ಕಥೆ-412
ಜ್ಞಾನವ ಅರಸಿ ಶಾಲೆಗೆ ಬನ್ನಿ
ಬನ್ನಿ ಮಕ್ಕಳೇ, ರಜೆ ಮುಗಿಸಿ ಹಳೆಯ ನೆನಪುಗಳ ಜೊತೆಗೆ ಹೊಸ ಭರವಸೆಯೊಂದಿಗೆ ಶಾಲೆಗೆ ಬನ್ನಿ
ರಜೆ ಮುಗಿಯಿತು ಅಂತೂ ಇಂತೂ ರೆಫ್ರೆಶ್ ಆಗಿರುವಿರಿ.
ಶಾಲೆ ಚೀಲ ಎಲ್ಲೋ ಇಟ್ಟವರು ನಿಮ್ಮ ಚೀಲ ಎಲ್ಲಿದೆ ಎಂದು ಹುಡುಕಿಕೊಳ್ಳಿರಿ..
ಶಾಲೆ ಯುನಿಫಾರ್ಮ್ ತೆಗೆದಿಟ್ಟುಕೊಳ್ಳಿ.. ಪ್ರಾರಂಭದ ದಿನ ಸಿವಿಲ್ ಡ್ರೆಸ್ ನಡೆಯುತ್ತದೆ.. ಹಾಗಂತ ಅಹಿತಕರ ಡ್ರೆಸ್ ಬೇಡ..
ಹುಡುಗರೇ ತಲೆಗೂದಲನ್ನು ಮೊದಲು ಸರಿಯಾಗಿ ಕತ್ತರಿಸಿಕೊಳ್ಳಿ, ವೆಜ್ ಕಟ್, ಹೆಬ್ಬುಲಿ ಕಟ್, ಗೂಗ್ಲಿ ಕಟ್ ಗಳನ್ನೆಲ್ಲಾ ಅಳಿಸಿಕೊಳ್ಳಿ.. ಶಿಕ್ಷಕರುಗಳೆಲ್ಲಾ ಹಸಿದ ಹೆಬ್ಬುಲಿಗಳಂತೆ ಕಾಯುತ್ತಿದ್ದಾರೆ ನೆನಪಿಟ್ಟುಕೊಳ್ಳಿ..!
ಅಂಟಿಕೊಂಡ ಮೇಲೇರಿಸಿದ ಪ್ಯಾಂಟನ್ನು ಲೈಟಾಗಿಯಾದರೂ ಸರಿಪಡಿಸಿಕೊಳ್ಳಿ
ಹುಡುಗಿಯರೇ,ನೀವೂ ಅಷ್ಟೇ ಎಷ್ಟು ಜಡೆ ಹಾಕಬೇಕೆಂದು ಮತ್ತೆ ಮತ್ತೆ ಹೇಳಿಸಿಕೊಳ್ಳುವುದನ್ನು ಮಾಡಬೇಡಿ
ದಿನದ ಚಿತ್ರ,ದಿನದ ಲೆಕ್ಕ, ದಿನದ ಪ್ರಶ್ನೆಗಳು ಪ್ರಾರ್ಥನೆಯಲ್ಲಿನ ಪ್ರಶ್ನೆಗಳು ನಿಮ್ಮನ್ನು ಕಾಯುತ್ತಿವೆ.
ಪ್ರಾರ್ಥನೆಯ ಕೋಗಿಲೆಗಳೇ ರಜೆ ಹಬ್ಬ ಮುಗಿಯಿತು, ನಾಡಗೀತೆ ರಾಷ್ಟ್ರ ಗೀತೆ ಮೊಳಗಲಿ..
ಕೊಟ್ಟ ವಿಜ್ಞಾನ ಚಟುವಟಿಕೆ ವರ್ಕ್ ನೆಟ್ಟಗೆ ಮುಗಿಸಿದಿರಾ.. ಗಮನಿಸಿ..
ಸಂಬಂಧಿಗಳ ಪರಿಚಯ, ಒಡನಾಟದ ಸವಿನೆನಪೊಂದಿಗೆ..
ಪ್ರವಾಸದ ಖುಷಿ mood ನೊಂದಿಗೆ.. ವಿವಿಧ ಆಸಕ್ತಿ ಹೊಂದಿರುವ ರಂಗದಲ್ಲಿ ತೊಡಗಿಸಿಕೊಂಡ ಸಂತಸದೊಂದಿಗೆ... ಪಠ್ಯ..ಪುಸ್ತಕ.. ಒಳಗೊಂಡ ಚೀಲದ ನಂಟಿನೊಂದಿಗೆ..
