ಕಥೆ-487
ಓದುವ ಕೆಲಸ ಪ್ರೀತಿಯಿಂದ ತುಂಬಿರಲಿ.
ಸುಮತಿ ಆಂಟಿ ಮನೆಯ ಬಾಗಿಲು ತೆಗೆದು ನೋಡಿದ್ರು, ಗೇಟಿನ ಬಳಿ ಮೂರು ಜನ ವಯಸ್ಸಾದವ್ರು ನಿಂತಿದ್ರು, ಅವರ ವಯಸ್ಸು ಎಪ್ಪತ್ತು ದಾಟಿರಬಹುದು. ಬಿಸಿಲಿನಲ್ಲಿ ನಿಂತಿರುವುದನ್ನು ನೋಡಿ,
"ಯಾರು ನೀವು, ಮನೆ ಒಳಗೆ ಬನ್ನಿ" ಎಂದರು ಸುಮತಿ ಆಂಟಿ.
ಮೂರು ಜನ ವಯೋವೃಧ್ಧರು ಒಂದೇ ಪ್ರಶ್ನೆ ಕೇಳಿದ್ರು, "ನಿಮ್ಮ ಯಜಮಾನ್ರು ಮನೇಲಿ ಇದ್ದಾರಾ ?"
"ಇಲ್ಲ, ಆಫೀಸಿಗೆ ಹೋಗಿದ್ದಾರೆ" ಎಂದರು ಸುಮತಿ ಆಂಟಿ.
"ಹಾಗಿದ್ರೆ ನಿಮ್ಮ ಯಜಮಾನ್ರು ಬಂದ ಮೇಲೆ ನಮ್ಮನ್ನು ಕರೆಯಿರಿ, ಇಲ್ಲೇ ಮರದ ಅಡಿಯಲ್ಲಿ ಇರ್ತೇವೆ" ಎಂದರು ತ್ರಿಮೂರ್ತಿಗಳು.
ಆಯ್ತು ಎಂದು ಮನೆಯೊಳಗೆ ಹೋದ್ರು ಸುಮತಿ ಆಂಟಿ.
ಸಂಜೆ ಆಫೀಸಿಂದ ಬಂದ ಗಂಡನಿಗೆ ಈ ವಿಷಯ ತಿಳಿಸಿ, ವೃಧ್ಧರ ಬಳಿ ನಡೆದ್ರು ಸುಮತಿ ಆಂಟಿ.
"ನಮ್ಮ ಯಜಮಾನ್ರು ಬಂದಿದ್ದಾರೆ, ಈಗ ಬನ್ನಿ"ಎಂದು ಹೇಳಿದ್ರು.
ಆದ್ರೆ ತ್ರಿಮೂರ್ತಿಯಲ್ಲಿ ಒಬ್ರು ಹೇಳಿದ್ರು,
"ನನ್ನ ಹೆಸರು ಪ್ರೀತಿ, ಅವನ ಹೆಸರು ಯಶಸ್ಸು ಮತ್ತು ಕೊನೆಯವನು ಸಂಪತ್ತು, ನಮ್ಮಲ್ಲಿ ನಿಮ್ಮ ಮನೆಗೆ ಒಬ್ಬ ಮಾತ್ರ ಬರಲು ಸಾಧ್ಯ, ನಿನ್ನ ಗಂಡನ ಬಳಿ ಕೇಳಿ ಬಾ ಯಾರು ಬರಬೇಕು ಎಂದು".
ಸುಮತಿ ಆಂಟಿ ಮನೆಗೆ ಬಂದು ಅವರ ಗಂಡನ ಬಳಿ ಹೇಳಿದಾಗ,
"ಸಂಪತ್ತು ಬರಲಿ" ಎಂದು ಥಟ್ಟನೆ ಹೇಳಿದ್ರು ಸುಮತಿ ಆಂಟಿ ಅವ್ರ ಅರ್ಧಾಂಗಿ. "ಬೇಡ, ಯಶಸ್ಸು ಬರಲಿ" ಎಂದು ಸುಮತಿ ಆಂಟಿ.
ಇವರ ಮಗು ಈ ಸಂಭಾಷಣೆ ಕೇಳಿ, "ನಮ್ಮ ಮನೆಗೆ ಪ್ರೀತಿ ಬರಲಿ" ಎಂದು ಹೇಳಿತು.
ಸುಮತಿ ಆಂಟಿ ಮತ್ತು ಅವರ ಗಂಡ ಒಪ್ಪಿದ್ರು.
ಗೇಟಿನ ಬಳಿ ಹೋಗಿ, "ನಿಮ್ಮಲ್ಲಿ ಪ್ರೀತಿ ಯಾರು, ಒಳಗೆ ಬನ್ನಿ" ಎಂದರು ಸುಮತಿ ಆಂಟಿ.
ಪ್ರೀತಿ ಮೆಲ್ಲನೆ ನಡೆದು ಬಂದಾಗ, ಯಶಸ್ಸು ಮತ್ತು ಸಂಪತ್ತು ಅವರನ್ನು ಹಿಂಬಾಲಿಸಿತು.
ಇದನ್ನು ನೋಡಿ ಸುಮತಿ ಆಂಟಿ ಹೇಳಿದ್ರು, "ನಾನು ಪ್ರೀತಿಯನ್ನು ಮಾತ್ರ ಕರೆದಿದ್ದು".
ಆಗ ಪ್ರೀತಿ ಹೇಳಿತು, "ನೀವು ಪ್ರೀತಿಯಿಂದ ಏನು ಬೇಕಾದ್ರೂ ಗೆಲ್ಲಬಹುದು. ಆದ್ರೆ ನೀವು ಎಲ್ಲಿಯಾದ್ರು ಯಶಸ್ಸು ಅಥವಾ ಸಂಪತ್ತನ್ನು ಕರೆದಿದ್ರೆ ನಿಮಗೆ ಕೇವಲ ಅದು ಸಿಗುತ್ತಿತ್ತು.
ನಾವು ಕೇವಲ ಸಂಪತ್ತು, ಯಶಸ್ಸಿನ ಬೆನ್ನ ಹಿಂದೆ ಹತ್ತಿ ಪ್ರೀತಿಯನ್ನ ಕೈಚಲುತ್ತಿದ್ದೇವೆ, ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದ ಪರಿಸ್ಥಿತಿ ನಿರ್ಮಾಣ ಮಾಡಿಕೊಳ್ಳುತ್ತಿದ್ದೇವೆ.. ಇದರಿಂದ ದೂರವಾಗುವವು ಸಂಪತ್ತು ಯಶಸ್ಸು.. ಆದ್ದರಿಂದ ಯಾವುದೇ ಕೆಲಸವನ್ನು ಪ್ರೀತಿಪೂರ್ವಕವಾಗಿ ಮಾಡಿದ್ದೆ ಆದರೆ ನಾವು ಆ ಕಾಯಕದಲ್ಲಿ ಯಶಸ್ಸನ್ನು ಪಡೆದುಕೊಳ್ಳುತ್ತೇವೆ ಅದರಿಂದ ಸಂಪತ್ತು ತಾನಾಗೇ ಬರುತ್ತದೆ. ಆದ್ದರಿಂದ ಯಾವುದೇ ಕೆಲಸ ಮೇಲಲ್ಲ ಕೀಳಲ್ಲ.. ನಾವು ಮಾಡುವ ಕೆಲಸ ಪ್ರೀತಿಯಿಂದ ಕೂಡಿದ್ದರೆ ಅದು ಶ್ರೇಷ್ಠವಾಗಿರುತ್ತದೆ... ಮಕ್ಕಳೇ ಓದುವ ಕೆಲಸ ಪ್ರೀತಿಯಿಂದ ತುಂಬಿರಲಿ. ಮುಂದೆ ನೀವು ಮಾಡುವ ಕೆಲಸವನ್ನು ಪ್ರೀತಿಯಿಂದ ಮಾಡಿ..👍
ಈಗ ನೀವೇ ಯೋಚಿಸಿ ನಿಮಗೆ ಯಾರು ಬೇಕು ಎಂದು?
ಪ್ರೀತಿ, ಸಂಪತ್ತು ಮತ್ತು ಯಶಸ್ಸು..
💐💐💐💐💐
No comments:
Post a Comment