Thursday, July 4, 2024

 ಕಥೆ-446

ಫ್ಲಿಪ್ ಕಾರ್ಟ್.. 

ಇವತ್ತು ಯಾರಿಗೆ ತಾನೇ ಗೊತ್ತಿಲ್ಲ..! ಪ್ರತೀ ಲ್ಯಾಪ್ ಟಾಪ್ ಹಾಗೂ ಮೊಬೈಲಿಗೆ ಅದೊಂತರಾ ಆಕ್ಸಿಜನ್ ಇದ್ದಂಗೆ. ಆ ಅಪ್ಲಿಕೇಶನ್ ಇಲ್ಲ ಅಂದ್ರೆ ಅದೇನೋ ಮಿಸ್ ಹೊಡೀತಿದೆ ಅನ್ಸುತ್ತೆ..! ಶಾಪಿಂಗ್ ಮಾಲಿಗೆ ಹೋಗಿ ಅದು ಇದುನೋಡಿ, ಚೌಕಾಸಿ ಮಾಡಿ, ತಗೊಂಡು ಹೊತ್ಕೊಂಡು ಬರೋ ಕಾಲ ಹೋಯ್ತು..! ಈಗ ಏನಿದ್ರೂ ಹೋಂ ಡೆಲಿವರಿ ಕಾಲ..! ಏನು ಬೇಕೋ ಅದನ್ನ ಮೊಬೈಲಲ್ಲೇ ಸೆಲೆಕ್ಟ್ ಮಾಡಿ ಮನೆಗೆ ತರುಸ್ಕೊಳಿ..! ಈ ವ್ಯವಸ್ಥೆಯನ್ನು ಈ ಹಿಂದೆ ಯಾವ್ಯಾವ್ದೋ ಕಂಪನಿ ಕೊಟ್ಟಿರಬಹುದು. ಆದ್ರೆ ಇಂಡಿಯಾದ ಮೂಲೆಮೂಲೆ ರೀಚ್ ಆಗುವಂತೆಇ-ಕಾಮರ್ಸ್ ಬಿಸ್ನೆಸ್ ಮಾಡಿದ್ದು ಫ್ಲಿಪ್ ಕಾರ್ಟ್.ಕಾಮ್..!ಈ ಫ್ಲಿಪ್ ಕಾರ್ಟ್ ಶುರುವಾಗಿ 17 ವರ್ಷ ಆಗಿದೆ. ಆದ್ರೆ ಅದು ಬೆಳೆದ ರೀತಿ ಇದೆಯಲ್ಲ, ಅದು ಮಾತ್ರ ನಿಜಕ್ಕೂ ಅದ್ಭುತ..! ನೊಡನೋಡ್ತಿದ್ದ ಹಾಗೇ ಫ್ಲಿಪ್ಕಾರ್ಟ್ ಜೀವನದ ಒಂದು ಅಂಗ ಅನ್ನೋ ಹಾಗಾಗಿಬಿಡ್ತು..! ಶಾಪಿಂಗ್ ಅಂದ್ರೆ ಮೊದಲು ಕಣ್ಣಮುಂದೆ ಬರೋದೇ ಫ್ಲಿಪ್ ಕಾರ್ಟ್..! ಸಣ್ಣಪುಟ್ಟ ಅಂಗಡಿಯವರೆಲ್ಲಾ ಇವತ್ತು ಫ್ಲಿಪ್ ಕಾರ್ಟ್ ಸೆಲ್ಲರ್ಸ್..! ಪ್ರತಿ ಮೊಬೈಲಲ್ಲಿ ಫ್ಲಿಪ್ ಕಾರ್ಟ್ಅಪ್ಲಿಕೇಶನ್ ಇದ್ದೇ ಇರುತ್ತೆ..! ಶಾಪಿಂಗ್ ಪ್ರಿಯರಿಗಂತೂ ಇದೊಂತರಾ ವರ..! ಹಾಗಾದ್ರೆ ಇಂತಹ ಫ್ಲಿಪ್ ಕಾರ್ಟ್ ಹೇಗೆ ಶುರುವಾಯ್ತು, ಹೇಗೆಲ್ಲಾ ಬೆಳೀತು ಅಂತ ಗೊತ್ತಾಗಬೇಕಲ್ವಾ..?