ಕಥೆ-511
ರಾಜನ ಮೂಡನಂಬಿಕೆ
ಒಬ್ಬ ರಾಜ ದಿನ ಬೆಳಿಗ್ಗೆ ಎದ್ದು ಸೂರ್ಯನನ್ನು ನೋಡುವುದು ರೂಡಿ, ಹಾಗೆ ನೋಡಿದಾಗ ಅಂದಿನ ದಿನವೆಲ್ಲ ತನ್ನ ಜೀವನದಲ್ಲಿ ಒಳ್ಳೆಯದೆ ನಡೆಯುವುದು ಎಂಬುದು ಆ ರಾಜನ ನಂಬಿಕೆ.
ಅಂದುಕೊಂಡ ಹಾಗೆ ಎಲ್ಲವು ಒಳ್ಳೆಯದೆ ನಡೆಯುತಿತ್ತು ಹೀಗಿರುವಾಗ ಒಂದು ದಿನ ರಾಜ ಸೂರ್ಯ ನಮಸ್ಕಾರ ಮಾಡಲು ಹೊರಗೆ ಬಂದಾಗ ಒಬ್ಬ ಬಿಕ್ಷುಕ ಅಡ್ಡ ಬರುತ್ತಾನೆ ಆ ರಾಜ ಅಂದಿನ ದಿನ ಬಿಕ್ಷುಕನನ್ನು ನೋಡುತ್ತಾನೆ ಹೀಗೆ ನೋಡಿ ಆ ರಾಜ ಹಿಂತಿರುಗುವಾಗ ಕಾಲು ಜಾರಿ ಕೆಳಗೆ ಬೀಳುತ್ತಾನೆ ತಲೆಗೆ ಪೆಟ್ಟಾಗಿ ರಕ್ತ ಸುರಿಯುತ್ತದೆ ಹೀಗೆಲ್ಲ ಆಗುವುದೆಂದು ಆ ರಾಜ ಎಂದಿಗೂ ಉಹಿಸಿರಲಿಲ್ಲ ಈ ಅನಾಹುತಕ್ಕೆಲ್ಲ ಆ ಬಿಕ್ಷುಕನೇ ಕಾರಣ ಎಂದು ಆ ಬಿಕ್ಷುಕನನ್ನು ತಂದು ಗಲ್ಲಿಗೇರಿಸಲು ಆಜ್ಞೆ ನೀಡುತ್ತಾನೆ. ರಾಜನ ಆಜ್ಞೆಯಂತೆಯೆ ಆ ಬಿಕ್ಷುಕನನ್ನು ಕರೆತಂದು ಗಲ್ಲಿಗೇರಿಸಲು ಸಿದ್ದತೆ ಮಾಡುತ್ತಾರೆ. ಗಲ್ಲಿಗೇರಿಸೊ ಕೊನೆಯ ಸಮಯದಲ್ಲಿ ಆ ಬಿಕ್ಷುಕ ರಾಜನನ್ನು ನೋಡಿ ನಗುತ್ತಾನೆ ಇದು ಆ ರಾಜನಿಗೆ ಆಶ್ಚರ್ಯವನ್ನು ಮೂಡಿಸಿತು.
ಆ ರಾಜ ಬಿಕ್ಷುಕನನ್ನು ಕೇಳಿದ ಇಂದು ನಿನ್ನನ್ನು ಗಲ್ಲಿಗೇರಿಸುತಿದ್ದೇನೆ ನಿನಗೆ ಸ್ವಲ್ಪವಾದರೂ ದುಃಖ ಆಗಲಿ ಬೇಜಾರು ಆಗಲಿ ಇದು ಯಾವುದು ನಿನ್ನ ಮುಖದಲ್ಲಿ ಕಾಣಿಸುತ್ತಿಲ್ಲವಲ್ಲ ಯಾಕೆ ಎಂದು ಪ್ರಶ್ನಿಸಿದನು.
ಅದಕ್ಕೆ ಆ ಬಿಕ್ಷುಕ ಹೇಳಿದ ಇಂದು ನೀವು ನನ್ನ ಮುಖ ನೋಡಿದ್ದರಿಂದ ನಿಮ್ಮ ತಲೆಗೆ ಮಾತ್ರ ಪೆಟ್ಟಾಯಿತು. ಆದರೆ ನಾನು ನಿಮ್ಮ ಮುಖ ನೋಡಿದ್ದರಿಂದ ಇಂದು ನಾನು ಗಲ್ಲಿಗೇರುತಿದ್ದೇನೆ ಎಂದು ಹೇಳಿದನು. ಅಂದು ಆ ಬಿಕ್ಷುಕನ ಮಾತು, ಮೂಡನಂಬಿಕೆಯಿಂದ ಮುಚ್ಚಿದ ರಾಜನ ಕಣ್ಣು ತೆರೆಸಿತು.
ಯಾರ ಮುಖ ನೋಡುವುದರಿಂದ ಏನಾಗುತ್ತದೆ. ಈಗಲೂ ಎಷ್ಟೋ ಜನ ಬೆಳಿಗ್ಗೆ ಎದ್ದು ಇಂಥವರ ಮುಖ ನೋಡಬಾರದು, ಅಂತವರ ಮುಖ ನೋಡಬಾರದು ಎನ್ನುತ್ತಾರೆ, ಯಾರ ಮುಖದಲ್ಲಿ ಏನು ಇಲ್ಲ. ನಮಗಾಗುವ ತೊಂದರೆಗೆ ನಾವೇ ಕಾರಣ.. ನಮಗಾಗುವ ಒಳ್ಳೆಯದಕ್ಕೂ ನಾವೇ ಕಾರಣ.. ಮೂಡನಂಬಿಕೆಯಿಂದ ಹೊರ ಬಂದಾಗ ಮಾತ್ರ ನಿಜವೂ ತಿಳಿಯುವುದು...
ಕೃಪೆ : ರೋಹಿತ್ ಗೌಡ.
No comments:
Post a Comment