Saturday, May 25, 2024

 ಕಥೆ-407

ಚಯಾಪಚಯ ಪ್ರಕ್ರಿಯೆ ಪ್ರಮುಖ ಗ್ರಂಥಿ Thyroid..

(ವಿಶ್ವ ಥೈರಾಯ್ಡ್ ದಿನ)

ಭಾರತದಲ್ಲಿ ಅಂದಾಜು 42 ಮಿಲಿಯನ್ ಜನರು ಥೈರಾಯ್ಡ್ ಕಾಯಿಲೆಗಳಿಂದ ಬಳಲುತ್ತಿದ್ದಾರೆ, 

ಥೈರಾಯ್ಡ್ ಎಂದರೇನು?

ಥೈರಾಯ್ಡ್ ನಮ್ಮ ಕತ್ತಿನ ಆ ಚಿಟ್ಟೆಯಾಕಾರದ ಒಂದು ಗ್ರಂಥಿ. ಶರೀರದ ಅನೇಕ ಕಾರ್ಯ ಚಟುವಟಿಕೆಗಳಿಗೆ ಅತ್ಯವಶ್ಯಕವಾದ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಉತ್ಪಾದಿಸುವುದೇ ಈ ಗ್ರಂಥಿಯ ಮುಖ್ಯ ಕಾರ್ಯ. ಈ ಗ್ರಂಥಿ ಅಯೋಡಿನ್ ಕೊರತೆಯಿಂದ ಊದಿಕೊಳ್ಳುತ್ತದೆ ಇದನ್ನು ಗಳಗಂಡ ರೋಗ (Guitar) ಎಂದು ಕರೆಯುತ್ತಾರೆ. ಮೂಲತ: ಥೈರಾಕ್ಸಿನ್ ಹಾರ್ಮೋನು ಅಯೋಡಿನದಿಂದ ಕೂಡಿದ ಅಮೈನೋ ಆಮ್ಲ. ಇದು ದೇಹದಲ್ಲಿ ನಡೆಯುವ ಚಯಾಪಚಯ ಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಆಹಾರ ಉತ್ಕರ್ಷಣದ ಪ್ರಮಾಣವನ್ನು ನಿಯಂತ್ರಿಸುತ್ತದೆ.