Mind refresh" ಆಗಿ ಬನ್ನಿ ಮಕ್ಕಳೇ ಶಾಲೆಗೆ ಹಳೆಯ ಸವಿ ನೆನಪಿನೊಂದಿಗೆ..
ಶಾಲೆ ಜೈಲಲ್ಲ ಅದೊಂದು ಪವಿತ್ರ ದೇವಸ್ಥಾನ, ಭಕ್ತಿ ವಿನಯದಿಂದ ಜ್ಞಾನವ ಅರಸಿ ಬನ್ನಿ,
ಸರಕಾರದ ಸವಲತ್ತುಗಳ ತೊಟ್ಟು ಸಮಾಜದ ಅಜ್ಞಾನಗಳ ಸುಟ್ಟು ಸಮಾಜ ಸುಧಾರಣೆಗಾಗಿ
ಜ್ಞಾನವ ಅರಸಿ ಬನ್ನಿ..
ನೂರಾರು ಕನಸಿನ ಪುಸ್ತಕವ ಹೆಗಲೇರಿಸಿ,
ಆತ್ಮವಿಶ್ವಾಸದ ಸಮವಸ್ತ್ರ ಧರಿಸಿ,
ನವ ಗೆಳೆತನದ ಜಡೆಯ ಹೆಣೆಸಿ,
ಹೊಸದೊಂದು ಚೇತನದೊಂದಿಗೆ ಪುಟ್ಟ ನಗುವಿನೊಂದಿಗೆ -
ಜ್ಞಾನವ ಅರಸಿ ಬನ್ನಿ !
ಗೆಳೆತನದ ಉಯ್ಯಾಲೆಯಲಿ ತೇಲಾಡಿ,
ಸಾವಿರ ನೆನಪಿನ ಗೋಪುರ ಕಟ್ಟಿಸಿ,
ತುಸು ಮುನಿಸಿನ ಮೊಗವ ಅರಳಿಸಿ,
ಮತ್ತದೇ ನಿರೀಕ್ಷೆಯೊಂದಿಗೆ ಕಣ್ಣಂಚಿನ ಮಿಂಚಿನೊಂದಿಗೆ
ಜ್ಞಾನವ ಅರಸಿ ಬನ್ನಿ !
ಹಣ ಆಸ್ತಿ ಕದಿಯಬಹುದು ಆದರೆ ವಿದ್ಯೆ ಯಾರಿಂದಲೂ ಕದಿಯಲಾಗದು. ಸಮಾಜದಲ್ಲಿ ಗೌರವಯುತವಾಗಿ ಬದುಕಲು ಜ್ಞಾನವ ಅರಸಿ ಬನ್ನಿ !
ಯಾವತ್ತು ಕಲಿಯುವುದನ್ನು ನಿಲ್ಲಿಸಬೇಡಿ ಏಕೆಂದರೆ ಜೀವನ ಎಂದಿಗೂ ಕಲಿಸುವುದನ್ನು ನಿಲ್ಲಿಸುವುದಿಲ್ಲ .
ಕೇವಲ ಇತಿಹಾಸ ಓದುವ ವ್ಯಕ್ತಿಗಳಾಗದೆ ಇತಿಹಾಸ ನಿರ್ಮಿಸುವಂಥ ವ್ಯಕ್ತಿಗಳಾಗಿ.....
ಜ್ಞಾನವ ಅರಸಿ ಬನ್ನಿ !
ನಮ್ಮ ಭವ್ಯ ಶಾಲಾ ಬಂಗಲೆ, ಆಟದ ಮೈದಾನ, ಗಾರ್ಡನ್ & ನಮ್ಮ ಶಾಲಾ ಸಿಬ್ಬಂದಿ ನಿಮ್ಮ ಆಗಮನ ಬಯಸುತ್ತಿದೆ..
ಮುಖ್ಯೋಪಾಧ್ಯಾಯರು, ಸಿಬ್ಬಂದಿ ಮತ್ತು SDMC
ಸ.ಪ.ಪೂ.ಕಾ (ಪ್ರೌಢಶಾಲಾ ವಿಭಾಗ) ಹಿರೇಮ್ಯಾಗೇರಿ..
ತಾ:ಯಲಬುರ್ಗಾ
No comments:
Post a Comment