ಲೆಟ್ಸ್ ಹ್ಯಾವ್ ಅ ಲುಕ್..!ಸಚಿನ್ ಬನ್ಸಾಲ್ ಹಾಗೂ ಬಿನ್ನಿ ಬನ್ಸಾಲ್ ಇಬ್ರೂ ಇ-ಕಾಮರ್ಸ್ಕಂಪನಿ ಅಮೆಜಾನ್.ಕಾಮ್ ನಲ್ಲಿ ಕೆಲಸ ಮಾಡ್ತಿದ್ರು.. ಆದ್ರೆ ಅವರಿಗೆ ಅದ್ಯಾಕೋ ಇನ್ನೊಂದು ಕಂಪನಿಯಲ್ಲಿ ಕೆಲಸ ಮಡೋದು ಸರಿಕಾಣಲಿಲ್ಲ..! ನಾವೇ ಇಂತದ್ದೊಂದು ಬಿಸ್ನೆಸ್ ಶುರು ಮಾಡಿದ್ರೆ ಹೆಂಗೆ ಅಂತ ಯೋಚನೆ ಮಾಡಿದ್ರು..! ಈ ವಿಷಯ ಯಾರ ಹತ್ತಿರ ಹೇಳಿದ್ರೂ ಸಹ ` ಇವರಿಗೇನೋ ಹುಚ್ಚು ಹಿಡಿದಿರಬೇಕು’ಅನ್ನೋ ತರ ಮಾತಾಡ್ತಿದ್ರಂತೆ..! ಅಮೇಜಾನ್ ಅಷ್ಟು ದೊಡ್ಡ ಕಂಪನಿ, ಅದರ ಜೊತೆಗೆ ಇವರ ಫೈಟಾ ಅಂತ ಕಿಚಾಯಿಸೋರಂತೆ..! ಆದ್ರೆ ಇವರಿಬ್ಬರೂ ಡಿಸೈಡ್ ಮಾಡಿಬಿಟ್ಟಿದ್ರು..! ಆಗಿದ್ದಾಗ್ಲಿ ಅಂತ ಅಮೇಜಾನ್ ನಲ್ಲಿ ಬರ್ತಿದ್ದ ಕೈತುಂಬ ಸಂಬಳದ ಕೆಲಸಕ್ಕೆ ರಾಜೀನಾಮೆ ಕೊಟ್ಟೇಬಿಟ್ರು..! ಅದು 2007ರ ಸಮಯ, ಕೆಲಸ ಬಿಟ್ಟವರೇ ಫ್ಲಿಪ್ ಕಾರ್ಟ್ ಕಂಪನಿಶುರುಮಾಡಿದ್ರು..! ಮೊದಲು ಅವರು ಫ್ಲಿಪ್ ಕಾರ್ಟಲ್ಲಿ ಮಾರೋಕೆ ಶುರು ಮಡಿದ್ದು ಪುಸ್ತಕಗಳನ್ನು..! ಬುಕ್ ಶಾಪ್ ಗಳಿಗೆ ಹೋಗಿ, ಸಣ್ಣ ಸಣ್ಣ ಬುಕ್ಸ್ ಡೀಲರ್ ಗಳನ್ನು ಮಾತಾಡಿಸಿ ಅವರ ಪುಸ್ತಕಗಳನ್ನು ಫ್ಲಿಪ್ ಕಾರ್ಟ್ ಮೂಲಕ ಮಾರಟಮಾಡುವಂತೆ ಕೇಳಿಕೊಳ್ತಿದ್ರು..! ಬೆಂಗಳೂರಿನ ಬುಕ್ ಶಾಪ್ ಎದುರಿಗೆ ಇದೇ ಸಚಿನ್ ಹಾಗೂ ಬಿನ್ನಿ ನಿಂತು ಪುಸ್ತಕ ತಗೊಂಡುಹೋಗೋರಿಗೆ ಫ್ಲಿಪ್ ಕಾರ್ಟ್ ಲೋಗೋ ಇರೋ ಬುಕ್ ಮಾರ್ಕೆಟ್ ಗೆ ಕೊಡ್ತಾ ಇದ್ರು..! ಅವರಿಗೆ ಏನೋ ಒಂದು ಗ್ಯಾರಂಟಿ ಇತ್ತು, ನಾವೇನೋ ಮಾಡೇ ಮಾಡ್ತೀವಿ ಅಂತ..!ಹೀಗೇ ಒಂದು ವರ್ಷ ಕಳೆಯೋದ್ರೊಳಗೆ ಫ್ಲಿಪ್ ಕಾರ್ಟ್ ಪುಸ್ತಕ ಕೊಳ್ಳುವವರ ಫೇವರೇಟ್ ಆಗಿತ್ತು. 2009ರಲ್ಲಿ ಅಸೆಲ್ ಪಾಟ್ರ್ನರ್ ಅನ್ನೋ ಕಂಪನಿ ಫ್ಲಿಪ್ ಕಾರ್ಟ್ ಕಂಪನಿಗೆ ಒಂದು ಮಿಲಿಯನ್ ಡಾಲರ್ ಇನ್ವೆಸ್ಟ್ ಮಾಡ್ತು..! ಅಲ್ಲಿಂದ ಫ್ಲಿಪ್ ಕಾರ್ಟ್ ತಿರುಗಿ ನೋಡಲೇ ಇಲ್ಲ..! ಆನ್ ಲೈನಲ್ಲಿ ಫ್ಲಿಪ್ ಕಾರ್ಟ್ ಹೆಸರು ಮಾಡ್ತು! ಪುಸ್ತಕ ಮಾತ್ರವಲ್ಲದೇ ಆನ್ ಲೈನಲ್ಲಿ ಬೇರೆ ಬೇರೆ ಪ್ರಾಡಕ್ಟ್ ಸಹ ಸೇಲ್ ಮಾಡೋಕೆ ಶುರು ಮಾಡಿತ್ತು ಫ್ಲಿಪ್ ಕಾರ್ಟ್..! ಆ ಕಾಲಕ್ಕೆ ಭಾರತೀಯರ ಮನಸ್ಥಿತಿ ಡಿಫರೆಂಟ್ ಆಗಿತ್ತು.. ಯಾವುದೇ ವಸ್ತು ತಗೊಳೋಕೆ ಮುಂಚೆ ಅದನ್ನು 20 ಸಲ ತಿರುಗಾಮುರುಗಾ ನೋಡೋ ಜನ ಆನ್ ಲೈನ್ ಶಾಪಿಂಗ್ ಮಾಡ್ತಾರಾ ಅನ್ನೋ ಭಯದಲ್ಲೇ ಆರಂಭವಾದ ಫ್ಲಿಪ್ ಕಾರ್ಟ್, ಇಂಡಿಯಾದಲ್ಲೊಂದು ಕ್ರಾಂತಿ ಮಾಡಿತ್ತು..!ಜನ ಆನ್ ಲೈನ್ ಪೇಮೆಂಟ್ ಮಡೋಕೆ ಹೆದರ್ತಾರೆ ಅಂತ ಗೊತ್ತಾದಾಗಕ್ಯಾಶ್ ಆನ್ ಡೆಲಿವರಿ ಅನ್ನೋ ಪ್ಲ್ಯಾನ್ ಮಾಡ್ತು..! ಅದು ಸೂಪರ್ ಡ್ಯೂಪರ್ ಹಿಟ್ ಆಯ್ತು..! ಜನ ಫ್ಲಿಪ್ ಕಾರ್ಟ್ ಅಂದ್ರೆ ಭರವಸೆ ಅನ್ನೋ ಹಾಗಾಯ್ತು..! ಶಾಪಿಂಗ್ ಮಡೋಕೆ ಸಾಪಿಂಗ್ ಮಾಲಿಗ್ಯಾಕೆ ಹೋಗಬೇಕು, ಫ್ಲಿಪ್ ಕಾರ್ಟ್ ಇದಿಯಲ್ಲಅನ್ನೋ ಮಾತುಗಳು ಕೇಳಿಬಂತು..! ಶಾಪಿಂಗ್ ಮಾಲ್ ಗಳಲ್ಲಿ ಹಾಗೂ ಮಳಿಗೆಗಳಲ್ಲಿ ಸಿಗೋದಕ್ಕಿಂತ ಒಳ್ಳೇ ಬೆಲೆಗೆ ಆನ್ ಲೈನಲ್ಲೇ ಸಿಕ್ಕಿದ್ರೆ ಯಾರು ಬೇಡ ಅಂತಾರೆ..? ಅದರಲ್ಲೂ ಹೋಮ್ ಡೆಲಿವರಿ..! ಜನ ಇಷ್ಟಪಟ್ಟು ಶಾಪಿಂಗ್ ಶುರು ಮಾಡಿದ್ರು..! ಫ್ರೀ ಇದ್ದಾಗ್ಲೆಲ್ಲ ಪ್ಲಿಪ್ ಕಾರ್ಟ್ ವೆಬ್ ಸೈಟ್ ಹಾಗೂ ಅಪ್ಲಿಕೇಶನ್ ಜೊತೆ ಕಾಲ ಕಳೆಯೋಕೆ ಶುರುಮಾಡಿದ್ರು..! ಬುಕ್ ರಿಟೇಲರ್ಸ್ ಆಗಿ ಶುರುವಾಗಿದ್ದ ಫ್ಲಿಪ್ ಕಾರ್ಟ ನೋಡ್ತಿದ್ದ ಹಾಗೇ ಮಲ್ಟಿಮಿಲಿಯನೇರ್ ಕಂಪನಿಯಾಗಿತ್ತು…!ಸಚಿನ್ ಹಾಗೂ ಬಿನ್ನಿ ಬನ್ಸಾಲ್ ಯೋಚನೇನೇ ಮಾಡಿರಲಿಲ್ಲ, ಇಂತದ್ದೊಂದು ಸಕ್ಸಸ್ ನಮಗೆ ಸಿಗಬಹುದು ಅಂತ..! ಆದ್ರೆ ಅವರ ಶ್ರಮ ಮತ್ತು ಪಟ್ಟಕಷ್ಟದ ಅರಿವು ಅವರಿಗಿತ್ತು..! ಲಕ್ಷ ಸಮಬಳ ಕೊಡ್ತಿದ್ದ ಕಂಪನಿ ಬಿಟ್ಟುಬಂದು , ರಸ್ತೆಯಲ್ಲಿ ನಿಂತು ಬುಕ್ ಹಂಚೋದು ಅಷ್ಟು ಸುಲಭದ ಮಾತಲ್ಲ.. ಸೆಕ್ಯೂರ್ಡ್ಲೈಫ್ ಅಂತ ಮಾತಾಡೋ ಯುವಕರ ನಡುವೆ ಇಂತಹ ನಿರ್ಧಾರ ತಗೊಳೋಕೆ ಸಖತ್ ಗುಂಡಿಗೆ ಬೇಕು..! ಆ ಗುಂಡಿಗೆ ಅವರಿಬ್ಬರಿಗೂ ಇತ್ತು.ಎಲ್ಲಕ್ಕಿಂತ ಹೆಚ್ಚಾಗಿ ಬಿಟ್ಟುಬಂದ ಕಂಪನಿಗೆ ಸವಾಲ್ ಹಾಕಿ ಆ ಕಂಪನಿಯನ್ನೇ ಹಿಂದೆ ಹಾಕೋದು ಅಂದ್ರೆ ತಮಾಷೇನಾ..? ಅದರಲ್ಲೂ ಅಮೇಜಾನ್ ನಂತಹ ಇಂಟರ್ ನ್ಯಾಶನಲ್ ಕಂಪನಿಯ ಎದುರು ಗೆಲ್ಲೋದು..! ಕಷ್ಟ ಅನ್ಕೊಂಡಿದ್ರೆ ಸಾಧ್ಯ ಇರಲಿಲ್ಲವೇನೋ, ಆದ್ರೆ ಮಾಡ್ತೀವಿ ಅನ್ನೋ ಛಲ ಅವರ ಟಾರ್ಗೇಟ್ ರೀಚ್ ಮಾಡಿಸಿತ್ತು..! ಬರೀ ವೆಬ್ ಸೈಟಲ್ಲೇ ಶಾಪಿಂಗ್ ಮಡೋದು ಕಷ್ಟಅಂತ ಅನಿಸಿದಾಗ ಮೊಬೈಲ್ ಆ್ಯಪ್ ಲಾಂಚ್ ಮಾಡಿತ್ತು ಫ್ಲಿಪ್ ಕಾರ್ಟ್..! ಅಲ್ಲಿಂದ ಅವರ ಬಿಸ್ನೆಸ್ ವನ್ ಟು ಡಬ್ಬಲ್ ಆಗಿಹೋಯ್ತು..! ಜನ ಫ್ಲಿಪ್ ಕಾರ್ಟ್ ಗೆ ಅಡಿಕ್ಟ್ ಆಗಿಬಿಟ್ರು..! ಇವತ್ತು ಫ್ಲಿಪ್ ಕಾರ್ಟ್ ಅನ್ನೋ ಕಂಪನಿಯ ಬ್ರ್ಯಾಂಡ್ ವ್ಯಾಲ್ಯೂ ಅದರ ಬಿಸ್ನೆಸ್ ಗಿಂತ ದೊಡ್ಡದಾಗಿದೆ..! 2014ರಲ್ಲಿ 300 ಮಿಲಿಯನ್ ಡಾಲರ್ ಮೊತ್ತ ಕೊಟ್ಟು ಮೈಂತ್ರಾ.ಕಾಮ್ ಸಹ ಕೊಂಡುಕೊಳ್ತು ಫ್ಲಿಪ್ ಕಾರ್ಟ್..! ಇವತ್ತು ಮನೆಯಲ್ಲೇ ಕೂತು ಬಟ್ಟೆಬರೆ, ಮೊಬೈಲು, ಟಿವಿ, ಕುಕ್ಕರ್, ಸ್ಟವ್, ಲ್ಯಾಪ್ ಟಾಪ್ ಏನುಬೇಕಾದ್ರೂ ಆರ್ಡರ್ ಮಾಡಿ, ನಿಮ್ಮ ಮನೆಗೇ ಡೆಲಿವರಿ ಕೊಡುತ್ತೆ ಫ್ಲಿಪ್ ಕಾರ್ಟ್..! ಗಂಗಾರಾಮ್ ಬುಕ್ ಶಾಪ್ ಎದುರು ನಿಂತಿದ್ದ ಹುಡುಗರು ಇವತ್ತು ಇಂಟರ್ ನ್ಯಾಶನಲ್ ಬಿಸ್ನೆಸ್ ಕಾನ್ಫರೆನ್ಸ್ ವೇದಿಕೆಯಲ್ಲಿ ನಿಲ್ತಿದ್ದಾರೆ..! ಅವರನ್ನು ನೋಡಿ ಇಡೀ ಜಗತ್ತು ಬೆರಗಾಗಿದೆ. ಪ್ರತಿದಿನ ಲಕ್ಷಾಂತರ ಭಾರತೀಯರು ಪ್ರತಿದಿನ ಕೋಟ್ಯಾಂತರ ರೂಪಾಯಿ ಮೌಲ್ಯದ ಶಾಪಿಂಗ್ ಮಾಡ್ತಿದ್ದಾರೆ..! ಪ್ಲಿಪ್ ಕಾರ್ಟ್ ಮಾಡಿರೋ ಸಾಧನೆಗೆ ಸಲಾಂ… ಸಚಿನ್ ಹಾಗೂ ಬಿನ್ನಿ ಬನ್ಸಾಲ್ ಸಾಧನೆಗೆ ಕೋಟಿ ಸಲಾಂ..!

ಕೃಪೆ:ಶರೀಪ್ ಕಡಿವಾಲ್

No comments:

Post a Comment

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು