ಕಥೆ-464
ಇದು ಹೇಗೆ ಸಾಧ್ಯ ?
https://basapurs.blogspot.com
ಒಂದು ಕಪ್ಪೆ ಅತಿ ಉದ್ದದ ಒಂದು ಮರದ ತುದಿಯನ್ನು ಏರಲು ನಿರ್ದರಿಸಿತು.
ಅದು ಮರ ಹತ್ತಲು ಶುರು ಮಾಡಿತು. ಅಲ್ಲೇ ಇದ್ದ ಸಾವಿರಾರು ಕಪ್ಪೆಗಳು ಕೂಗಲು ಶುರು ಮಾಡಿದವು, *" ಇದು ಅಸಾದ್ಯ ಆಗಲ್ಲ ನಿನ್ನಲ್ಲಿ, ಇದು ಅಸಾದ್ಯ ನಿನ್ನಿಂದ " ಅಂತ.*
ಆದರು ಆ ಕಪ್ಪೆ ಮರವನ್ನು ಹತ್ತೋದು ನಿಲ್ಲಿಸಲೇ ಇಲ್ಲ. ಎಲ್ಲ ಕಪ್ಪೆಗಳು ಆಗಲ್ಲ ಆಗಲ್ಲ ಅಂತಿದ್ದರು ಉಳಿದ ಕಪ್ಪೆಗಳನ್ನು ನೋಡುತ್ತಾ ಆ ಕಪ್ಪೆ ಮರದ ತುದಿ ಹತ್ತೇ ಬಿಟ್ಟಿತು.
*ಇದು ಹೇಗೆ ಸಾಧ್ಯ ?*
ಯಾಕಂದರೆ ಆ ಕಪ್ಪೆಯು ಕಿವುಡ ಆಗಿತ್ತು... ಮತ್ತು ಅದು ಉಳಿದ ಕಪ್ಪೆಗಳನ್ನು ನೋಡಿ ಯೋಚಿಸುತ್ತಿತ್ತು ಉಳಿದ ಎಲ್ಲ ಕಪ್ಪೆಗಳು ತನಗೆ ಕಿರುಚಿ ಪ್ರೋತ್ಸಾಹಿಸುತ್ತಿವೆ ಎಂದು....
ನಮ್ಮನ್ನು ಕಡೆಗಣಿಸುವ, ನಮ್ಮಿಂದ ಆಗಲ್ಲ, ನಮ್ಮ ಬಗ್ಗೆ ಕೆಟ್ಟದ್ದು ಹೇಳೋರ ಎದುರು ನಾವು ಕಿವುಡರಂತೆ ಇರಬೇಕು ಮತ್ತು ಅವರು ನಮ್ಮ ಮೇಲಿಟ್ಟ ನಗೆಟಿವ್ ಅನ್ನು ಪೊಸಿಟಿವ್ ಆಗಿ ಬದಲಾಯಿಸಿ ಉತ್ತರ ನೀಡಬೇಕು..💐💐
No comments:
Post a Comment