೆ ಶ್ರೀಸಾಮಾನ್ಯನಿಗೆ ಅರಿವು ಮೂಡಿಸುವ ಸದಾಶಯವನ್ನು ಈ ದಿನ ಹೊಂದಿದೆ. ಸಾಮಾನ್ಯವಾಗಿ ಭಾರತೀಯ ರೈತರದ್ದು ಬಲು ಕಷ್ಟದ ಜೀವನ. ಹೆಚ್ಚು ವಿದ್ಯಾಭ್ಯಾಸವನ್ನು ಪಡೆಯದ ಅವರ ಸಾಮಾನ್ಯ ಬದುಕು ದುಸ್ತರವಾಗಿರುತ್ತದೆ. ಅವರನ್ನು ಮೇಲ್ದರ್ಜೆಗೆ ಏರಿಸಲು ಸರಕಾರ ಸತತ ಪ್ರಯತ್ನ ಮಾಡುತ್ತಿದೆ. ಕೃಷಿಗೆ ಅಗತ್ಯವಾದ ಆಧುನಿಕ ಸೌಲಭ್ಯಗಳನ್ನು ಪೂರೈಸುತ್ತಿದೆ. ರೈತರ ಮೂಲಕ ದೇಶದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದೆ.


ಭಾರತದ ಎರಡನೇ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರೈತರಿಗೆ "ಜೈ ಜವಾನ್ ಜೈ ಕಿಸಾನ್" ಎಂಬ ಪ್ರಸಿದ್ಧ ಘೋಷಣೆಯನ್ನು ನೀಡಿದಾಗ, ಚೌಧರಿ ಚರಣ್ ಸಿಂಗ್ ಅದನ್ನು ಅನುಸರಿಸಿದರು.


"ಕೃಷಿಯು ತಪ್ಪಾದರೆ, ದೇಶದಲ್ಲಿ ಬೇರೆ ಯಾವುದೂ ಸರಿಯಾಗಲು ಅವಕಾಶವಿಲ್ಲ." – ಎಂ.ಎಸ್.ಸ್ವಾಮಿನಾಥನ್


"ನಾನು ಪ್ರಪಂಚದ ಚಕ್ರವರ್ತಿಯಾಗುವುದಕ್ಕಿಂತ ನನ್ನ ಜಮೀನಿನಲ್ಲಿರಲು ಬಯಸುತ್ತೇನೆ." - ಜಾರ್ಜ್ ವಾಷಿಂಗ್ಟನ್


"ತನ್ನ ಮಣ್ಣನ್ನು ನಾಶಪಡಿಸುವ ರಾಷ್ಟ್ರವು ತನ್ನನ್ನು ತಾನೇ ನಾಶಪಡಿಸುತ್ತದೆ." - ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್


ನೇಗಿಲು ಹಿಡಿದು ಹೊಲದೊಳು ಹಾಡುತ ಉಳುವಾ ಯೋಗಿ ಅನ್ನದಾತನನ್ನು ಯೋಗಿಯೆಂದು ಕರೆದು ನಾವು ಭೋಗಿಗಳಾಗಿ ಕಂಠಮಟ್ಟ ತಿಂದುಂಡು ಸಕಲ ಸೌಭಾಗ್ಯಗಳನ್ನು ಅನುಭವಿಸುತ್ತಿದ್ದೇವೆ. ಸಗಣಿ ಬಾಚುವ ಕೈ ಅವನದು, ಬೆರಣಿ ತಟ್ಟುವ ಕೈ ಅವನದು, ನಾವು ಅವನ ಮೊಸರಿನ ಭರಣಿಗೆ, ಬೆಣ್ಣೆ ಮುದ್ದೆಗೆ ಅಧಿಕಾರಯುತವಾಗಿ ಕೈ ಹಾಕುತ್ತೇವೆ. ಹಸು ಸಾಕುವ ರೈತರ ಮಕ್ಕಳಿಗೆ ಹಾಲಿಲ್ಲ, ಆದರೆ ಹಾಲು, ಮೊಸರು ತುಪ್ಪವನ್ನು ಅಜೀರ್ಣವಾಗುವಂತೆ ತಿಂದು ಪಾರ್ಕುಗಳಲ್ಲಿ ಬೊಜ್ಜು ಕರಗಿಸಲು ಜಾಗಿಂಗ್‌ ಮಾಡುತ್ತೇವೆ..


ರೈತರು ಸಹ ಸರ್ಕಾರದ ಸೌಲಭ್ಯಗಳನ್ನು ಬಳಸಿ ಮತ್ತು ಉತ್ತಮ ಕೃಷಿಯಿಂದ ತಮ್ಮ ಜೀವನ ಸುಧಾರಿಸಿಕೊಳ್ಳಬೇಕಿದೆ..


ರೈತರು ಕೃಷಿ ಮತ್ತು ಇತರ ಇಲಾಖೆಗಳು ಕೊಡಮಾಡಿರುವ ಸವಲತ್ತುಗಳನ್ನು ಬಳಸಿಕೊಂಡು, ಕಡಿಮೆ ನೀರು ಬಳಸಿ, ವಿಜ್ಞಾನಿಗಳ ಸಲಹೆಯಂತೆ ತಾಂತ್ರಿಕ ಬೇಸಾಯ ಮಾಡಲು ಮುಂದಾಗಬೇಕು..

ಅನ್ನಂ ಬ್ರಹ್ಮೇತಿ' ಎಂದು ವೇದಗಳು ಸಾರಿವೆ..

ಅನ್ನದೇವರ ಮುಂದೆ ಇನ್ನು ದೇವರು ಉಂಟೆ

ಸಮಸ್ತ ಮಾನವ ಕುಲಕ್ಕೆ ಅನ್ನ ನೀಡುವ

ಅನ್ನದಾತ ರೈತನಿಗೊಂದು ದೊಡ್ಡ ಸಲಾಂ

Shankargouda Basapur 

🙏🙏🙏🙏🙏🙏💐💐💐💐💐💐💐💐💐💐

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು