ಕಥೆ-582
ನಾವು ನಂಬಿದ್ದೆಲ್ಲ ಸತ್ಯವಲ್ಲ...
ನಾನೂ ಸೇರಿದಂತೆ ಬಹಳಷ್ಟು ಜನರ ಸಮಸ್ಯೆ ಏನು ಗೊತ್ತಾ? ನಾವು ಯಾವುದೋ ಒಂದು ವಿಚಾರವನ್ನು ನಂಬಿರುತ್ತೇವೆ ಮತ್ತು ಅದಕ್ಕೆ ಜೀವನಪೂರ್ತಿ ಅಂಟಿಕೊಂಡಿರುತ್ತೇವೆ. ನಮ್ಮ ದೃಷ್ಟಿಕೋನ ಮತ್ತು ನಂಬಿಕೆಗಳಿಗೆ ಪೂರಕವಾದ ಸಾಕ್ಷ್ಯಗಳನ್ನು ಇಟ್ಟುಕೊಂಡು, ನಾವು ನಂಬಿದ್ದೇ ಸತ್ಯ ಎಂದು ಭಾವಿಸಿರುತ್ತೇವೆ. ಯಾರಾದರೂ ಅದು ಸುಳ್ಳು ಅಥವಾ ತಪ್ಪು ಎಂದರೆ ನಮ್ಮಿಂದ ಸಹಿಸಲು ಸಾಧ್ಯವಿಲ್ಲ. ನಮ್ಮಂತೆಯೇ ಯೋಚಿಸುವವರನ್ನು ಒಟ್ಟು ಮಾಡಿಕೊಂಡು ಯುದ್ಧ ಮಾಡುತ್ತೇವೆ. ನಮಗಿಂಥ ಬೇರೆ ಯೋಚಿಸುವವರನ್ನು ಧಿಕ್ಕರಿಸುತ್ತೇವೆ. ಇನ್ನೊಂದು ಸಾಧ್ಯತೆ ಇದೆ ಎಂಬುದನ್ನೇ ನಾವು ಯೋಚಿಸುವುದಕ್ಕೆ ಹೋಗುವುದಿಲ್ಲ.
ಈ ರೀತಿಯೇ ಸರಿ ಇಲ್ಲ ಎಂದು ಗಟ್ಟಿಯಾಗಿ ನಂಬುವುದು ನಮ್ಮ ತಪ್ಪು....
ನಾವು ಯಾವತ್ತೂ ಒಂದು ವಿಷಯದ ದೃಷ್ಟಿಕೋನ ಬದಲಾಯಿಸಿಕೊಳ್ಳಬೇಕು. ತಪ್ಪಾದರೂ ನಾವು ನಂಬಿದ್ದೇ ಸರಿ ಎನ್ನುವುದಕ್ಕಿಂತ, ಸತ್ಯ ಏನು ಎಂಬುದನ್ನು ಒಪ್ಪಿಕೊಳ್ಳಬೇಕು. ಹಾಗಾದಾಗಲಷ್ಟೇ ಜೀವನದಲ್ಲಿ ಏನಾದರು ಸಾಧನೆ ಮಾಡುವುದಕ್ಕೆ ಸಾಧ್ಯ. ಬರೀ ಸಾಧನೆ ಮಾಡುವುದಷ್ಟೇ ಅಲ್ಲ, ಸ್ನೇಹ-ಸೌಹಾರ್ದಯುತವಾಗಿ ಬದುಕಬೇಕೆಂದರೆ ನಾವು ಹಠ ಸಾಧಿಸಬಾರದು.....
-ಪ್ರಕಾಶ ಅಯ್ಯರ್
No comments:
Post a Comment