ಕಥೆ-451
ನಿಶ್ಚಿಂತೆ
ಇಬ್ಬರು ಸೋದರರು ವ್ಯಾಪಾರಕ್ಕೆಂದು ಹೊರಟಿದ್ದರು. ಅವರ ವಾಹನ ಎರಡು ಕತ್ತೆಗಳು. ಕೆಲವು ದಿನ ವ್ಯಾಪಾರ ಮಾಡಿ ಅಪಾರ ಸಂಪತ್ತಿನೊಂದಿಗೆ ತಮ್ಮ ಗ್ರಾಮದತ್ತ ನಡೆದಿದ್ದರು. ಸಂಪತ್ತನ್ನೆಲ್ಲ ಗಂಟು ಕಟ್ಟಿ ಕತ್ತೆಗಳ ಮೇಲೆ ಹೇರಿದ್ದರು. ಮಾರ್ಗ ಮಧ್ಯದಲ್ಲಿ ಆಯಾಸವಾಗಿ ಒಂದು ಮರದಡಿ ಮಲಗಿದರು. ಗಂಟುಗಳನ್ನು ಹತ್ತಿರದಲ್ಲಿ ಇಟ್ಟುಕೊಂಡಿದ್ದರು. ಕತ್ತೆಗಳು ಅಲ್ಲಿಯೇ ಮೇಯುತ್ತಲಿದ್ದವು. ಅಣ್ಣನಿಗೆ ಮೊದಲು ಎಚ್ಚರವಾಯಿತು ತಮ್ಮನು ಇನ್ನೂ ಗಾಢ ನಿದ್ರೆಯಲ್ಲಿದ್ದ. ತಕ್ಷಣ ಅಣ್ಣನಿಗೆ ಏನೋ ಹೊಳೆಯಿತು. ತಮ್ಮನ ಗಂಟಿನಲ್ಲಿದ್ದ ಒಂದಿಷ್ಟು ಹಣವನ್ನು ಎತ್ತಿಕೊಳ್ಳಲು ತೊಡಗಿದ. ಅಷ್ಟರಲ್ಲಿ ತಮ್ಮನಿಗೆ ಎಚ್ಚರಿಕೆಯಾಯಿತು. ಅಣ್ಣನು ಸಂಪತ್ತು ಕದಿಯುತ್ತಿರುವುದನ್ನು ಕಂಡು ಕುಪಿತನಾದ. ಒಡ ಹುಟ್ಟಿದ ಅಣ್ಣ ತಮ್ಮರೆಂಬುದನ್ನು ಮರೆತು ಇಬ್ಬರೂ ಬಡಿದಾಡಿ ಅಸುನೀಗಿದರು.
ಕತ್ತೆಗಳು ಮಾತ್ರ ನಿರ್ಲಿಪ್ತವಾಗಿ ಒಣಗಿದ ಹುಲ್ಲು ಕಡ್ಡಿಗಳನ್ನು ಮೇಯುತ್ತಿದ್ದವು. ಮರದ ಮೇಲಿದ್ದ ಗಿಳಿಯು ಕತ್ತೆಗಳಿಗೆ ಕೇಳಿತು - "ನಿಮ್ಮ ಮಾಲಿಕರು ಹಣಕ್ಕಾಗಿ ಪರಸ್ಪರ ಬಡಿದಾಡಿ ಮಡಿದರೂ ನೀವು ನಿಶ್ಚಿಂತರಾಗಿರುವಿರಲ್ಲ ಹೇಗೆ ?" ಕತ್ತೆಗಳು ಹೇಳಿದವು "ಏಕೆಂದರೆ ನಾವು ಬುದ್ಧಿಹೀನ ಪ್ರಾಣಿಗಳು? ಅದಕ್ಕೆ ನಾವು ನಿಶ್ಚಿಂತರು ! ಮನುಷ್ಯ ಪ್ರಾಣಿ ಬಹಳ ಬುದ್ಧಿವಂತ, ಆದ್ದರಿಂದ ಅವನು ಹಾಗೆ ಸಂಪತ್ತಿಗಾಗಿ ಬಡಿದಾಡಿ ಪ್ರಾಣ ಕಳೆದುಕೊಳ್ಳುತ್ತಾನೆ. ಕೃಪೆ :ನೆಟ್.
No comments:
Post a Comment