Sunday, January 7, 2024

 ಕಥೆ-267

ಕರ್ಮಗಳಿಂದ ಮನ್ನಣೆ

ಈ ಪ್ರಪಂಚದ ಇತಿಹಾಸವನ್ನು ಪರಿಶೀಲಿಸಿದರೆ ಅಲ್ಲಿ ಅನೇಕ ಅರಸರು, ಮಂತ್ರಿಗಳು, ಸೇನಾಪತಿಗಳು, ವೀರರು, ವಿದ್ವಾಂಸರು, ಶ್ರೀಮಂತರೇ ಮೊದಲಾದ ಗಣ್ಯರುಗಳ ವಿವರಗಳನ್ನು ಕಾಣುತ್ತೇವೆ. ಇವರ ಪೈಕಿ ಕೆಲವರು ಉನ್ನತ ಕುಲದಲ್ಲಿ ಜನಿಸಿದವರೂ ಇರಬಹುದು. ಇನ್ನು ಕೆಲವರು ಜನಸಾಮಾನ್ಯರ ವಂಶದಲ್ಲಿ ಜನಿಸಿರಬಹುದು. ಕೇವಲ ಉತ್ತಮ ಕುಲದಲ್ಲಿ ಹುಟ್ಟಿದ ಮಾತ್ರಕ್ಕೆ ಅರ್ಹತೆ, ಯೋಗ್ಯತೆಗಳು ಬರುತ್ತವೆಯೇ ? ಇಲ್ಲ ದೊಡ್ಡಸ್ತಿಕೆ ಅಹಂಕಾರಗಳಿಂದ ಮೆರೆಯುವ, ಜಗಳಾಡುವ ಕೆಲವು ಜನರಿರುತ್ತಾರೆ. ಅಂಥವರ ಕಣ್ಣು ತೆರೆಸಿದ ಗ್ರೀಕ್ ತತ್ವಜ್ಞಾನಿಯೊಬ್ಬರ ನಿದರ್ಶನ ತುಂಬಾ ರೋಚಕವಾಗಿದೆ. ಗ್ರೀಸ್ ದೇಶದಲ್ಲಿ ಹಿಂದೆ ಡಾಯೋಸಿನೀಸ್ ಎಂಬ ಹೆಸರಿನ ಸಂತರಿದ್ದರು. ಅವರು ಅರಿಸ್ಟಾಟಲ್‌ನ ಸಮಕಾಲೀನರಾಗಿದ್ದರು. ಮಹಾನ್ ವಿದ್ವಾಂಸರಾಗಿದ್ದರೂ ನಿರಂಹಕಾರಿಯೂ, ಸರಳರೂ ಆಗಿದ್ದ ಅವರ ಖ್ಯಾತಿಯು ದೇಶ-ವಿದೇಶಗಳಲ್ಲಿ ಹರಡಿತ್ತು. ಅವರು ವಿಶ್ವ ವಿಜಯಿಯಾಗಿದ್ದ ಅಲೆಕ್ಸಾಂಡರನಿಗೂ ಮಾರ್ಗದರ್ಶನ, ಉಪದೇಶ ನೀಡಿದವರೆಂದು ಖ್ಯಾತರಾಗಿದ್ದರು ಹಾಗೂ ಸಾರ್ವತ್ರಿಕ ಮನ್ನಣೆ ಗಳಿಸಿದ್ದರು. ಅವರ ಕೀರ್ತಿಯನ್ನು ನೋಡಿ ಸಹಿಸಲಾಗದ ಇನ್ನೊಬ್ಬ ವಿದ್ವಾಂಸನು ಅವರೊಡನೆ ಚರ್ಚೆ ನಡೆಸಿ, ಹೀಯಾಳಿಸಬೇಕೆಂಬ ಉದ್ದೇಶದಿಂದ ಅವರ ಬಳಿಗೆ ಬಂದ. ಅವನು ಸಂತರೊಡನೆ ಹೀಗಂದ- 'ನೀವು ದೊಡ್ಡ ವಿದ್ವಾಂಸರೆಂದು ಕೇಳಿದ್ದೇನೆ. ನಾನಿಂದು ನಿಮ್ಮ ವಿದ್ವತ್ ಅನ್ನು ಪರೀಕ್ಷಿಸಲೆಂದೇ ಬಂದಿದ್ದೇನೆ. ನಿಮ್ಮ ಭ್ರಮೆಯನ್ನು ದೂರ ಮಾಡಲೆಂದು ಬಂದಿದ್ದೇನೆ. ನಿಮಗಿಂತಲೂ ದೊಡ್ಡ-ದೊಡ್ಡ ವಿದ್ವಾಂಸರು ಈ ಪ್ರಪಂಚದಲ್ಲಿದ್ದಾರೆ. ನನಗವರ ಪರಿಚಯವುಂಟು. ನಿಮಗೇನು ಗೊತ್ತು ?' ಸಂತರು ಸಿಟ್ಟಾಗಲಿಲ್ಲ. ತಾಳ್ಮೆಯಿಂದ ಉತ್ತರಿಸಿದರು- 'ಇರಬಹುದು. ಈ ಪ್ರಪಂಚದಲ್ಲಿ ನನಗಿಂತಲೂ ದೊಡ್ಡ ವಿದ್ವಾಂಸರಿರಬಹುದು.' ಅಹಂಕಾರಿ ವಿದ್ವಾಂಸನು ತನ್ನ ವಾದವನ್ನು ಮುಂದುವರೆಸಿದ- 'ಅಂಥವರೆದುರು ನೀನ್ಯಾವ ಸೀಮೆಯ ವಿದ್ವಾಂಸ ? ಬಾವಿಯೊಳಗಿನ ಕಪ್ಪೆಯಂತೆ- ಅಥೆನ್ಸ್ ನಗರವನ್ನೇ ಪ್ರಪಂಚವೆಂದು ಭಾವಿಸಿದ್ದೀಯಾ ! ನಾನು ಇಡೀ ಪ್ರಪಂಚವನ್ನು ಸುತ್ತಾಡಿದ್ದೇನೆ. ನನಗೆ ಅನೇಕ ವಿದ್ವಾಂಸರ, ತತ್ವಜ್ಞಾನಿಗಳ ಪರಿಚಯವಿದೆ ಗೊತ್ತೇ?' ಎಂದು ಅಹಂಕಾರದಿಂದ ಪ್ರಶ್ನಿಸಿದಾಗ, ಸಂತರು ಕೋಪಗೊಳ್ಳದೆ, ಸಮಾಧಾನದಿಂದ ಹೇಳಿದರು - ಯೇ ತಮ್ಮ, ನನಗೂ ಈ ಪ್ರಪಂಚದ ದೊಡ್ಡ -ದೊಡ್ಡ ಧನಿಕರ, ಶ್ರೀಮಂತರ ಗೆಳೆತನ- ಪರಿಚಯವೇನೋ ಇದೆ. ಆದರೆ ನಾನೆಂದೂ ಶ್ರೀಮಂತನಾಗಲಿಲ್ಲ. ಈಗಲೂ ಸಾಧ್ಯವಾಗದು' ಈ ಮಾತನ್ನು ಕೇಳಿದಾಗ ಆ ಅಹಂಕಾರಿ-ವಿದ್ವಾಂಸನಿಗೆ ತಣ್ಣೀರಲ್ಲಿ ಅದ್ದಿದಂತಾಯಿತು. ತನ್ನ ತಪ್ಪಿನ ಅರಿವಾಯ್ತು. ಸಂತರ ಕಾಲುಗಳಿಗೆ ನಮಸ್ಕರಿಸುತ್ತಾ, ಕ್ಷಮೆ ಯಾಚಿಸಿ ಹೊರಟು ಹೋದ. 

