https://www.facebook.com/share/p/QTwDojfG5iyYnemW/?mibextid=qi2Omg
ಕಥೆ-532
ಅವಶ್ಯ ತಾಳ್ಮೆ ನಮ್ಮಲ್ಲಿಲ್ಲ
ಪುಟ್ಟ ಹುಡ್ಗಿ ತನ್ನ ಎರಡು ಕೈಯಲ್ಲಿ ಎರಡು ಸೇಬುಗಳನ್ನು ಹಿಡಿದುಕೊಂಡಿದ್ದಳು.
ಅವಳ ಅಮ್ಮ ಒಳಗಿಂದ ಬಂದು ನಗುತ್ತಾ ಕೇಳಿದಳು — ಹೇ ಪುಟ್ಟಾ, ನಿನ್ನ ಅಮ್ಮಂಗೆ ನಿನ್ನ ಕೈಲಿರುವ ಒಂದು ಸೇಬನ್ನು ಕೊಡುತ್ತೀಯಾ?
ಪುಟಾಣಿ ತಲೆ ಎತ್ತಿ ಕೆಲವು ಸೆಕೆಂಡುಗಳ ಕಾಲ ಅಮ್ಮನ ಮುಖವನ್ನು ನೋಡಿದಳು. ಆಮೇಲೆ ತಕ್ಷಣ ಒಂದು ಸೇಬನ್ನು ತನ್ನ ಪುಟ್ಟ ಬಾಯಿಯಿಂದ ಕಚ್ಚಿ ತಿಂದಳು. ಅದಾದ ಮೇಲೆ ಇನ್ನೊಂದು ಸೇಬನ್ನು ಕಚ್ಚಿ ತಿಂದಳು.
ಅದನ್ನು ನೋಡುತ್ತಿದ್ದ ಅಮ್ಮನ ಮುಖ ಸಣ್ಣದಾಯಿತು. ಆದರೆ ತನ್ನ ನಿರಾಶೆಯನ್ನು ತೋರಿಸಬಾರದೆಂದು ಕಷ್ಟ ಪಟ್ಟು ನಗುವನ್ನು ತನ್ನ ಮುಖದಲ್ಲಿ ಉಳಿಸಿಕೊಂಡಳು.
ಆಗ ಪುಟಾಣಿ ಒಂದು ಸೇಬನ್ನು ಅಮ್ಮನ ಕೈಗಿಡುತ್ತಾ ಹೇಳಿತು —ಅಮ್ಮಾ ತಗೋ ಈ ಸೇಬು. ಇದು ತುಂಬಾ ಸಿಹಿ ಇದೆ, ತಿನ್ನು...
ಅಮ್ಮನ ಕಣ್ಣಲ್ಲಿ ನೀರು ಬಂತು.ಎಷ್ಟೇ ದೊಡ್ಡವರಾದರೂ, ಎಷ್ಟೇ ತಿಳ್ಕೊಂಡಿದ್ರೂ ಅವಸರದ ನಿರ್ಧಾರ ಒಳ್ಳೇದಲ್ಲಾ, ಎದುರಿಗಿರುವವರು ಹೇಳಿದ್ದನ್ನು ಕೇಳುವಷ್ಟು ತಾಳ್ಮೆ ನಮಗಿರುವುದಿಲ್ಲ. ಅದನ್ನು ಬೆಳೆಸಿಕೊಳ್ಳಬೇಕಿದೆ..
ಕೃಪೆ: ನೆಟ್
No comments:
Post a Comment