ಕಥೆ-382
"ಚುನಾವಣೆ ಪರ್ವ ದೇಶದ ಗರ್ವ"
ಕಷ್ಟಪಟ್ಟು ದುಡಿಯಬೇಕೆನ್ನುವುದು ನಮ್ಮ ಮೂಲ ಮಂತ್ರವಾದರೆ ಅದೃಷ್ಟ ಎನ್ನುವುದು ನಮ್ಮ ಮನೆಯ ಬಾಗಿಲನ್ನು ತಾನಾಗಿಯೇ ತಟ್ಟುತ್ತದೆ.
ಕಾರ್ಮಿಕ ದಿನಾಚರಣೆಯ ಶುಭಾಶಯಗಳು..💐💐💐💐💐
ರಾಜಪ್ರಭುತ್ವದಲ್ಲಿ ರಾಜ ರಾಣಿಯ ಹೊಟ್ಟೆಯಲ್ಲಿ ಹುಟ್ಟುತ್ತಾನೆ....
ಪ್ರಜಾಪ್ರಭುತ್ವದಲ್ಲಿ ರಾಜ
ಮತಗಟ್ಟೆಯಲ್ಲಿ ಹುಟ್ಟುತ್ತಾನೆ....
ಸಾಮಾನ್ಯ ಪ್ರಜೆ, ಸಾಮಾನ್ಯ ಕಾರ್ಮಿಕನನ್ನು , ರಾಜ ಮಾಡಲು ನಮ್ಮ ದೇಶದ ಸಂವಿಧಾನ ನಮಗೆ ಚುನಾಯಿಸುವ ಅಧಿಕಾರ ನೀಡಿದೆ...
ಚುನಾವಣೆಯನ್ನು ಚುನಾವಣೆ ಆಯೋಗವು ಸರಕಾರಿ ನೌಕರರಿಂದ ನಡೆಸುತ್ತದೆ.
ಒಮ್ಮೆ ಸರಕಾರಿ ನೌಕರಿಗೆ ಸೇರಿದ ಮೇಲೆ ಚುನಾವಣೆ ಬರೋದೆ.
ಸಾಮಾನ್ಯವಾಗಿ ಸರಕಾರಿ ನೌಕರರಿಗೆ 3Eಗಳಿಂದ ಬಿಡುಗಡೆ ಇಲ್ಲ..
E-Election
E-Evaluation
E-Examination
ಅದರಲ್ಲೂ ವಿಶೇಷವಾಗಿ ಎಲೆಕ್ಷನ್ ಡ್ಯೂಟಿ ಅಂದರೆ ಭಯ,ಎಲೆಕ್ಷನ್ ಡ್ಯೂಟಿ ಬಾರದಿರಲಿ ಎಂದು ಪ್ರಾರ್ಥಿಸುತ್ತಾರೆ, ಅದು ಬಂದರೂ pro ಡ್ಯೂಟಿ ಬೇಡವೇ ಬೇಡ ಅನ್ನೊ ಮನಸ್ಥಿತಿ ನೌಕರರದ್ದು. ನೌಕರಿಗೆ ಸೇರಿದ ಮೇಲೆ ಕಾರ್ಮಿಕನಾಗಿ, ಅಧಿಕಾರಿಯಾಗಿ, ಸೇವಕನಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಹಾಗಾಗಿ ನಾವು ಮಾನಸಿಕವಾಗಿ ಸಿದ್ದರಾಗುವುದು ಬಹಳಷ್ಟು ಮುಖ್ಯವಾಗುತ್ತದೆ. ನನಗೂ ಸಹ ಚುನಾವಣಾ ಕಾರ್ಯನಿರ್ವಹಿಸಿದ ಅನುಭವ ಪ್ರಾರಂಭವಾಗಿದ್ದು ತಳಕಲ್ ದಿಂದ, ನಂತರ ಅನೇಕ ಕಡೆ PrO ಆಗಿ ಡ್ಯೂಟಿ ಮಾಡಿದ ಅನುಭವ..
ಎಷ್ಟೇ ಅನುಭವ ಹೊಂದಿದ್ದರೂ ಸಹ ಎಲೆಕ್ಷನ್ ಸಂದರ್ಭ ಬಂದಾಗ ಎಲೆಕ್ಷನ್ ಗೆ ಸಂಬಂಧಿಸಿದ ಮಾಹಿತಿಗಳ ಪುನರಾವರ್ತನೆ ಅವಶ್ಯ..
ಅದು 3R ನಂತೆ
ಅಂದರೆ
R-Recall
R-Remind
R-Remind ನಂತೆ
ಹೀಗಾಗಿ ಚುನಾವಣಾ ಆಯೋಗ ಎಲೆಕ್ಷನ್ ಪೂರ್ವದಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಎರಡು ತರಬೇತಿಗಳನ್ನು ಹಮ್ಮಿಕೊಳ್ಳುತ್ತದೆ..
ಆದರೆ ಹೊಸದಾಗಿ ನೇಮಕ ಆದವರು ಪ್ರತಿ ಮುಖ್ಯಾಂಶಗಳನ್ನು ವ್ಯವಸ್ಥಿತವಾಗಿ ತಿಳಿದುಕೊಳ್ಳುವುದು ಅವಶ್ಯ.
ಕಳೆದ ಎರಡು ವರ್ಷಗಳಿಂದ ಜಿಲ್ಲಾಡಳಿತ ನನ್ನನ್ನು ಮಾಸ್ಟರ್ ಟ್ರೇನರ್ ಆಗಿ ನೇಮಿಸಿದ್ದು ಹೊಸ ಅನುಭವಗಳನ್ನು ನೀಡಿದೆ. ಕಳೆದ ಬಾರಿ ಯಾವುದೇ ಮುನ್ಸೂಚನೆ ನೀಡದೆ ನೇರವಾಗಿ ಟ್ರೈನಿಂಗ್ ನೀಡಲು ಸೂಚಿಸಿದ್ದು
ಮತ್ತಷ್ಟು ಚುನಾವಣೆಗೆ ಸಂಬಂಧಿಸಿದ ಮಾಹಿತಿ ತಿಳಿಯಲು ಸಹಾಯಕವಾಯಿತು.
ಈ ಬಾರಿ ತಾಲೂಕ ಆಡಳಿತ ಚುನಾವಣೆಗೆ ಸಂಬಂಧಿಸಿ ಒಂದು ಮಾದರಿ ppt ತಯಾರಿಸಲು ನನಗೆ ಜವಾಬ್ದಾರಿ ನೀಡಿತ್ತು. ಅದರಂತೆ ಸುಮಾರು ಒಂದು ತಿಂಗಳ ಕಾಲ ಸಮಯ ತೆಗೆದುಕೊಂಡು ಚುನಾವಣೆಗೆ ಸಂಬಂಧಿಸಿ Hiremyageri Title ನಲ್ಲಿ Animated, Hyperlink, QR Code ಒಳಗೊಂಡ "ಚುನಾವಣೆಯ Ppt" ತಯಾರಿಸಿ, ಪರಿಶೀಲಿಸಿ ಸಲಹೆ ಸೂಚನೆಗಾಗಿ ತಾಲೂಕ ಆಡಳಿತಕ್ಕೆ ಕಳಿಸಿದ್ದೆ. ಆ ppt ಪರಿಶೀಲಿಸಿ ಒಪ್ಪಿದ ತಾಲೂಕ ಆಡಳಿತವು ಜಿಲ್ಲಾಡಳಿತಕ್ಕೆ ಕಳಿಸಿತ್ತು, ಜಿಲ್ಲಾಡಳಿತವು ಆ ppt ಯನ್ನು ಒಪ್ಪಿ ಉತ್ತಮ ppt ಎಂದು ಅಭಿನಂದಿಸಿದ್ದು ಖುಷಿಯ ವಿಚಾರ. ಅಲ್ಲದೇ ಅದನ್ನು ಜಿಲ್ಲಾದ್ಯಾಂತ ಬಳಸಲು ಸೂಚಿಸಿತ್ತು.
ಇಂದು ನಮ್ಮ ಯಲಬುರ್ಗಾ ವಿಧಾನಸಭಾ ವ್ಯಾಪ್ತಿಯ ಮತಗಟ್ಟೆಗಳಿಗೆ, ಕೊಪ್ಪಳ ಲೋಕಸಭಾ ಚುನಾವಣೆ 2024ರ ಕಾರ್ಯಕ್ಕೆ ನಿಯೋಜನೆಯಾದ ಎಲ್ಲಾ ಮತಗಟ್ಟೆ ಸಿಬ್ಬಂದಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಯಲಬುರ್ಗಾದಲ್ಲಿ ಎರಡನೇ ಹಂತದ ತರಬೇತಿಯನ್ನು ನೀಡಲಾಯಿತು.
ತರಬೇತಿ ಪಡೆದವರಿಂದ ಉತ್ತಮ ಫೀಡ್ಬ್ಯಾಕ್ ಖುಷಿ ತಂತು.
ಮೊದಲ ತರಬೇತಿಯಲ್ಲಿ ಹಿರೇಮ್ಯಾಗೇರಿ ಪಂಚಾಯತಿಯ DEO ಶ್ರೀ ರಮೇಶ ಅವರು,
ಈ ದಿನದ ತರಬೇತಿಯಲ್ಲಿ ITI ಕುಕನೂರದ ಶ್ರೀ ಪ್ರಭು ಅವರು ಸಾತ್ ನೀಡಿದರು.
ಈ model election ppt ತಯಾರಿಕೆಯಲ್ಲಿ ಸಹಕಾರ ನೀಡಿದ ಶ್ರೀ ವಿಜಯಕುಮಾರ್ ಸರ್ ಉಪ ತಹಸಿಲ್ದಾರ್ ಯಲಬುರ್ಗಾ ಇವರಿಗೆ, ನಮ್ಮ ಪ್ರೌಢಶಾಲಾ ಸಿಬ್ಬಂದಿಗೆ ತಾಲೂಕಾ ಆಡಳಿತ ಸಿಬ್ಬಂದಿಯವರಿಗೆ ತುಂಬು ಹೃದಯದ ಧನ್ಯವಾದಗಳು.
Shankargouda Basapur
AM GHS Hiremyageri
💐💐💐💐💐

No comments:
Post a Comment