ನಾವು ಗಮನಿಸಬೇಕಾದ ಸಂಗತಿಯೆಂದರೆ ಮನುಷ್ಯನಿಗೆ ಹಿರಿಮೆ- ಗರಿಮೆಗಳು ಕೇವಲ ಹುಟ್ಟಿನಿಂದ ಬರುವವುಗಳಲ್ಲ. ಆತನು ಮಾಡುವ ಕರ್ಮಗಳಿಂದ ಬರುತ್ತವೆ. ಕೇವಲ ಕುಲ-ವಂಶ, ಜಾತಿ- ಮತ-ಧರ್ಮ, ಹುದ್ದೆ-ಸ್ಥಾನಗಳ ಬಗ್ಗೆ ಅಹಂಕಾರ ಪಡಬಾರದು. 

ಉತ್ತಮ ಗುಣ, ಅರ್ಹತೆ, ಕಾರ್ಯಗಳಿಂದಾಗಿ ವ್ಯಕ್ತಿಗೆ ಅವನು ಬಯಸದಿದ್ದರೂ, ಮನ್ನಣೆ ಗೌರವಗಳು ದೊರೆಯುತ್ತವೆ. ಅಂತಹ ಗೌರವ ಮನ್ನಣೆಗಳಿಗೆ ಸೂಕ್ತವಾದ ಕಾರ್ಯ ಕಲಾಪಗಳಲ್ಲಿ ಜನರು ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕಾಗಿದೆ.💐💐💐💐💐💐💐

 ಡಿ.ವೀರೇಂದ್ರ ಹೆಗ್ಗಡೆಯವರು.

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು