ಕಥೆ-335
ಬ್ರೇಕ್’ಗಳಿರುವುದಕ್ಕೆ ಸಂತೋಷಪಡಿ. ಅವುಗಳನ್ನು ಜಾಣ್ಮೆಯಿಂದ ಉಪಯೋಗಿಸಿಕೊಳ್ಳಿ.
ಕಾರ್‌ಗೆ ಬ್ರೇಕ್ ಯಾಕಿರುತ್ತದೆ? ಎಂದು ಕೇಳಿದರೆ ಏನು ಉತ್ತರ ಕೊಡುತ್ತೀರಿ. ‘ಕಾರನ್ನು ನಿಲ್ಲಿಸಲು’. ‘ಕಾರಿನ ವೇಗವನ್ನು ಕಡಿಮೆ ಮಾಡಲು’. ‘ಅಪಘಾತವನ್ನು ತಡೆಯಲು’…..ಇತ್ಯಾದಿ ಉತ್ತರಗಳನ್ನು ನಿರೀಕ್ಷಿಸಬಹುದು. ಆದರೆ, ಅತ್ಯುತ್ತಮ ಉತ್ತರ ಯಾವುದು ಗೊತ್ತೇ? ‘ಕಾರು ವೇಗವಾಗಿ ಚಲಿಸುವಂತೆ ಮಾಡಲು!’ ಆಶ್ಚರ್ಯವಾಗುತ್ತದೆ ಅಲ್ಲವೆ? ಯೋಚಿಸಿ ನೋಡಿ. ಬ್ರೇಕ್ ಇದೆ ಎಂಬ ಧೈರ್ಯದಿಂದ ತಾನೇ ನಾವು ಕಾರಿನ ವೇಗವನ್ನು ಹೆಚ್ಚಿಸಿ ಬೇಕಾದಲ್ಲಿಗೆ ಹೋಗುತ್ತೇವೆ. ಜೀವನದ ವಿವಿಧ ಹಂತಗಳಲ್ಲಿ ನಾವು ಹೆತ್ತವರು, ಶಿಕ್ಷಕರು, ಗುರುಗಳು, ಸಂಗಾತಿ, ಸ್ನೇಹಿತರು ನಮ್ಮ ಹಾದಿಗೆ ಅಡ್ಡಗಾಲು ಹಾಕುತ್ತಿದ್ದಾರೆ, ನಮ್ಮ ಬೆಳವಣಿಗೆಗೆ-ಆಸೆಗೆ ತಡೆ ಹಿಡಿಯುತ್ತಿದ್ದಾರೆ ಅನ್ನಿಸುತ್ತದೆ, ನಮ್ಮನ್ನು ಪ್ರಶ್ನಿಸುತ್ತಿದ್ದಾರೆ, ನಮ್ಮಿಷ್ಟ ಬಂದಂತೆ ಬದುಕಲು ಬಿಡುತ್ತಿಲ್ಲ ಎಂದೆಲ್ಲ ಭಾವಿಸುತ್ತೇವಲ್ಲವೇ? ಅವರು ನಮ್ಮ ಸಾಧನೆಗೆ ‘ಬ್ರೇಕ್’ ಹಾಕುತ್ತಿದ್ದಾರೆ ಎಂದು ಶಪಿಸಿಕೊಳ್ಳುತ್ತೇವಲ್ಲವೆ? ಆದರೆ ಆ ‘ಬ್ರೇಕ್’ಗಳಿಂದಲೇ ನೀವು ಇಂದು ಯಾವ ಸ್ಥಾನದಲ್ಲಿದ್ದೀರೋ ಅಲ್ಲಿಗೆ ತಲುಪಲು ಸಾಧ್ಯವಾಗಿದ್ದು. ‘ಬ್ರೇಕ್’ಗಳಿಲ್ಲದಿದ್ದರೆ ನೀವು ಬೀಳುತ್ತಿದ್ದಿರೇನೋ, ದಾರಿ ತಪ್ಪುತ್ತಿದ್ದಿರೇನೋ ಅಥವಾ ಯಾವುದೋ ದೊಡ್ಡ ಅವಘಡಕ್ಕೆ ಸಿಕ್ಕಿಬಿಡುತ್ತಿದ್ದಿರೇನೋ ಅಲ್ಲವೆ? ನಿಮ್ಮ ಜೀವನದಲ್ಲಿ ‘ಬ್ರೇಕ್’ಗಳಿರುವುದಕ್ಕೆ ಸಂತೋಷ ಪಡಿ. ಅವುಗಳನ್ನು ಜಾಣ್ಮೆಯಿಂದ ಉಪಯೋಗಿಸಿಕೊಳ್ಳಿ. ನಿಮ್ಮ ಜೀವನದ ಪ್ರಯಾಣ ಸುಖಕರವಾಗಿರಲಿ.
No comments:
Post a Comment