ವಿಶ್ವ ಥೈರಾಯ್ಡ್ ದಿನವನ್ನು ಪ್ರತಿ ವರ್ಷ ಮೇ 25 ರಂದು ಆಚರಿಸಲಾಗುತ್ತದೆ. ಥೈರಾಯ್ಡ್ ಗ್ರಂಥಿಗಳು ಅತಿಯಾಗಿ ಅಥವಾ ಕಾರ್ಯನಿರ್ವಹಿಸದೆ ಇರುವುದನ್ನು ಥೈರಾಯ್ಡ್ ಸಮಸ್ಯೆ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಥೈರಾಯ್ಡ್ ಸಮಸ್ಯೆಯು ಹೆಚ್ಚಾಗುತ್ತಲೇ ಇದ್ದು, ಅದು ಕೂಡ ಮಹಿಳೆಯರಲ್ಲಿ ಇದು ಅತಿಯಾಗಿ ಕಾಣಿಸುತ್ತಿದೆ. ಯಾಕೆಂದರೆ ಮಹಿಳೆಯರಲ್ಲಿ ಹಾರ್ಮೋನು ಅಸಮತೋಲನ ಕಾಣಿಸಿಕೊಳ್ಳುವುದರಿಂದ ಥೈರಾಯ್ಡ್ ಸಮಸ್ಯೆಯು ಬರುವುದು. ಮಹಿಳೆಯರು ಹಾರ್ಮೋನು ಬದಲಾವಣೆಗೆ ತುಂಬಾ ಸೂಕ್ಷ್ಮವಾಗಿರುವರು ಮತ್ತು ಐಯೋಡಿನ್ ಕೊರತೆಯಿಂದಾಗಿ ಅವರಲ್ಲಿ ಥೈರಾಯ್ಡ್ ನ ಸಮಸ್ಯೆಯು ಮತ್ತಷ್ಟು ಹೆಚ್ಚಾಗುವುದು. ಥೈರಾಯ್ಡ್ ಸಮಸ್ಯೆ ಇದ್ದರೆ ಕೆಲವರು ದಪ್ಪವಾಗುತ್ತಾರೆ ಇನ್ನೂ ಕೆಲವರು ಸಣ್ಣ ಆಗುತ್ತಾ ಹೋಗುತ್ತಾರೆ. ಪದೇ ಪದೇ ಆಯಾಸವಾಗುವುದು, ಮಹಿಳೆಯರಲ್ಲಿ ಅನಿಯಮಿತ ಮುಟ್ಟು ಸಮಸ್ಯೆ, ಕೂದಲು ಉದುರುವುದು, ಆಗಾಗ ನಡುಕ ಉಂಟಾಗುವುದು, ಬೆವರುವಿಕೆ ಜಾಸ್ತಿ ಇರುವುದು, ಅನಿರೀಕ್ಷಿತವಾಗಿ ತೂಕ ಏರಿಕೆ ಆಗುವುದು, ಸಣ್ಣಸಣ್ಣ ವಿಷಯಕ್ಕೂ ಕೋಪ ಬರುವುದು ಇಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈಗಾಗಲೇ ಹಲವಾರು ಸಮಸ್ಯೆಗಳಿಗೆ ಕಾರಣವಾಗಿರುವ ಇಂದಿನ ಜಡ ಜೀವನ ಶೈಲಿ ಮತ್ತು ಆಹಾರ ಕ್ರಮದ ಬದಲಾವಣೆಗಳೇ ಈ ಸಮಸ್ಯೆಯ ಮೂಲವಾಗಿದೆ. ಇದಲ್ಲದೇ ಸಾಮಾನ್ಯವಾಗಿ ಮಾನಸಿಕ ಒತ್ತಡ, ವ್ಯಾಯಾಮ ಅಥವಾ ಯಾವುದೇ ಬಗೆಯ ದೈಹಿಕ ಚಟುವಟಿಕೆಗಳು ಇಲ್ಲದಿರುವುದು, ಅಯೋಡಿನ್ ಅಂಶದ ಕೊರತೆ ಹಾಗೂ ನಿಯಮಿತವಾಗಿ ದೇಹದ ಬೆಳವಣಿಗೆ ಮತ್ತು ಪೋಷಣೆಗೆ ಬೇಕಾದ ಪೌಷ್ಟಿಕ ಆಹಾರ ಸೇವಿಸದೇ ಇರುವುದು ಕೂಡ ಥೈರಾಯ್ಡ್ ಸಮಸ್ಯೆಗೆ ಕಾರಣವಾಗುತ್ತದೆ.

ಥೈರಾಯ್ಡ್ ಸಮಸ್ಯೆಯನ್ನು ಗುರುತಿಸುವುದು ತುಂಬಾ ಸುಲಭ ಮತ್ತು ಅದಕ್ಕೆ ಚಿಕಿತ್ಸೆ ಕೂಡ ಸರಳವಾಗಿದೆ. ಥೈರಾಯ್ಡ್ ಗ್ರಂಥಿಯಲ್ಲಿ ಊತವು ಸಾಮಾನ್ಯವಾಗಿ ಕಾಣುವುದು ಮತ್ತು ಇದಕ್ಕೆ ತುಂಬಾ ಎಚ್ಚರಿಕೆಯಿಂದ ಆರೈಕೆ ಮಾಡಬೇಕಾಗಿದೆ. ಇದು ಪತ್ತೆಯಾದ ತಕ್ಷಣವೇ ರೋಗಿಯು ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆದುಕೊಳ್ಳಬೇಕು. ಆರಂಭದಲ್ಲೇ ಪತ್ತೆ ಮಾಡಿಕೊಂಡು ಚಿಕಿತ್ಸೆ ನೀಡಿದರೆ ಥೈರಾಯ್ಡ್ ನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬಹುದು. ಇಂಟರ್ನ್ಯಾಷನಲ್ ಥೈರಾಯ್ಡ್ ಫೆಡರೇಶನ್ (The International Thyroid Federation) ಥೈರಾಯ್ಡ್ ಬಗ್ಗೆ ವಿಶ್ವದಾದ್ಯಂತ ಜನಜಾಗೃತಿ ಮೂಡಿಸುತ್ತಿದೆ.

ಆರೋಗ್ಯವೇ ಭಾಗ್ಯ, ಆರೋಗ್ಯವಿದ್ದರೆ ಎಲ್ಲವೂ ಸಾಧ್ಯ..

Shankargouda Basapur 

AM GHS Hiremyageri

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು