ಕಥೆ-550
ಸೋಮಾರಿತನ ನಮ್ಮ ಶತ್ರು
ಒಬ್ಬ ಯುವ ವಿದ್ಯಾರ್ಥಿ ಯಾವಾಗಲೂ ಮನೆಯಲ್ಲಿ ಮಲಗುತ್ತಿದ್ದ. ಅವನಿಗೆ ಯಾವುದರ ಚಿಂತೆಯೂ ಇರಲಿಲ್ಲ. ಹಸಿವಾದಾಗ ಎದ್ದು ಒಂದಷ್ಟು ತಿಂದು ಮತ್ತೆ ಮಲಗೋದಷ್ಟೆ. ಒಮ್ಮೆ ಅವನ ತಂದೆಗೆ ಅವನ ವರ್ತನೆಯಿಂದ ಕಿರಿಕಿರಿ ತಡೆಯಲಾಗಲಿಲ್ಲ, ನೀನು ಹೀಗೆ ಮಲಗಿದ್ದರೇ ಓದೋದು ಹೇಗೆ ಮುಂದೆ ಪರೀಕ್ಷೆ ಹೇಗೆ ಬರೆಯುತ್ತೀಯಾ?
ಓದಿ ಏನ್ ಮಾಡಬೇಕು ? ಪರೀಕ್ಷೆ ಬರೆದು ಏನ್ ಮಾಡಬೇಕು ? ಅಂತಾನೆ
ಹಿಂಗಾದ್ರು ಮುಂದೆ ಜೀವನ ಹ್ಯಾಂಗ ನಡೆಸುತ್ತಿ? ಎಂದು ಕೂಗಾಡಿದ.
ಜೀವನ ಮಾಡಿ ಏನ್ ಮಾಡಬೇಕು? ಅಂತಾನೆ
ಆಗ ಅಪ್ಪ, ಇಷ್ಟು ದಿನ ನಿನ್ನನ್ನು ಮಗ ಎಂದು ಮುದ್ದಿಸಿದ್ದು ನನ್ನದೇ ತಪ್ಪು. ಇವತ್ತಿಂದ ಎದ್ದು ಹೊಲಕ್ಕೆ ಹೋಗು ಅಂದ.
ಜಮೀನಿಗೆ ಹೋಗಿ ಏನು ಮಾಡಬೇಕು? ಅಂತಾನೆ..
ಇವತ್ತು ಒಂದು ಅಥವಾ ಎರಡು ಮಕ್ಕಳನ್ನು ಹೊಂದಿರುವ ಬಹಳಷ್ಟು ಪಾಲಕರ ಪರಿಸ್ಥಿತಿ ಇದು.. ಇತ್ತ ಓದಿ ಉದ್ಯೋಗ ಪಡೆಯದೇ, ಅತ್ತ ಸಾಂಪ್ರದಾಯಿಕ ಕೃಷಿ/ಇತರೆ ಕೆಲಸಕ್ಕೂ ಬಾರದೆ, ಸಾಕಷ್ಟು ಉದ್ಯೋಗಗಳಿದ್ದರೂ ನಿರುದ್ಯೋಗಿಯಾಗಿ, ದಂಡಪಿಂಡಗಳಾಗಿ, ಬೆಳೆಯುತ್ತಿರುವುದು ಆತಂಕಕಾರಿ ವಿಷಯ. ಮಕ್ಕಳನ್ನು ಮುದ್ದಾಗಿ ಬೆಳೆಸುವುದರಿಂದ ಸೋಮಾರಿಗಳಾಗಿ ಬೆಳೆಯುತ್ತಿವೆ..
ಚಿಕ್ಕಂದಿನಲ್ಲಿ ನಾವು ಮಕ್ಕಳಿಗೆ ಅವರ ಕರ್ತವ್ಯ ಪ್ರಜ್ಞೆ, ಕಷ್ಟದ ಅನುಭವ, ಮೌಲ್ಯಗಳನ್ನು ಬೆಳೆಸಲೇಬೇಕಿದೆ.. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ?..
ಇವತ್ತು ಮಕ್ಕಳು ಸಹ ಅರಿತುಕೊಳ್ಳಬೇಕಾದುದೇನೆಂದರೆ ಮನುಷ್ಯನ ಶತ್ರು ಹೊರಗಿನವನಲ್ಲ, ನಮ್ಮೊಳಗಿನ ಸೋಮಾರಿತನವೇ ನಮ್ಮ ಶತ್ರು. ಮನುಷ್ಯ ಸದಾ ಉತ್ಸಾಹ, ಕ್ರಿಯಾಶೀಲನಾಗಿರಬೇಕು. ಏನಾದರೂ ಕೆಲಸ ಮಾಡುತ್ತಲೇ ಇರಬೇಕು. ಆಗ ನಾವು ಶಾಂತಿ ಮತ್ತು ಸಂತೋಷವನ್ನು ಪಡೆಯುತ್ತೇವೆ. ಆ ಕೆಲಸದಿಂದ ನಮಗೆ ಯಶಸ್ಸು ಸಿಗುತ್ತದೆ, ಏನೂ ಮಾಡದೆ ಸುಮ್ಮನೆ ಕುಳಿತರೆ ಸೋಮಾರಿತನವೇ ಬೆನ್ನೆಲುಬಾಗಿ ನಿಲ್ಲುತ್ತದೆ. ಕೊನೆಗೆ ಜೀವನ ದುಸ್ತರವಾಗುತ್ತದೆ. ಸೋಮಾರಿತನ ಬಿಟ್ಟು, ನಮ್ಮ ಪ್ರಯತ್ನದಿಂದ ಪರಮಾತ್ಮನನ್ನು(ಯಶಸ್ಸು) ಕಾಣಬೇಕು..
Shankargouda Basapur
No comments:
Post a Comment