ಕಥೆ-496
ಒಲಂಪಿಕ್ಸ್ ಪದಕ ಗೆದ್ದಷ್ಟೇ ಖುಷಿ
ಈ ವರ್ಷ ಮುಧೋಳ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ ಏರ್ಪಟ್ಟಿದ್ದು ಸಂಕನೂರು ಗ್ರಾಮದಲ್ಲಿ ಮೊದಲ ದಿನ ಕ್ರೀಡಾಕೂಟಗಳು ಸುಸೂತ್ರವಾಗಿ ನಡೆದಿದ್ದವು. ಆದರೆ ಬಾಲಕರ ಕಬಡ್ಡಿ ಫೈನಲ್ ಪಂದ್ಯ ರೋಚಕದಿಂದ ಕೂಡಿತ್ತು. ಏಕೆಂದರೆ ಫೈನಲ್ ಪಂದ್ಯ ಇದ್ದದ್ದು ಹಿರೇಮ್ಯಾಗೇರಿ ವರ್ಸಸ್ ಸಂಕನೂರು. ಈ ಫೈನಲ್ ಪಂದ್ಯ ಮೊದಲ ದಿನವೇ ಮುಗಿದು ಹೋಗಬೇಕಿತ್ತು. ಸಮಸ್ಯೆ ಬಂದಿರೋದು ಕ್ರೀಡಾಪಟುಗಳನ್ನು ತೂಕ ಮಾಡದಿರುವುದರಿಂದ. ತೂಕ ಮಾಡದೆ ಆಟ ಆಡಿಸಬೇಕೆಂಬುದು ಸಂಕನೂರ ಅವರ ಒತ್ತಾಯ ಆದರೆ ತೂಕ ಮಾಡಿಸಿ ಆಟ ಆಡಿಸಬೇಕೆಂಬುದು ಹಿರಿಮ್ಯಾಗೇರಿಯ ಪರವಾಗಿ ನಮ್ಮ ಟೀಮ್ ಮ್ಯಾನೇಜರ್ ಆದ ಶ್ರೀ ನಿಂಗಪ್ಪ ಶೇಗುಣಿಸಿ ಅವರ ಒತ್ತಾಯ. ಸಂಕನೂರವರು ಎಷ್ಟೇ ಒತ್ತಡ ಹಾಕಿದರೂ ತೂಕ ಮಾಡಿದರೆ ಮಾತ್ರ ಆಡಿಸೋದು, ನಿಯಮನುಸಾರ ಆಡಿಸಬೇಕೆಂಬುದು ನಮ್ಮ ಟೀಮ್ ಮ್ಯಾನೇಜರ್ ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಸೋಲು ಗೆಲುವು ಸಹಜ. ತೂಕ ಮಾಡಿ ಆಡಿಸಿದ್ರೆ ಅವತ್ತೇ ಆಟ ಮುಗಿದುಹೋಗ್ತಿತ್ತು. ಆದರೆ ಸಂಕನೂರಿನವರು ಒಪ್ಪಲೇ ಇಲ್ಲ..ಆಟವನ್ನು ಮರುದಿನಕ್ಕೆ ಮುಂದೂಡಿದರು. ಕ್ರೀಡಾಕೂಟವನ್ನು ಪ್ರಾಯೋಜನೆ ಮಾಡಿದವರು ನಾವೇ ಗೆಲ್ಲಬೇಕೆನ್ನುವ ಮನಸ್ಥಿತಿ ಹೊಂದಿರಬಾರದು. ಅನುಕೂಲಕ್ಕೆ ತಕ್ಕಂತೆ ಆಟ ಬದಲಾಯಿಸಬಹುದು, ನಾವೇ ಕ್ರೀಡಾಕೂಟದ ಪ್ರಾಯೋಜಕರು ಎಂಬ ಅಹಂ ಭಾವನೆ ಇರಬಾರದು.
ಮರುದಿನ ಬೇಗನೆ ಆರಂಭವಾಗಬೇಕಿದ್ದ ಆಟ, ಸಂಜೆ ಆಗಲಿಕ್ಕೆ ಬಂದರೂ ಸಂಕನೂರ ಟೀಮ್ ಅಂಕಣಕ್ಕೆ ಬರುತ್ತಿಲ್ಲ. ಕೊನೆಗೆ ನಮ್ಮ ಟೀಮ್ ಮ್ಯಾನೇಜರ್ ತಾಲೂಕ ಆಡಳಿತ ಗಮನಕ್ಕೆ ತಂದಾಗ ಅನಿವಾರ್ಯವಾಯಿತು. ಮುದ್ದಾಮ್ PSI ಬರಲೇಬೇಕಾತು. ಏಕೋ ಏನೋ ಇತ್ತೀಚಿಗೆ ವಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಜಗಳವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ, ಈ ರೀತಿ ಆದರೆ ಆಟ ಆಡಿಸಲು ನಿರ್ಣಾಯಕರಾಗಿ ಯಾರೂ ಮುಂದೆ ಬರುವುದಿಲ್ಲ... ಪೊಲೀಸ್ ಬಂದೋಬಸ್ತು, ವ್ಯಾನ್ ತರಿಸಿ ಆಟ ಆಡುವ ಸ್ಥಿತಿ ಬರಬಾರದು.
ಸಂಜೆವರೆಗೆ ಕಾಯಿಸಿದ ಸಂಕನೂರ ಟೀಮ್ ಕೊನೆಗೂ ತೂಕ ಮಾಡಲು ಅನಿವಾರ್ಯ ಒಪ್ಪಿಕೊಳ್ಳಲೇಬೇಕಾತು. ಸಂಕನೂರ ಟೀಮ್ ನ ಒಬ್ಬ ಕ್ರೀಡಾಪಟು 500 ಗ್ರಾಂ ಹೆಚ್ಚು ತೂಕ ಹೊಂದಿದ್ದ ಕಾರಣ ಆಟದಿಂದ ಹೊರ ಉಳಿಯಬೇಕಾಯಿತು. ಈ ಘಟನೆ ಇತ್ತೀಚಿಗೆ ಒಲಂಪಿಕ್ಸ್ ನಲ್ಲಿ ನಮ್ಮ ಭಾರತದ ಕ್ರೀಡಾಪಟು ವಿನೇಶ್ ಪೋಗಟರನ್ನು ನೆನಪು ಮಾಡಿತು. ಅವರು ಕೇವಲ 100 ಗ್ರಾಂ ಹೆಚ್ಚು ತೂಕ ಹೊಂದಿದ್ದರಿಂದ ಫೈನಲ್ ನಲ್ಲಿ ಅನರ್ಹಗೊಂಡಿದ್ದರು.. ನಾವು ನಿಯಮಗಳಿಗೆ ಬದ್ಧರಾಗಿರೋದು ಅಷ್ಟೇ ಮುಖ್ಯ. ನಾವು ಕ್ರೀಡಾ ಸ್ಪೂರ್ತಿಯನ್ನು ಮೆರೆಯಲೇಬೇಕು,
ಪ್ರೊ ಕಬಡ್ಡಿ ಆಟ ಈಗೀಗ ಶುರುವಾಗಿದೆ, ಆದರೆ ವಿಶೇಷವಾಗಿ ಹಿರೇಮ್ಯಾಗೇರಿಯಲ್ಲಿ ಪ್ರೊ ಕಬಡ್ಡಿ ಗಳಂತಹ ಆಟಗಳನ್ನು ರಾಜ್ಯಮಟ್ಟದ ಹೊನಲು ಬೆಳಕಿನಲ್ಲಿ, ನಡೆಸಿಕೊಟ್ಟ ಹೆಗ್ಗಳಿಕೆ ಇದೆ...
ಮ್ಯಾಗೇರಿ ಹೆಸರು
ಕಬಡ್ಡಿ ಉಸಿರು ಎನ್ನುವ ಸ್ಥಿತಿ ನಿರ್ಮಾಣವಾಗಿದೆ...
ನಮ್ಮ ಹಿರಿಯ ಶಿಕ್ಷಕರು ಹೇಳ್ತಾ ಇದ್ರು "ಹಿರೇಮಾಗೇರಿಯಲ್ಲಿ ಹುಟ್ಟೋ ಮಗು ಕೂಡ ಕಬಡ್ಡಿ ಕಬಡ್ಡಿ ಅಂತ ಹುಟ್ಟುತ್ತೆ"
ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಗಿಡದಂತೆ, ಅದ್ಭುತ ಪ್ರತಿಭೆಗಳು ಹಿರೇಮ್ಯಾಗೇರಿಯಲ್ಲಿವೆ. ಅದನ್ನು ವೃತ್ತಿಪರತೆ ಹೊಂದಿ ರಾಷ್ಟ್ರಮಟ್ಟದಲ್ಲಿ ಮಿಂಚಬೇಕಾಗಿತ್ತು.. ಈಗಿನ ಪ್ರೊ ಕಬಡ್ಡಿಯಲ್ಲಿ ಆಡಬೇಕಾದ ಪ್ರತಿಭೆಗಳು, ಅತ್ತ ಪ್ರಯತ್ನಿಸದೆ, ಇತ್ತ ಓದಿನ ಕಡೆ ಗಮನ ಕೊಡದೆ ಅನೇಕ ಪ್ರತಿಭೆಗಳು ಬೆಳಕಿಗೆ ಬಂದಿಲ್ಲ. ಕ್ರೀಡೆಗಿಂತ ಓದಿನಿಂದ ಸಿಗುವ ಅವಕಾಶಗಳು ಹೆಚ್ಚು.. ಕ್ರೀಡೆಯ ಜೊತೆಗೆ ಓದಿನಲ್ಲೂ ಸಾಧನೆ ಮಾಡುವಂತಾಗಬೇಕು.
ಕೊನೆಗೆ ಫೈನಲ್ ಪಂದ್ಯ ಪಿಎಸ್ಐ ಬಂದೋ ಬಸ್ತ್ ನಲ್ಲಿ ನಡೆಯಿತು, ಸಂಕನೂರ ತಂಡ ಮುನ್ನಡೆಯನ್ನು ಕಾಯ್ದುಕೊಂಡಿತ್ತು, ನಂತರ ಹಿರೇಮ್ಯಾಗೇರಿಯ ತಂಡದ ಉತ್ತಮ ರೈಡರ್ ಮಂಜು ಕಲ್ಗುಡಿ, ಆಕಾಶ ಮಾಡ್ಲಗೇರಿ, ಮತ್ತು ತಂಡದ ಸದಸ್ಯರಿಂದ ಆಟ ತಿರುವನ್ನು ಪಡೆದುಕೊಂಡಿತು. ಕೊನೆಗೆ ಫೈನಲ್ ಪಂದ್ಯವನ್ನ ಹಿರಿಮ್ಯಾಗೇರಿ ಗೆದ್ದು ಬೀಗಿತು..
ಕರೋನ ನಂತರದ ದಿನಗಳಲ್ಲಿ ವಲಯ ಮಟ್ಟದಲ್ಲಿ ಕಬಡ್ಡಿಯಲ್ಲಿ ವಿಜೇತರಾಗಲು ಸಾಧ್ಯವಾಗಿದ್ದಿಲ್ಲ.
ಆದರೆ ಈ ಕ್ಷಣವು ನಮ್ಮ ಹಿರೇಮ್ಯಾಗೇರಿಗೆ ಒಲಂಪಿಕ್ಸ್ ನಲ್ಲಿ ಪದಕ ಪಡೆದಷ್ಟು ಸಂತಸವಾಗಿತ್ತು. ಈ ಕ್ಷಣ ನಿಜಕ್ಕೂ ಬಹಳ ದಿನಗಳ ಕಾಲ ನೆನಪು ಉಳಿಯುವಂತದ್ದು.
ಅತ್ಯುತ್ತಮ ಟೀಮ್ ಮ್ಯಾನೇಜರ್ ಆಗಿ ಕಾರ್ಯನಿರ್ಸಿದ್ದ ಶ್ರೀ ನಿಂಗಪ್ಪ ಶೇಗುಣಸಿ ಶಿಕ್ಷಕರು ಅಭಿನಂದನಾರ್ಹರು. ಇದಕ್ಕೆ ಬೆನ್ನೆಲುಬಾಗಿ ನಿಂತವರು ಮುಖ್ಯೋಪಾಧ್ಯಾಯರಾದ ಶ್ರೀ ಮುಕುಂದ ಭಗವತಿ ಶಿಕ್ಷಕರು ಮತ್ತು ನಮ್ಮ ಸಿಬ್ಬಂದಿ ಬಳಗ & SDMC. ಇದಕ್ಕೆ ಸಹಕಾರ ನೀಡಿದ ಹಳೆ ವಿದ್ಯಾರ್ಥಿಗಳು ಮತ್ತು ಕ್ರೀಡಾ ಪ್ರೇಮಿಗಳಿಗೆ ಧನ್ಯವಾದಗಳು.. ಮುಧೋಳ ವಲಯ ಮಟ್ಟದಲ್ಲಿ ವಿಜೇತರಾದ ನಮ್ಮ ಹಿರೇಮ್ಯಾಗೇರಿ ಪ್ರೌಢಶಾಲೆಯ ಬಾಲಕರ ಕಬಡ್ಡಿ ತಂಡಕ್ಕೆ, ಬಾಲಕಿಯರ ವಾಲಿಬಾಲ್ ತಂಡಕ್ಕೆ, ವೈಯಕ್ತಿಕ ಆಟೋಟಗಳಲ್ಲಿ ವಿಜೇತರಾದವರಿಗೆ ಶಾಲೆ ಪರವಾಗಿ ಅಭಿನಂದನೆಗಳು..💐💐💐💐
By:Shankargouda Basapur
AM
GHS HIREMYAGERI
No comments:
Post a Comment